ಮಂಡ್ಯ: ಮಂಡ್ಯದ ಬಸರಾಳು ಗ್ರಾಮದಲ್ಲಿ ಸಂಸದೆ ಸುಮಾಲತಾ ಮತ ಪ್ರಚಾರಕ್ಕೆ ಇಳಿದಿದ್ದು, ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಪರ ಮತಯಾಚನೆ ಮಾಡಿದ್ದಾರೆ.
ಮತ ಪ್ರಚಾರಕ್ಕೆ ಬಂದ ಸಂಸದೆ ಸುಮಲತಾಗೆ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ಬೃಹತ್ ರೋಡ್ ಶೋ ಮೂಲಕ ಸಂಸದೆ ಸುಮಲತಾ ಮತಯಾಚಿಸಿದ್ದಾರೆ. ಬಸರಾಳು ಸಂತೆ ಮೈದಾನದಿಂದ ಪ್ರಮುಖ ರಸ್ತೆಯಲ್ಲಿ ರೋಡ್ ಶೋ ನಡೆಸಿದ ಸುಮಲತಾ, ಎಸ್. ಡಿ.ಜಯರಾಂ ಬಗ್ಗೆ ಮಾತನಾಡಿದ್ದಾರೆ.
ಎಸ್.ಡಿ.ಜಯರಾಂ ಜಿಲ್ಲೆಯ ಧೀಮಂತ ನಾಯಕ. ಜಿಲ್ಲೆಗೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಅಂಬರೀಶ್, ಎಸ್.ಡಿ.ಜಯರಾಂ ಅಭಿವೃದ್ಧಿ ಹರಿಕಾರರು. ಅಂಬರೀಶ್ ಸ್ಪೂರ್ತಿ ನನಗಿದೆ, ಜಯರಾಂ ಅವರ ಸ್ಪೂರ್ತಿ ಅಶೋಕ್ ಜಯರಾಂಗಿದೆ. ಅಭಿವೃದ್ಧಿ ಕೆಲಸ ಮಾಡುವವರಿಗೆ ಮಾತ್ರ ನೀವು ಮತ ಹಾಕಬೇಕು. ಮಂಡ್ಯ ಜಿಲ್ಲೆಯಲ್ಲಿ ಬದಲಾವಣೆ ಯಾಗಬೇಕು. ನಮಗೆಲ್ಲ ಶಕ್ತಿ ತುಂಬಿದರೆ ಮಂಡ್ಯವನ್ನ ರಾಜ್ಯಕ್ಕೆ ನಂಬರ್ ಒನ್ ಮಾಡೋಣ. ಅಶೋಕ್ ಜಯರಾಂ ಅವರಿಗೆ ಮತ ಹಾಕಿ ಎಂದು ಸುಮಲತಾ ಮನವಿ ಮಾಡಿದ್ದಾರೆ.
ಮದ್ದೂರಿನಲ್ಲಿ ಜೆಪಿ ನಡ್ಡಾ ಅದ್ಧೂರಿ ಪ್ರಚಾರ.. ಪುಷ್ಪವೃಷ್ಟಿ ಸಲ್ಲಿಸಿ ಸ್ವಾಗತ..