ಉತ್ತರಪ್ರದೇಶ: ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ಗೆ ಜೀವಬೆದರಿಕೆ ಹಾಕಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತನ್ನ ಪ್ರೀತಿಗೆ ಹುಡುಗಿಯ ತಂದೆ ಒಪ್ಪದಿದ್ದ ಕಾರಣಕ್ಕೆ, ಅಪ್ರಾಪ್ತನೋರ್ವ ಈ ಕೃತ್ಯವೆಸಗಿದ್ದಾನೆಂದು ತಿಳಿದು ಬಂದಿದೆ.
ಎಮರ್ಜೆನ್ಸಿ ನಂಬರ್ ಆಗಿರುವ 112ಗೆ ಕರೆ ಮಾಡಿದ ಅಪ್ರಾಪ್ತ, ಯೋಗಿ ಆದಿತ್ಯನಾಥ್‌ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಈ ಸಂದೇಶ ಬಂದ ಬಳಿಕ ಎಚ್ಚೆತ್ತ ಪೊಲೀಸರು, ಈ ಬಗ್ಗೆ ವಿಚಾರಣೆ ನಡೆಸಿದಾಗ, ಈ ಮೊಬೈಲ್ ಸಜ್ಜದ್ ಹುಸೇನ್ ಎಂಬುವರದ್ದು ಎಂದು ತಿಳಿದು ಬಂದಿದೆ. ಅವರನ್ನ ವಿಚಾರಿಸಿದಾಗ, ತಮ್ಮ ಮೊಬೈಲ್ ಕಳೆದು ವಾರವಾಗಿದೆ ಎಂದು ಅವರು ಹೇಳಿದ್ದಾರೆ.
ಮೊಬೈಲ್ ಕದ್ದವರ್ಯಾರು ಎಂದು ಹುಡುಕಿದಾಗ ಅಮೀನ್ ಎಂಬ 18 ವರ್ಷದ ಬಾಲಕ ಈ ಕೆಲಸ ಮಾಡಿದ್ದು ಬೆಳಕಿಗೆ ಬಂದಿದೆ. ಅವನನ್ನು ಬಂಧಿಸಿ ವಿಚಾರಿಸಿ, ನಾನು ಸಜ್ಜದ್ ಅವರ ಮಗಳನ್ನ ಪ್ರೀತಿಸುತ್ತೇನೆ. ಆದರೆ ಅವರು ನಮ್ಮ ಪ್ರೀತಿಯನ್ನು ಒಪ್ಪುತ್ತಿಲ್ಲ. ಹಾಗಾಗಿ ಅವರ ಮೊಬೈಲ್ ಕಳ್ಳತನ ಮಾಡಿ, ಈ ರೀತಿ ಜೀವ ಬೆದರಿಕೆ ಹಾಕಿದ್ದೆ. ಅವರನ್ನು ಜೈಲಿಗೆ ಕಳುಹಿಸಬೇಕೆಂದು ಈ ಕೆಲಸ ಮಾಡಿದೆ ಎಂದು ಅಮೀನ್ ತಪ್ಪೊಪ್ಪಿಕೊಂಡಿದ್ದಾನೆ.
ಪ್ರೀತಿಸಿದವಳನ್ನ ಪಡೆಯಲು ಇಂಥ ಕೃತ್ಯವೆಸಗಿದ ಬಾಲಕನ ಮೇಲೆ ಕಳ್ಳತನ ಮತ್ತು ವಂಚನೆಯ ಆರೋಪದಡಿ, ಜೈಲಿಗೆ ಹಾಕಲಾಗಿದೆ. ಇಂದು ಲಕ್ನೋ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದೇವೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ಮೋದಿ ಅವರ ಟೀಂ ಇಂಡಿಯಾದಲ್ಲಿ ಕರ್ನಾಟಕದ ಗರಿಷ್ಠ ಆಟಗಾರರು ಇರಲಿ: ಯೋಗಿ ಆದಿತ್ಯನಾಥ್