ಹಾವೇರಿ: ಹಾವೇರಿಯಲ್ಲಿಂದು ಸಿಎಂ ಬಸವರಾಜ್ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿರುವ ಬೊಮ್ಮಾಯಿಗೆ ನಟ ಕಿಚ್ಚ ಸುದೀಪ್ ಸೇರಿ, ಹಲವಾರು ರಾಜಕೀಯ ನಾಯಕರು ಸಾಥ್ ನೀಡಿದ್ದಾರೆ.
ಇಂದು ಹಾವೇರಿ ಸವಣೂರಿನಲ್ಲಿ ಬಿಜೆಪಿ ಬೃಹತ್ ಸಮಾವೇಶ ನಡೆದಿದ್ದು, ಇದರಲ್ಲಿ ಸಿಎಂ ಬೊಮ್ಮಾಯಿ, ಕಿಚ್ಚ ಸುದೀಪ್, ಕೇಂದ್ರ ಸಚಿವ ಜಗತ್ ಪ್ರಕಾಶ್ ನಡ್ಡಾ ಸೇರಿ ಹಲವು ಬಿಜೆಪಿ ನಾಯಕರು ಉಪಸ್ಥಿತರಿದ್ದರು. ಅಲ್ಲದೇ ಸಾವಿರಾರು ಮಂದಿ, ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಈ ಬಗ್ಗೆ ಬಸವರಾಜ್ ಬೊಮ್ಮಾಯಿ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಯಾವ ಜನ್ಮದ ಪುಣ್ಯವೋ, ನನಗೆ ಶಿಗ್ಗಾಂವಿ ಸವಣೂರಿನ ಜನತೆಯ ಸೇವೆ ಮಾಡುವ ಅವಕಾಶ 2008ರಲ್ಲಿ ಲಭಿಸಿತು. ಅಂದಿನಿಂದ ಇಂದಿನವರೆಗೂ ನಿರಂತರವಾಗಿ, ನಿರಾತಂಕವಾಗಿ ಅವರ ಸೇವೆಯನ್ನು ಮಾಡುವ ಸೌಭಾಗ್ಯವನ್ನು ಶಿಗ್ಗಾಂವಿ-ಸವಣೂರಿನ ಜನತೆ ನನಗೆ ನೀಡುತ್ತಾ ಬಂದಿದ್ದಾರೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಇಂದು ಆ ನನ್ನ ಪ್ರೀತಿಯ ಜನತೆಯ ಸಮಕ್ಷಮದಲ್ಲಿ ಶಿಗ್ಗಾಂವಿ-ಸವಣೂರಿನ ಭಾಜಪಾ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಶಿಗ್ಗಾಂವಿ-ಸವಣೂರಿನ ಜೊತೆ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿಸುವ ಜವಾಬ್ದಾರಿ ನಮ್ಮ ಮೇಲಿದ್ದು, ಈ ನಾಡಿನ ಜನತೆಯ ಆಶೀರ್ವಾದ ಹಾಗೂ ಸಹಕಾರದಿಂದ ಆ ಮಹತ್ಕಾರ್ಯ ಸಹ ಸಾಂಗವಾಗಿ ನೆರವೇರುತ್ತದೆ ಎಂಬ ವಿಶ್ವಾಸ ನನ್ನಲ್ಲಿದೆ.
ನನ್ನ ತವರು ಶಿಗ್ಗಾಂವಿ-ಸವಣೂರಿನ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸುವ ಮುನ್ನ, ಆಯೋಜಿಸಿದ್ದ ಬೃಹತ್ ರೋಡ್ ಶೋ ನಲ್ಲಿ ಭಾಗಿಯಾದೆನು. ತವರಿನ ಜನರ ಪ್ರೀತಿ, ಅಭಿಮಾನ ಹಾಗೂ ಋಣವನ್ನು ಎಂದೆಂದಿಗೂ ಮರೆಯುವುದಿಲ್ಲ ಎಂದು ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ಕಿಚ್ಚ ಸುದೀಪ್ ಅವರಿಗೂ ಧನ್ಯವಾದ ತಿಳಿಸಿದ್ದಾರೆ.
ಶಿಗ್ಗಾಂವಿ-ಸವಣೂರಿನ ಜನತೆಯ ಸೇವಾಕಾರ್ಯವನ್ನು ಮುಂದುವರೆಸುವ ನಿಟ್ಟಿನಲ್ಲಿ ಇಂದು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದೆನು.
ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @JPNadda, ಆತ್ಮೀಯನಾದ @KicchaSudeep ಹಾಗೂ @GovindKarjol ರವರು ಉಪಸ್ಥಿತರಿದ್ದರು.#BJPYeBharavase pic.twitter.com/GPCw2OLBcW
— Basavaraj S Bommai (@BSBommai) April 19, 2023
ಯಾವ ಜನ್ಮದ ಪುಣ್ಯವೋ, ನನಗೆ ಶಿಗ್ಗಾಂವಿ ಸವಣೂರಿನ ಜನತೆಯ ಸೇವೆ ಮಾಡುವ ಅವಕಾಶ 2008ರಲ್ಲಿ ಲಭಿಸಿತು. ಅಂದಿನಿಂದ ಇಂದಿನವರೆಗೂ ನಿರಂತರವಾಗಿ, ನಿರಾತಂಕವಾಗಿ ಅವರ ಸೇವೆಯನ್ನು ಮಾಡುವ ಸೌಭಾಗ್ಯವನ್ನು ಶಿಗ್ಗಾಂವಿ-ಸವಣೂರಿನ ಜನತೆ ನನಗೆ ನೀಡುತ್ತಾ ಬಂದಿದ್ದಾರೆ.
1/3 pic.twitter.com/Rons9C1zJa— Basavaraj S Bommai (@BSBommai) April 19, 2023
ನನ್ನ ಮನವಿಗೆ ಓಗೊಟ್ಟು, ನನ್ನ ಪರ ಪ್ರಚಾರ ಮಾಡಲು ಬಿಡುವು ಮಾಡಿಕೊಂಡು ಆಗಮಿಸಿ, ನನ್ನ ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಉಪಸ್ಥಿತನಿದ್ದ, ಆತ್ಮೀಯ ಕಿಚ್ಚ ಸುದೀಪನಿಗೆ ನನ್ನ ಮನದಾಳದಿಂದ ಧನ್ಯವಾದಗಳು. https://t.co/597HokQnwR
— Basavaraj S Bommai (@BSBommai) April 19, 2023

