ಹಾಸನ : ಹಾಸನದ ಮಾಧ್ಯಮ ಸುದ್ದಿಗೋಷ್ಠಿ ಕರೆದು ಮಾತನಾಡಿದ ರೇವಣ್ಣ, ಪ್ರಧಾನಮಂತ್ರಿ ನರೇಂದ್ರಮೋದಿ ರೋಡ್ ಶೋ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಈ ದೇಶದ ಪ್ರಧಾನಮಂತ್ರಿಗಳೇ ಯಾವ ಮಾರ್ಕೆಟ್ ಬಿಡುತ್ತಿಲ್ಲ. ಯಾವ್ಯಾವ ಪದಾರ್ಥ ಎಷ್ಟೆಷ್ಟು ಬೆಲೆ ಇದೆ ಅಂತ ತಿಳ್ಕಳಕೆ ಅಂತ ರೋಡ್ ಶೋ ಮಾಡ್ತವ್ರೆ. ಪ್ರಧಾನಮಂತ್ರಿಗೇ ಬಿಜೆಪಿಯವರು ಬೀದಿಗೆ ಇಳ್ಸಿದ್ದಾರೆ. ಇನ್ನೊಂದು ಕಡೆ ಕಾಂಗ್ರೆಸ್ ಘಟಾನುಘಟಿ ನಾಯಕರುಗಳು ರೋಡ್ ಶೋ ಮಾಡ್ತಿದ್ದಾರೆ. ನಮ್ಮ ಹತ್ರ ಯಾವ ಸ್ಟಾರ್ ಪ್ರಚಾರಕರು ಇಲ್ಲಾ. ದೇವೇಗೌಡರು, ಕುಮಾರಣ್ಣನೇ ನಮಗೆ ಸ್ಟಾರ್ ಪ್ರಚಾರಕರು, ಘಟಾನುಘಟಿಗಳು. ಚಿತ್ರನಟ ನಟಿಯರು ರಾಷ್ಟ್ರೀಯ ಪಕ್ಷಗಳಿಗೆ ಓಡಾಡ್ತಿದ್ದಾರೆ ಒಳ್ಳೆಯದಾಗಲಿ ಅವರಿಗೆ ಎಂದು ಹೇಳಿದ್ದಾರೆ.
ಕೆ.ಎಂ.ಶಿವಲಿಂಗೇಗೌಡ ವಿರುದ್ಧ ರೇವಣ್ಣ ವಾಗ್ದಾಳಿ ನಡೆಸಿದ್ದು, ಹದಿನೈದು ವರ್ಷ ಸಾಕಿದ ಗಿಣಿ ಕರೆದುಕೊಂಡು ಹೋಗಲು ಎರಡು ವರ್ಷ ತಗೊಂಡ್ರು. ಜನರು ಅವರ ಆಶೀರ್ವಾದದಿಂದ ಏಳಕ್ಕೆ ಏಳು ಗೆಲ್ಲೀಸುತ್ತಾರೆ ಅನ್ನುವ ನಂಬಿಕೆ ಇದೆ. ನಾಳೆ ದೇವೇಗೌಡರು ಹೊಳೆನರಸೀಪುರ, ಹಾಸನ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಹದಿನೈದು ವರ್ಷ ನಾನು ಸಾಕಿದ ಗಿಣಿ ಏನೇನ್ ನಡಿದಿದೆ ಅಂತ ಎಳೆಎಳೆಯಾಗಿ ಬಿಚ್ಚಿಡಬೇಕಾಗುತ್ತದೆ. ಹದಿನೈದು ವರ್ಷ ಅರಸೀಕೆರೆಯಲ್ಲಿ ಲೂಟಿ ಮಾಡಿದ್ದಾರೆ.
ಇವನು ಸತ್ಯಹರಿಶ್ಚಂದ್ರ, ಹದಿನೈದು ವರ್ಷ ಅರಸೀಕೆರೆಲಿ ಏನೇನ್ ಲೂಟಿ ಮಾಡವ್ರೆ ಅಂತ ಜನ ಹೇಳ್ತಾವ್ರೆ. ಸಮುದಾಯಗಳ ಹೆಸರು ಹೇಳಿಕೊಂಡು ಏನೇನ್ ಲೂಟಿ ಮಾಡವ್ರೆ ಬಿಚ್ಚಿದಬೇಕಾಗುತ್ತದೆ. ಹದಿನೈದು ವರ್ಷ ಇಲ್ಲಿ ಮೇದು, ಅಲ್ಲಿ ಇನ್ನೂ ಚೆನ್ನಾಗಿ ಸಿಗುತ್ತೆ ಅಂತ ಅಲ್ಲಿಗೆ ಹೋಗವ್ರೆ. ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ಖಾಲಿ ಮಾಡಲಾಗುತ್ತಿದೆ. ಅರಸೀಕೆರೆ ಜನ ಇಂತಹ ಭ್ರಷ್ಟನನ್ನ, ಲೂಟಿಕೋರನನ್ನು ಮನೆಗೆ ಕಳುಹಿಸಿ ಎಂದು ರೇವಣ್ಣ ವಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ನಮಗೆಲ್ಲ ಶಕ್ತಿ ತುಂಬಿದರೆ ಮಂಡ್ಯವನ್ನ ರಾಜ್ಯಕ್ಕೆ ನಂಬರ್ ಒನ್ ಮಾಡೋಣ’