- Advertisement -
ಕೆ.ಆರ್.ಪುರ: ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಅಭ್ಯರ್ಥಿಗಳ ಚುನಾವಣಾ ಪ್ರಚಾರ ಶುರುವಾಗಿದೆ.
ನಟ ಧ್ರುವ ಸರ್ಜಾ ಚುನಾವಣಾ ಅಖಾಡಕ್ಕೆ ಧುಮುಕಿದ್ದು, ಕೆಆರ್ ಪುರ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಮೋಹನ್ ಬಾಬು ಪರ, ಧ್ರುವ ಸರ್ಜಾ ಭರ್ಜರಿ ಮತ ಬೇಟೆ ನಡೆಸಿದರು.
ಕೆಆರ್.ಪುರ ಕ್ಷೇತ್ರದ ಚನ್ನಸಂದ್ರ ಬ್ರಿಡ್ಜ್, ಮುನೇಶ್ವರನಗರ, ದಾಸಪ್ಪ ಬಡಾವಣೆ, , ಭೋವಿ ಕಾಲೋನಿ, ರಾಮಮೂರ್ತಿ ನಗರ ಮುಖ್ಯರಸ್ತೆ, ಚಿಕ್ಕಬಸವನಪುರ, ಭಟ್ಟರಹಳ್ಳಿ ಸೇರಿ ಮುಂತಾದ ಕಡೆ ಭರ್ಜರಿ ಪ್ರಚಾರ ನಡೆಸಿದ್ದಾರೆ.
- Advertisement -