‘ಸ್ವರೂಪ್ ಈ ಕ್ಷೇತ್ರದಲ್ಲಿ ಗೆದ್ದೇ ಗೆಲ್ತಾನೆ, ನಾನು ಪರಿಪೂರ್ಣವಾಗಿ ಆಶೀರ್ವಾದ ಮಾಡುತ್ತಿದ್ದೇನೆ’

ಹಾಸನ: ಹಾಸನದಲ್ಲಿಂದು ಜೆಡಿಎಸ್ ಸಭೆ ನಡೆದಿದ್ದು, ಈ ಸಭೆಯಲ್ಲಿ ಒಗ್ಗಟ್ಟು ಪ್ರದರ್ಶನವಾಗಿದೆ. ಭವಾನಿ ರೇವಣ್ಣ, ಸ್ವರೂಪ್‌ರನ್ನ ಪಕ್ಕದಲ್ಲೇ ನಿಲ್ಲಿಸಿಕೊಂಡು ಭಾಷಣ ಮಾಡಿದ್ದಾರೆ. ಈ ವೇಳೆ ಸ್ವರೂಪ್ ಭವಾನಿಯವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.

ಈ ವೇಳೆ ಮಾತನಾಡಿದ ಭವಾನಿ ರೇವಣ್ಣ, ಸ್ವರೂಪ್ ಬೇರೆ ಅಲ್ಲ ನನ್ನ‌ ಮಕ್ಕಳು ಬೇರೆ ಅಲ್ಲ. ಹಿಂದೆ‌ ಇದ್ದ ಎಲ್ಲಾ ವಿಚಾರಗಳನ್ನ ಮರೆಯಬೇಕು. ನಾವು ಕ್ಷೇತ್ರದಲ್ಲಿ ಬಿಜೆಪಿಯನ್ನ ಸೋಲಿಸಬೇಕು . ಇನ್ನು ಇಪ್ಪತ್ತು ದಿನ ಮಾತ್ರ ಚುನಾವಣೆಗೆ ಬಾಕಿ ಇದೆ. ಸ್ವರೂಪ್ ಈ‌ ಕ್ಷೇತ್ರದಲ್ಲಿ ಗೆದ್ದೆ ಗೆಲ್ತಾನೆ.  ನಾನು ಪರಿಪೂರ್ಣವಾಗಿ ಆಶೀರ್ವಾದ ಮಾಡುತ್ತಿದ್ದೇನೆ. ಈ ಬಾರಿ ಸ್ವರೂಪ್‌ರನ್ನ ಗೆಲ್ಲಿಸಲು ನಾವು ರೆಡಿ ಎಂದು ಹೇಳಿ, ಭವಾನಿ ರೇವಣ್ಣ ಸ್ವರೂಪ್ ಕೈ ಹಿಡಿದು ಮೇಲಕ್ಕೆತ್ತಿದ್ದಾರೆ.

‘ಆ ಮೂರು ಜನರನ್ನು ಮುದುರಿ, ಮೂಲೆಗೆ ಹಾಕಿ ನಮ್ಮ ರವಿ ಅಣ್ಣನನ್ನ ಪಕ್ಕಾ ಗೆಲ್ಲಿಸುತ್ತಾರೆ’

ಸಾವಿರಾರು ಕಾರ್ಯಕರ್ತರ ಬೆಂಬಲದೊಂದಿಗೆ ಶಾಸಕ ಎಲ್‌.ಎನ್‌ ನಾರಾಯಣಸ್ವಾಮಿ ನಾಮಪತ್ರ ಸಲ್ಲಿಕೆ

ಶೆಟ್ಟರ್ ಧ್ವಜ ಬದಲಿಸಿದರೆ ವಿಚಾರಧಾರೆ ಬದಲಾದೀತೇ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನೆ..

About The Author