ಹಾಸನ: ಹಾಸನದ ಹೇಮಾವತಿ ನಗರದಲ್ಲಿ ಜೆಡಿಎಸ್ ಲೀಡು ಬರಲ್ಲ ಎಂದು ಹೇಳಿದ್ದ ಪ್ರೀತಮ್ ಗೌಡ ಹೇಳಿದ್ದರು. ಆದರೆ ಇಂದು ಹೇಮಾವತಿ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಅವರಿಗೆ ಅದ್ದೂರಿ ಸ್ವಾಗತ ಕೋರಿದ್ದಾರೆ.
ಬಿರುಸಿನ ಪ್ರಚಾರದಲ್ಲಿ ತೊಡಗಿರುವ ಹೆಚ್. ಪಿ ಸ್ವರೂಪ್ ಅವರು ತನ್ನ ತಾಯಿಯೊಂದಿಗೆ ಹೇಮಾವತಿ ನಗರದಲ್ಲಿ ಪ್ರಚಾರದಲ್ಲಿ ತಡಗಿದ್ದಾರೆ. ಇದೇ ವೇಳೆ ಸ್ವರೂಪ್ ಅವರ ತಾಯಿ ಮಾತನಾಡಿ, ನನ್ನ ಪತಿಯೂ ಕೂಡಾ ಶಾಸಕರಾಗಿ ಸಾಕಷ್ಟು ಅಭವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಹಾಗೆಯೇ ನನ್ನ ಮಗನು ಕೂಡ ಹಾಸನದ ಅಭಿವೃದ್ಧಿ ಕೆಲಸ ಮಾಡಲು ನಿಮ್ಮ ಸೇವೆ ಮಾಡಲು ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ನೀಡಿ ಈ ಬಾರಿ ಅವರನ್ನು ಗೆಲ್ಲಿಸಿ ಕೊಡಿ ಎಂದರು.
ಶಾಸಕ ಪ್ರೀತಮ್ ಗೌಡ ಅವರು 50ಸಾವಿರ ಲೀಡ್ ನಲ್ಲಿ ಗೆಲ್ಲುತ್ತೇನೆ ಎಂದು ಶಾಸಕರು ಹೇಳಿದ್ದರು. ಅದರಂತೆಯೇ. ಜೆಡಿಎಸ್ ಪಕ್ಷದ ಸ್ವರೂಪ್ ಅವರು 50 ಸಾವಿರ ಅಂತರದಲ್ಲಿ ಗೆಲ್ಲಿಸುವಂತೆ ಹೇಮಾವತಿ ನಗರದ ಜನತೆಗೆ ಕೈ ಮುಗಿದು ಮನವಿ ಮಾಡುತ್ತಿದ್ದೇನೆ ಎಂದು ಮನವಿ ಮಾಡಿದರು.
ಪ್ರಿಯಾಂಕ್ ಖರ್ಗೆ ಪತ್ನಿಗೆ ಬ್ರೇನ್ ಟ್ಯೂಮರ್: ಸಹೋದರನಿಗೂ ಅನಾರೋಗ್ಯ..