- Advertisement -
ಲಕ್ನೋ: ಮೊನ್ನೆಯಷ್ಟೇ ಕೊಲೆಯಾದ ದರೋಡೆಕೋರ, ಅತೀಕ್ ಅಹಮದ್‌ಗೆ ಭಾರತ ರತ್ನ ಸಿಗಬೇಕು ಎಂದು ಕಾಂಗ್ರೆಸ್ ಮುಖಂಡ, ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷ ಮುಜುಗರಕ್ಕೀಡಾಗಿದ್ದು, ಮುಖಂಡನನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.
ರಾಜಕುಮಾರ್ ಸಿಂಗ್ ಅಲಿಯಾಸ್ ರಜ್ಜು ಭಯ್ಯಾ ಈ ಹೇಳಿಕೆ ನೀಡಿದ ವ್ಯಕ್ತಿಯಾಗಿದ್ದು, ಅತೀಕ್ ಅಹಮದ್ ಹುತಾತ್ಮರಾಗಿದ್ದಾರೆ. ಹಾಗಾಗಿ ಅವರಿಗೆ ಭಾರತ ರತ್ನ ನೀಡಬೇಕು ಎಂದು ಆಗ್ರಹಿಸಿದ್ದರು. ಅಲ್ಲದೇ, ಅವರ ಮೃತದೇಹವನ್ನು ತ್ರಿವರ್ಣ ಧ್ವಜದಲ್ಲಿ ಸುತ್ತಿಡಬೇಕು ಎಂದು ಕೂಡ ಹೇಳಿದ್ದರು. ಹಾಗಾಗಿ ರಾಜಕುಮಾರ್ ಅವರನ್ನು 6 ವರ್ಷ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಪ್ರಯಾಗ್‌ರಾಜ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಪ್ರದೀಪ್ ಕುಮಾರ್ ಮಿಶ್ರಾ ಹೇಳಿದ್ದಾರೆ.
ಕಾಂಗ್ರೆಸ್ 5ನೇ ಪಟ್ಟಿ ರಿಲೀಸ್: ಸಿಎಂ ಕ್ಷೇತ್ರದಲ್ಲಿ ಕ್ಯಾಂಡಿಡೇಟ್ ಬದಲಾವಣೆ..
- Advertisement -