ವಿಜಯಪುರ: ವಿಜಯಪುರದ ಬಬಲೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡುವ ವೇಳೆ, ಅಭ್ಯರ್ಥಿಯ ಪುತ್ರ ಗಾಳಿಯಲ್ಲಿ ಗುಂಡು ಹಾರಿಸಿ ಘಟನೆ ಈಗ ಬೆಳಕಿಗೆ ಬಂದಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇದೇನಿದು ಹುಚ್ಚಾಟ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ್ಗೆ ಬಿಜೆಪಿ ಟಿಕೇಟ್ ಸಿಕ್ಕಿದ್ದು, ಅವರ ಮಗ ಸಮರ್ಥಗೌಡ ಪಾಟೀಲ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ವಿಜಯಪುರದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ರಾಜು ಆಲಗೂರು, ಸಂಗಮೇಶ್ ಎಂಬುವವರು ಈ ವೀಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜು, ಅಬ್ಯರ್ಥಿ ಘೋಷಣೆಯಾದಾಗ, ಮನೆ ಮುಂದೆ ಬಂದು 5ರಿಂದ 6 ಬಾರಿ ಈ ಯುವಕ ಗುಂಡು ಹಾರಿಸಿದ್ದಾನೆ. ಬಬಲೇಶ್ವರದಲ್ಲಿ ಬಿಜೆಪಿ ಗೂಂಡಾಗಿರಿ ನಡೆಯುತ್ತಿದೆ. ಇಂಥವರು ಅಭ್ಯರ್ಥಿಯಾಗಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರು, ಕೇಂದ್ರ ಸಚಿವರು ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರು ಕೂಡ, ಸಮರ್ಥಗೌಡ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
Video from Karnataka's Vijayapura surfaces showing BJP's Babaleshwar Candidate, Vijugouda Patil's son Samarth Vijugouda Patil firing multiple bullet shots in the air, celebrating after getting BJP ticket #KarnatakaElections2023 pic.twitter.com/Rt7Ob2C4vE
— Nabila Jamal (@nabilajamal_) May 4, 2023
ವೃದ್ಧನ ಶವವನ್ನು ಫ್ರಿಜ್ನಲ್ಲಿರಿಸಿ, ಪೆನ್ಶನ್ ಹಣದಿಂದ ಮೋಜು ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್..
‘ಅಗತ್ಯವಿದ್ದರೆ ನಮ್ಮ ರಾಜ್ಯದಲ್ಲೂ ಭಜರಂಗದಳವನ್ನ ಬ್ಯಾನ್ ಮಾಡುತ್ತೇವೆ’..