ಹಾಸನ : ಹಾಸನದಲ್ಲಿ ಮಾಜಿಸಚಿವ ಎಚ್.ಡಿ.ರೇವಣ್ಣ ಮಾತನಾಡಿದ್ದು, ಹಾಸನದಲ್ಲಿ ಜೆಡಿಎಸ್ ಪರ ಉತ್ತಮವಾದ ವಾತಾವರಣ ಇದೆ. ಸ್ವರೂಪ್ ಹತ್ರ ದುಡ್ಡಿಲ್ಲ, ಕಾಸಿಲ್ಲ, ಆತನಿಗೆ ಕಷ್ಟ ಇದೆ. ಸ್ವರೂಪ್ ಸಾಲ ಮಾಡಿಕೊಂಡಿದ್ದಾರೆ. ಜನರೇ ಸ್ವರೂಪ್‌ಗೆ ದುಡ್ಡು ಕೊಡ್ತಾ ಇದ್ದಾರೆ. ಆತನನ್ನು ತೆಗೆಯಲು ಭವಾನಿಯವರೇ ತ್ಯಾಗ ಮಾಡಿದ್ದಾರೆ. ಸ್ವರೂಪ್‌ನನ್ನ ಮೂರನೇ ಮಗ ಅಂದಿದ್ದಾರೆ. ನೂರಕ್ಕೆ ನೂರು ಸ್ವರೂಪ್ ಗೆಲ್ತಾನೆ. ಸ್ವರೂಪ್ ಗೆಲ್ಲಿಸಲು ಜನರೇ ತೀರ್ಮಾನ ಮಾಡಿದ್ದಾರೆ. ಸ್ವರೂಪ್ ಗೆದ್ದೆ ಗೆಲ್ಲುತ್ತಾರೆ ಎಂಬ ಆತ್ಮವಿಶ್ವಾಸ ನನಗಿದೆ ಎಂದು ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇವೇಗೌಡರ ಮನೆ ಬಾಗಿಲಿಗೆ ಹೋಗಲ್ಲ ಎಂದಿದ್ದರು. ಅವರ ಮನೆಗೆ ಬಂದು ದೇವೇಗೌಡರ ಕಾಲಿಗೆ ಬಿದ್ದು ಐದು ವರ್ಷ ನೀವೆ ಇರಿ ಅಂದ್ರು. ಹಾಸನದಲ್ಲಿ ಕೆಲವೆಡೆ ಕಾಂಗ್ರೆಸ್, ಬಿಜೆಪಿ ಮುಖಂಡರು ಅಡ್ಜಸ್ಟ್‌ಮೆಂಟ್ ಮಾಡಿಕೊಂಡಿದ್ದಾರೆ. ನಾವು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದೇವೆ. ಎರಡು ರಾಷ್ಟ್ರೀಯ ಪಕ್ಷಗಳು 120, 140 ಸೀಟ್ ಬರ್ತಾವೆ ಅಂತಿದ್ದಾರೆ. ಅವರಿಗಿನ್ನೂ ಮುಖ್ಯಮಂತ್ರಿ ಯಾರು ಎಂದು ಹೆಸರು ಘೋಷಣೆ ಮಾಡಲು ಆಗಿಲ್ಲ. ತಾಕತ್ ಇದ್ದರೆ ಮುಖ್ಯಮಂತ್ರಿ ಹೆಸರು ಘೋಷಣೆ ಮಾಡಲಿ. ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಹೇಳದವರಿಗೆ ಜನ ಏಕೆ ಓಟು ಹಾಕ್ತಾರೆ. ರಾಷ್ಟ್ರೀಯ ಪಕ್ಷಗಳು ಬೇರೆ ಪಕ್ಷ ಮುಗಿಸುವುದು ಅಷ್ಟು ಸುಲಭವಲ್ಲ. ಪ್ರಾದೇಶಿಕ ಪಕ್ಷ ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ರೇವಣ್ಣ ಸವಾಲ್ ಹಾಕಿದ್ದಾರೆ.
‘ನಮಗೆಲ್ಲ ಶಕ್ತಿ ತುಂಬಿದರೆ ಮಂಡ್ಯವನ್ನ ರಾಜ್ಯಕ್ಕೆ ನಂಬರ್ ಒನ್ ಮಾಡೋಣ’