- Advertisement -
ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಹಾಸನದ ಹೊಳೆನರಸಿಪುರಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ, ಮತ ಚಲಾಯಿಸಿದರು. ಬೆಂಗಳೂರಿನಿಂದ ಹೊರಟ ಹೆಲಿಕಾಪ್ಟರ್ ಹೊಳೆನರಸಿಪುರದ, ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಲ್ಯಾಂಡಿಂಗ್ ಆಯಿತು. ಇದಾದ ಬಳಿಕ, ಹೊಳೆನರಸಿಪುರ ಪಡುವಲಹಿಪ್ಪೆ ಗ್ರಾಮಕ್ಕೆ ಆಗಮಿಸಿ, ಮತಗಟ್ಟೆ ಸಂಖ್ಯೆ 251ರಲ್ಲಿ ಮತ ಚಲಾಯಿಸಿದರು. ಇವರೊಂದಿಗೆ ಪತ್ನಿ ಚೆನ್ನಮ್ಮ ಮತ ಚಲಾಯಿಸಿ, ದೇವೇಗೌಡರಿಗೆ ಸಾಥ್ ನೀಡಿದರು.
- Advertisement -