Sunday, December 22, 2024

Latest Posts

ಪ್ರತಾಪ್ ಸಿಂಹ ಟ್ವೀಟ್‌ಗೆ ನೆಟ್ಟಿಗರ ಆಕ್ರೋಶ: ಅಂಥಾದ್ದೇನು ಹೇಳಿದರು ಈ ಸಂಸದರು..?

- Advertisement -

ಬೆಂಗಳೂರು: ನಟ ಶಿವರಾಜ್‌ಕುಮಾರ್ ಪತ್ನಿ ಗೀತಾ ಶಿವರಾಜ್‌ಕುಮಾರ್, ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಶಿವಮೊಗ್ಗದ ಸೊರಬದಲ್ಲಿ ಸಹೋದರ ಮಧು ಬಂಗಾರಪ್ಪ ಪರ ಪ್ರಚಾರ ಮಾಡಿದ್ದಾರೆ. ಅಲ್ಲದೇ ಗೀತಾ ಶಿವರಾಜ್‌ಕುಮಾರ್ ತಂದೆಯವರಾದ ದಿ. ಬಂಗಾರಪ್ಪನವರೂ ಕೂಡ ಕಾಂಗ್ರೆಸ್‌ನಲ್ಲಿದ್ದವರು. ಹೀಗಾಗಿ ಅವರ ಅಳಿಯ ನಟ ಶಿವರಾಜ್‌ಕುಮಾರ್ ಕಾಂಗ್ರೆಸ್ ಪರ ಪ್ರಚಾರ ಮಾಡಲು ಮುಂದಾಗಿದ್ದಾರೆ.

ಇಂದು ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪರ ಶಿವರಾಜ್‌ಕುಮಾರ್ ಪ್ರಚಾರ ಮಾಡಿದ್ದು, ಸಿದ್ದರಾಮಯ್ಯರಿಗೆ ಓಟ್ ಹಾಕಿ, ಗೆಲ್ಲಿಸಬೇಕೆಂದು ಮನವಿ ಮಾಡಿದರು. ಅಲ್ಲದೇ ರಾಹುಲ್ ಗಾಂಧಿಯವರ ಕಾರ್ಯವನ್ನು ಮೆಚ್ಚಿದ ಶಿವರಾಜ್‌ಕುಮಾರ್, ಅವರು ಮಾಡಿದ ಜಾಥಾದಿಂದ ನಾನು ಪ್ರೇರಿತನಾಗಿದ್ದೇನೆ. ಹಾಗಾಗಿ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದೇನೆ. ನಿಮ್ಮ ಬೆಂಬಲ ಕಾಂಗ್ರೆಸ್ಸಿಗಿರಲಿ ಎಂದು ಹೇಳಿದ್ದಾರೆ.

ಆದರೆ ಈ ಬಗ್ಗೆ ಹಲವು ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದಿದ್ದು, ಶಿವಣ್ಣರ ಕಾಂಗ್ರೆಸ್ ಬೆಂಬಲಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಸಂಸದ ಪ್ರತಾಪ್ ಸಿಂಹ ಈ ಬಗ್ಗೆ ಟ್ವೀಟ್ ಮಾಡಿದ್ದು, ಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ, ಮನಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕಿಳಿದ ಶಿವಣ್ಣ! ಅವರವ ಭಾವ ಭಕುತಿಗೆ… ಎಂದು ಟ್ವೀಟ್ ಮಾಡಿದ್ದಾರೆ.

ಇದು ಕಾಂಗ್ರೆಸ್ ಬೆಂಬಲಿಗರಿಗೆ ಮತ್ತು ದೊಡ್ಮನೆ ಫ್ಯಾನ್ಸ್‌ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಪ್ರತಾಪ್ ಸಿಂಹ ವಿರುದ್ಧವಾಗಿ ಹಲವರು ಕಾಮೆಂಟ್ ಮಾಡಿದ್ದಾರೆ. ನೀವು ಪುನೀತ್‌ರನ್ನ ನಿಮ್ಮ ರಾಜಕಾರಣದ ಪ್ರಚಾರಕ್ಕೆ ಬಳಸಿಕೊಂಡಿದ್ದೀರಿ ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ಶಕ್ತಿಧಾಮಕ್ಕೆ ಬೇಕಾದಷ್ಟು ಅನುದಾನ ಕೊಟ್ಟಿದ್ದಾರೆ. ಪ್ರಚಾರ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ದೊಡ್ಮನೆ ಅಣ್ಣ ತಮ್ಮಂದಿರ ಮಧ್ಯೆ ತಂದಿಡುವ ಪ್ರಯತ್ನ ಮಾಡಬೇಡಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಒಟ್ಟಾರೆಯಾಗಿ, ಪ್ರತಾಪ್ ಸಿಂಹ ಟ್ವೀಟ್‌ಗೆ ಸಪೋರ್ಟ್‌ಗಿಂತ ಆಕ್ರೋಶದ ಕಾಮೆಂಟ್ಸ್‌ ಹೆಚ್ಚಾಗಿ ಬಂದಿದೆ .

ಹೆಣ್ಣು ಸಿಗದವರಿಗೆ ಮದುವೆ ಮಾಡಿಸುವ ಭರವಸೆ ಕೊಟ್ಟ ಸಹೋದರರು: ಪಕ್ಷೇತರರ ಪ್ರಣಾಳಿಕೆ ಫುಲ್ ವೈರಲ್..

ನಿಜವಾದ ಭಜರಂಗಿಯ ನೋವು ಆಲಿಸಿ: ಮೋದಿಗೆ ಕಾಂಗ್ರೆಸ್ ತಿರುಗೇಟು

ಅಪ್ಪನಿಗೆ ಟಿಕೇಟ್ ಸಿಕ್ಕಿದ್ದಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿದ ಮಗ..

- Advertisement -

Latest Posts

Don't Miss