ಬೆಂಗಳೂರು: ರಾಜ್ಯದಲ್ಲಿ ಭಜರಂಗ ದಳ ನಿಷೇಧ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದೇ ಸಂದರ್ಭದಲ್ಲಿ ನಿನ್ನೆ ರಾಜ್ಯ ಪ್ರವಾಸಕ್ಕೆ ಬಂದಿದ್ದ ಪ್ರಧಾನಿ ಮೋದಿ, ಮುಲ್ಕಿ, ಅಂಕೋಲಾ, ಬೈಲಹೊಂಗಲ್‌ನಲ್ಲಿ ಭಾಷಣ ಮಾಡುವಾಗ, ಬಜರಂಗಬಲಿಕೀ ಜೈ ಎಂಬ ಘೋಷಣೆಯೊಂದಿಗೆ ತಮ್ಮ ಭಾಷಣ ಶುರುಮಾಡಿದರು. ಈ ಮೂಲಕ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಆದರೆ ನೀವು ಇಲ್ಲಿನ ಭಜರಂಗಿಗಳ ಒಲೈಕೆ ಬಿಡಿ, ನಿಜವಾದ ಭಜರಂಗಿಯ ಅಳಲು ಕೇಳಿ ಎಂದು ರಾಜ್ಯ ಕಾಾಂಗ್ರೆಸ್ ಟ್ವೀಟ್ ಮಾಡುವ ಮೂಲಕ, ಮೋದಿಯವರಿಗೆ ತಿರುಗೇಟು ನೀಡಿದೆ.
ದೆಹಲಿಯಲ್ಲಿ ತಮಗಾದ ಶೋಷಣೆಯ ವಿರುದ್ಧ ಕ್ರೀಡಾಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕುಸ್ತಿಪಟುಗಳಾದ ಭಜರಂಗ ಪುನಿಯಾ, ವಿನೇಶ್ ಫೋಗಟ್, ರವಿ ದಹಿಯಾ, ಸಾಕ್ಷಿ ಮಲೀಕ್ ಸೇರಿ ಹಲವು ಕ್ರೀಡಾಪಟುಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಇವರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಇವರ ಪ್ರತಿಭಟನೆಗೆ ನ್ಯಾಯ ಸಿಗಲಿಲ್ಲೆಂಬ ಆರೋಪವಿದೆ. ಹಾಗಾಗಿ ಇವರ ನೋವನ್ನು ಆಲಿಸಿ, ಎಂದು ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ, ಮೋದಿ ವಿರುದ್ಧ ಗುಡುಗಿದೆ.
ನಿಜವಾದ ಭಜರಂಗಿಗಳು (ಕ್ರೀಡಾಪಟುಗಳು) ದೆಹಲಿಯ ಜಂತರ್ ಮಂಥರ್‌ನಲ್ಲಿ ತಮಗಾದ ಶೋಷಣೆಯ ನೋವು ತಾಳದೆ ಪ್ರತಿಭಟಿಸುತ್ತಿದ್ದಾರೆ. ನರೇಂದ್ರ ಮೋದಿ ಅವರೇ, ಇಲ್ಲಿನ ನಕಲಿ ಭಜರಂಗಿಗಳ ಓಲೈಕೆ ಬಿಟ್ಟು ಅಸಲಿ ಭಜರಂಗಿಗಳ ನೋವು ಆಲಿಸಿ. ಅಲ್ಲೂ “ಬಜರಂಗಿ ಪುನಿಯಾ” ಎಂಬ ಹೆಸರಿನ ಕ್ರೀಡಾಪಟು ನೋವಿನಲ್ಲಿದ್ದಾರೆ. ನಿಮಗೆ ಆ ಅಸಲಿ ಬಜರಂಗಿಗಳ ಹಿತ ಬೇಡವೇ? ಎಂದು ಕಾಂಗ್ರೆಸ್ ಟ್ವೀಟ್‌ನಲ್ಲಿ ಪ್ರಶ್ನಿಸಿದೆ.
ನಿಜವಾದ ಭಜರಂಗಿಗಳು (ಕ್ರೀಡಾಪಟುಗಳು) ದೆಹಲಿಯ ಜಂತರ್ ಮಂಥರ್‌ನಲ್ಲಿ ತಮಗಾದ ಶೋಷಣೆಯ ನೋವು ತಾಳದೆ ಪ್ರತಿಭಟಿಸುತ್ತಿದ್ದಾರೆ.@narendramodi ಅವರೇ, ಇಲ್ಲಿನ ನಕಲಿ ಭಜರಂಗಿಗಳ ಓಲೈಕೆ ಬಿಟ್ಟು ಅಸಲಿ ಭಜರಂಗಿಗಳ ನೋವು ಆಲಿಸಿ.
ಅಲ್ಲೂ "ಬಜರಂಗಿ ಪುನಿಯಾ" ಎಂಬ ಹೆಸರಿನ ಕ್ರೀಡಾಪಟು ನೋವಿನಲ್ಲಿದ್ದಾರೆ.
ನಿಮಗೆ ಆ ಅಸಲಿ ಬಜರಂಗಿಗಳ ಹಿತ ಬೇಡವೇ?— Karnataka Congress (@INCKarnataka) May 4, 2023
ವೃದ್ಧನ ಶವವನ್ನು ಫ್ರಿಜ್‌ನಲ್ಲಿರಿಸಿ, ಪೆನ್ಶನ್ ಹಣದಿಂದ ಮೋಜು ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್..
‘ಅಗತ್ಯವಿದ್ದರೆ ನಮ್ಮ ರಾಜ್ಯದಲ್ಲೂ ಭಜರಂಗದಳವನ್ನ ಬ್ಯಾನ್ ಮಾಡುತ್ತೇವೆ’..