Friday, July 4, 2025

Latest Posts

ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ಗೆ ಬಂಧನದ ಭೀತಿ..

- Advertisement -

ಅಸ್ಸಾಂ ಕಾಂಗ್ರೆಸ್ ಮಹಿಳಾ ಆಯೋಗದ ಅಧ್ಯಕ್ಷೆ ಅಂಕಿತಾ ದತ್ತಾ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ. ಹಾಗಾಗಿ ಅಂಕಿತಾ ದತ್ತಾರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪವಿರುವ ಶ್ರೀನಿವಾಸ್‌ಗೆ ಈಗ ಬಂಧನದ ಭೀತಿ ಎದುರಾಗಿದೆ.

ಅಂಕಿತಾ, ಶ್ರೀನಿವಾಸ್ ತಮಗೆ ಕಿರುಕುಳ ನೀಡಿದ್ದಾರೆ. ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪಿಸಿ, ಅಸ್ಸಾಂನಲ್ಲಿ ಪ್ರಕರಣ ದಾಖಲಿಸಿದ್ದರು. ಗುವಾಹಟಿ ಕೋರ್ಟ್ ಎಫ್‌ಐಆರ್ ರದ್ದುಗೋಳಿಸುವಂತೆ ಕೋರಿದ್ದ ಮನವಿಯನ್ನು ತಿರಸ್ಕರಿಸಿ, ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ನಂತರ ಬೆಂಗಳೂರಿನಲ್ಲೂ ಅರ್ಜಿ ಸಲ್ಲಿಸಿದ್ದರು.

ಈ ಕೇಸ್‌ಗೆ ಸಂಬಂಧಪಟ್ಟಂತೆ ಕೆಲದಿನಗಳ ಹಿಂದೆ ಅಸ್ಸಾಂ ಪೊಲೀಸರು ಬೆಂಗಳೂರಿನಲ್ಲಿರುವ ಶ್ರೀನಿವಾಸ್ ಸಂಬಂಧಿಕರ ಮನೆಗೆ ಬಂದು ನೋಟೀಸ್ ಅಂಟಿಸಿ ಹೋಗಿದ್ದರು. ಇದಾದ ಬಳಿಕ ನಿರೀಕ್ಷಣಾ ಜಾಮೀನು ಕೋರಿ ಶ್ರೀನಿವಾಸ್ ಕೋರ್ಟ್ ಮೊರೆ ಹೋಗಿದ್ದರು. ಬೆಂಗಳೂರಿನ 72ನೇ ಸಿಸಿಎಚ್ ಕೋರ್ಟ್ ವಿಚಾರಣೆ ನಡೆಸಿ, ಶ್ರೀನಿವಾಸ್ ಮನವಿ ತಿರಸ್ಕರಿಸಿ, ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿದೆ.

‘ದಮ್-ತಾಕತ್ ಇದ್ದ ಸಿಎಂ ಅಥವಾ 56 ಇಂಚಿನ ಎದೆಯ ಪ್ರಧಾನಿ ಬರಲಿ, ನಾನು ಚರ್ಚೆಗೆ ಸಿದ್ಧ’

ಪ್ರಚಾರದ ವೇಳೆ ಮಾಜಿ ಡಿಸಿಎಂ ಪರಮೇಶ್ವರ್ ತಲೆಗೆ ಕಲ್ಲಿನೇಟು, ಡಿಕೆಶಿ ಆಕ್ರೋಶ..

‘ಬೈಕ್ ಗಲಾಟೆಗೆ ಬಣ್ಣ ಬಳಿದು, ಆರೋಪ ಮಾಡುತ್ತಿರುವ ಪ್ರತಾಪ್ ಸಿಂಹ ವಿರುದ್ಧ ಕ್ರಮ ಕೈಗೊಳ್ಳಿ’

- Advertisement -

Latest Posts

Don't Miss