ಕೋಲಾರ: ಬಜರಂಗದಳ ನಿಷೇಧ ಕುರಿತ ವಿಚಾರದ ಬಗ್ಗೆ ಡಿ.ಕೆ.ಶಿವಕುಮಾರ್, ಮುಳಬಾಗಿಲಿನಲ್ಲಿ ಪ್ರತಿಕ್ರಿಯೆ ನೀಡಿದ್ದು, ಕಾನೂನು ಸುವ್ಯವಸ್ಥೆಯನ್ನು ಅವರು ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಶಾಂತಿಯನ್ನು ಕದಡಿಸುತ್ತಿದ್ದಾರೆ. ನಾವು ಶಾಂತಿ ಮೂಡಿಸಬೇಕಾಗಿದೆ ಎಂದು ಹೇಳಿದ್ದಾರೆ.
ಅವರು ಯಾವುದೇ ಪಕ್ಷದಲ್ಲಿರಲಿ, ನಮಗೆ ಅಭ್ಯಂತರ ಇಲ್ಲ. ಅನೇಕ ಕಡೆ ಇಂದು ಕಾನೂನಿಗೆ ಭಂಗ ತರುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ನಮ್ಮಲ್ಲಿ ಶಾಂತಿಯ ತೋಟ ನಿರ್ಮಾಣ ಮಾಡಬೇಕಿದೆ ಎಂದು ಹೇಳಿದ್ದಾರೆ.
ಇನ್ನು ಹೆಲಿಕ್ಯಾಪ್ಟರ್‌ಗೆ ಹದ್ದು ಡಿಕ್ಕಿ ಹೊಡೆದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಮುಳಬಾಗಿಲಿಗೆ ಬರಬೇಕಾದ್ರೆ ಜಕ್ಕೂರಿನಲ್ಲಿ ಹೆಲಿಕಾಪ್ಟರ್ ಗೆ ಹದ್ದು ಡಿಕ್ಕಿ ಹೊಡೆದಿದೆ. 8-10 ನಿಮಿಷ ಪ್ರಯಾಣ ಮಾಡಿದ್ದೆ. ಅಷ್ಟರಲ್ಲಿ ದೊಡ್ಡ ಹದ್ದು ಬಂದು ಹೆಲಿಕಾಪ್ಟರ್ ಗೆ ಡಿಕ್ಕಿ ಹೊಡೆಯಿತು .ಹೆಲಿಕಾಪ್ಟರ್ ನ ಗ್ಲಾಸ್ ಎಲ್ಲಾ ಒಡೆದು ಹೋಗಿದೆ. ಬಹಳ ದೊಡ್ಡ ಅನಾಹುತ ಆಗಬೇಕಿತ್ತು. ರಾಜ್ಯದ ಜನರ ಪ್ರೀತಿ ವಿಶ್ವಾಸ ಆರೈಕೆಯಿಂದ ನಾನು ಇಂದು ಜೀವಂತವಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಪೈಲಟ್ ಸಮಯ ಪ್ರಜ್ಞೆಯಿಂದ ತುರ್ತು ಭೂಸ್ಪರ್ಷ ಮಾಡಿದ್ದಾರೆ. ಅಂತಹ ಘಟನೆ ನಡೆದಿದ್ದರೂ ಧೈರ್ಯ ತೆಗೆದುಕೊಂಡು ಬಂದಿದ್ದೇನೆ. ಯಾರೂ ಗಾಬರಿ ಪಡುವಂತಹ ಅವಶ್ಯಕತೆ ಇಲ್ಲ. ಭಗವಂತ ನಮ್ಮ ಕಡೆ ಇದ್ದಾನೆ ಎಂದು ಡಿಕೆಶಿ ಹೇಳಿದ್ದಾರೆ.
ಹಿಂದೂ, ಮುಸಲ್ಮಾನ್ ಮುಖಂಡರನ್ನ ಒಟ್ಟಿಗೆ ಸಭೆ ಕರೆದು ಮಾತನಾಡಿದ ಪ್ರೀತಂ ಆಡಿಯೋ ವೈರಲ್..
ಕಡು ಬಡವರಿಗೆ ಸೂರು, ಮೂಲ ಸೌಕರ್ಯಕ್ಕೆ ವಿಶೇಷ ಆದ್ಯತೆ: ಎಸ್.ಟಿ.ಸೋಮಶೇಖರ್
‘ಭಜರಂಗದಳ, ಪಿಎಫ್ಐ ಎರಡನ್ನೂ ಒಂದೇ ತಕ್ಕಡಿಯಲ್ಲಿ ತೂಗುತ್ತಿದ್ದೀರಿ. ನಿಮ್ಮ ವಿನಾಶ ಕಾದಿದೆ. ‘