Thursday, October 16, 2025

Latest Posts

ಶ್ರೀರಂಗಪಟ್ಟಣಕ್ಕೆ ಚಾಲೆಂಜಿಂಗ್ ಸ್ಟಾರ್ ಎಂಟ್ರಿ, ಸಚ್ಚಿದಾನಂದ್‌ಗೆ ಸಾಥ್ ಕೊಟ್ಟ ದರ್ಶನ್ ..

- Advertisement -

ಮಂಡ್ಯ: ಜೆಡಿಎಸ್ ಭದ್ರಕೋಟೆಯಾಗಿರುವ ಮಂಡ್ಯದ ಶ್ರೀರಂಗಪಟ್ಟಣಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಲಿಟ್ಟಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಹವಾ ಜೋರಾಗಿದ್ದು, ಸಾವಿರಾರು ಬೆಂಬಲಿಗರೊಂದಿಗೆ ಇಲ್ಲಿನ ಬಿಜೆಪಿ ಅಭ್ಯರ್ಥಿಯಾಗಿರುವ ಇಂಡವಾಳು ಸಚ್ಚಿದಾನಂದ, ಶ್ರೀರಂಗಪಟ್ಟಣದ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಸಚ್ಚಿದಾನಂದಗೆ ನಟ ದರ್ಶನ್ ಮತ್ತು ಬಿಜೆಪಿ ಮುಖಂಡರು ಸಾಥ್ ನೀಡಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ಪಟ್ಟಣದ ಮುಖ್ಯ ಬೀದಿಯಲ್ಲಿ ಜಾನಪದ ಕಲಾತಂಡದೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಬಿಜೆಪಿ ಕಾರ್ಯಕರ್ತರು ಕೈಯಲ್ಲಿ ಪಕ್ಷದ ಬಾವುಟ ಹಿಡಿದು, ಜೈಕಾರ ಕೂಗುತ್ತ ಸಾಗಿದರು. ಇನ್ನು ಇಂದು ಸಚ್ಚಿದಾನಂದಗೆ ವಿಶೇಷ ದಿನವಾಗಿದ್ದು, ಅವರ ಹುಟ್ಟು ಹಬ್ಬವಾಗಿದೆ. ಈ ಕಾರಣಕ್ಕೆ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಇನ್ನು ಮೆರವಣಿಗೆ ಸಮಯದಲ್ಲಿ, ರಾಮಪತ್ರ ಸಲ್ಲಿಸುವ ವೇಳೆ ಸಚ್ಚಿದಾನಂದ್‌ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ಕೊಟ್ಟಿದ್ದಾರೆ. ಜೆಡಿಎಸ್ ಭದ್ರಕೋಟೆಯಲ್ಲಿ ಶಕ್ತಿಪ್ರದರ್ಶನ ಮಾಡುವ ಮೂಲಕ ಕಾಂಗ್ರೆಸ್ ಜೆಡಿಎಸ್‌ಗೆ ಸಚ್ಚಿದಾನಂದ ಟಕ್ಕರ್ ಕೊಟ್ಟಿದ್ದಾರೆ.

ಖರ್ಗೆ, ಡಿಕೆಶಿ, ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಶೆಟ್ಟರ್..

‘ಈ ಸರ್ಕಾರ ಸಾರ್ವಜನಿಕ ಉದ್ದಿಮೆ ಖಾಸಗಿಯವರಿಗೆ ಮಾರಿ ಯುವಕರನ್ನು ಬೀದಿಗೆ ತಳ್ಳಿದ್ದಾರೆ’

‘ಈ ಕಾರಣಕ್ಕೇ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಕಾರವೇ ಸಂಸತ್ತನ್ನು ನಡೆಯಲು ಬಿಡಲಿಲ್ಲ’

- Advertisement -

Latest Posts

Don't Miss