ಹಾಸನ : ಶಾಸಕ ಪ್ರೀತಂಗೌಡ ವಿರುದ್ಧ ಭವಾನಿ ರೇವಣ್ಣ ವಾಗ್ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಶಾಸಕ ಪ್ರೀತಂಗೌಡ ಪ್ರತಿಕ್ರಿಯೆ ನೀಡಿದ್ದು, ಹಾಸನ ಕ್ಷೇತ್ರದ ಮತದಾರರು ತೀರ್ಮಾನ ಮಾಡ್ತಾರೆ . ಪ್ರೀತಂಗೌಡ ಕೆಲಸ ಮಾಡಿದ್ದಾನೆ ಅಂತಾ ಹೇಳಿದ್ರೆ ಆಶೀರ್ವಾದ ಮಾಡ್ತಾರೆ. ಪ್ರೀತಂಗೌಡ ಅಭಿವೃದ್ಧಿ ಮಾಡಿದ್ದಾನೆ ಅಂತಾ ಹೇಳಿದ್ರೆ ನನಗೆ ಆಶೀರ್ವಾದ ಮಾಡ್ತಾರೆ. ಯಾರು ಹತಾಷಾರಾಗಿದ್ದಾರೆ ಅನ್ನೋದನ್ನ ಜನಸಾಮಾನ್ಯರು ನೋಡ್ತಾ ಇದ್ದಾರೆ ಎಂದು ಪ್ರೀತಂಗೌಡ.
10.30ಕ್ಕೆ ರ್ಯಾಲಿ ಶುರುವಾಗಬೇಕಿತ್ತು, ಸಹಸ್ರಾರು ಸಂಖ್ಯೆಯಲ್ಲಿ ಅಂತಾ ಹೇಳಿದ್ರು.12.30 ಆದ್ರೂ ನೂರಾರು ಸಂಖ್ಯೆನೂ ಆಗಲಿಲ್ಲ. ನಾನು ಮಾಡ್ತಾ ಇರೋದು ಒಂದೇ ಒಂದು ವಾರ್ಡ್. ಜನಸಾಮಾನ್ಯರು ಎಷ್ಟು ಜನ ಬರ್ತಾ ಇದ್ದಾರೆ ಅಂತಾ ಕಣ್ಮುಂದೆ ನೋಡಿ. ಇಡೀ ನಗರದಲ್ಲಿ ರ್ಯಾಲಿ ಮಾಡ್ತೀವಿ ಅಂತಾ ಹೇಳಿ ಎಷ್ಟು ಜನ ಬಂದಿದ್ರು ಅಂತಾ ನೋಡಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯ ಸಂದರ್ಭದಲ್ಲಿ ಮತದಾರರು ಯಾರ ಪರ ಇದ್ದಾರೆ ಅನ್ನೋದು ಮುಖ್ಯ ಎಂದು ಪ್ರೀತಂಗೌಡ ಹೇಳಿದ್ದಾರೆ.
ಲೀಡರ್ ನರೇಂದ್ರ ಮೋದಿಯರಿಗೂ ಒಂದೇ ವೋಟು, ಸಿದ್ದರಾಮಯ್ಯ ಸಾಹೇಬ್ರುಗೂ ಒಂದೇ ವೋಟು. ಸಿಎಂ ಬಸವರಾಜ್ ಬೊಮ್ಮಾಯಿ ಸಾಹೇಬ್ರಿಗೂ ಒಂದೇ ವೋಟು. ನಾನೊಬ್ಬ ಸಾಮಾನ್ಯ ಶಾಸಕ ನನಗೂ ಒಂದೇ ವೋಟು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡಾ ಒಂದೇ ವೋಟು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಯಾರ ಪರ ನಿಲ್ತಾರೆ ಅವರು ಜನಪ್ರತಿನಿಧಿಯಾಗ್ತಾರೆ. ಯಾರೋ ಒಬ್ಬರು ಹೇಳಿದ ತಕ್ಷಣ ಜನ ಯಾವ ರೀತಿ ತಗೊಳ್ತಾರೆ ಅನ್ನೋದನ್ನ ಕಾದು ನೋಡೋಣ ಎಂದು ಪ್ರೀತಂಗೌಡ ಹೇಳಿದ್ದಾರೆ.
ಅವರು ಹೇಳ್ತಾ ಇದ್ದಾರೆ, ಹಾಸನ ಬಿಟ್ಟು ಓಡ್ಸೋಕೆ ಹೇಳಿಲ್ಲ ಅಂತಾ ಹೇಳ್ತಾ ಇದ್ದಾರೆ. ಪ್ರಜ್ವಲ್ ಅವರ ಬೈಟ್ ನೋಡಿ, ನನಗೂ ಗೊತ್ತಿರಲಿಲ್ಲ ಗ್ರಾಮಕ್ಕೆ ಹೋದಾಗ ಒಬ್ಬರು ಸೀನಿಯರ್ ಸಿಟಿಜರ್ ಹೇಳಿದ್ರು. ಎಂಪಿಯವರು ಉದ್ವೇಗದಿಂದ ಈ ರೀತಿ ಮಾತಾಡಿದ್ದಾರೆ ಅಂತಾ. ಆ ಮಾತಾಡಿರೋದನ್ನ ಉಲ್ಲೇಖ ಮಾಡಿದ್ದೀನಿ. ಅವರು ಹಾಗೆ ಹೇಳಿಲ್ಲ ಅಂದ್ರೆ ಸಂತೋಷ . ನಿನ್ನೆ ಮತ್ತೆ ನಾವು ಹೇಳಿರಲಿಲ್ಲ, ಈಗ ಹೇಳ್ತಾ ಇದ್ದೀವಿ ಅಂದ್ರೆ ಅವರ ಮಾನಸಿಕತೆ ತೋರಿಸುತ್ತೆ. ಹಿರಿಯರಿದ್ದಾರೆ, ನಾನು ಯಾವುದೇ ಕಾರಣಕ್ಕೂ, ಅವರ ರೀತಿಯಲ್ಲಿ ರಾಜಕೀಯವಾಗಿ ವಿಚಲಿತನಾಗುವುದಿಲ್ಲ ಎಂದು ಪ್ರೀತಂಗೌಡ ಹೇಳಿದ್ದಾರೆ.
ಡಬಲ್ ಇಂಜಿನ್ ಎಂದರೇ ಡಬಲ್ ಅಭಿವೃದ್ಧಿ ಎಂದರ್ಥ : ಪ್ರಧಾನಿ ನರೇಂದ್ರ ಮೋದಿ..