ಮಂಡ್ಯ: ಇಂದು ವಿಧಾನ ಸಭಾ ಚುನಾವಣಾ ಮತ ಎಣಿಕೆ ಆರಂಭವಾಗಿದ್ದು, ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದೆ.
ಮಂಡ್ಯ ವಿವಿಯ ಕಟ್ಟಡದಲ್ಲೂ ಮತ ಎಣಿಕೆ ಆರಂಭವಾಗಿದ್ದು, ಮಳವಳ್ಳಿ 20 ಸುತ್ತು, ಉಳಿದ ಕ್ಷೇತ್ರದ್ದು 19 ಸುತ್ತುಗಳಲ್ಲಿ ಎಣಿಕೆ ನಡೆಯಲಿದೆ. ಈಗ ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆ ನಡೆದಿದ್ದು, ಪ್ರತೀ ಕ್ಷೇತ್ರಕ್ಕೆ ಎರಡು ಕೊಠಡಿಗಳು ನಿಗದಿಯಾಗಿದೆ.
14 ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಮತ ಎಣಿಕೆ ವೀಕ್ಷಣೆಗೆ 7 ಮಂದಿ ವೀಕ್ಷಕರ ನೇಮಕ ಮಾಡಲಾಗಿದೆ. ಮತ ಎಣಿಕೆ ಕಾರ್ಯದಲ್ಲಿ 120 ಮಂದಿ ಸಿಬ್ಬಂದಿಗಳು ಭಾಗಿಯಾಗಿದ್ದು, ಮುನ್ನೆಚ್ಚರಿಕೆ ಕ್ರಮದ ದೃಷ್ಟಿಯಿಂದ ಪ್ರತಿ ಟೇಬಲ್‌ಗೆ ಸಿಸಿ ಟಿವಿ ಅಳವಡಿಕೆ ಮಾಡಲಾಗಿದೆ. .
ಮುನ್ನೆಚ್ಚರಿಕೆ ಕ್ರಮವಾಗಿ ಮತ ಏಣಿಕೆ ಕೇಂದ್ರದ ಬಳಿ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಜಿಲ್ಲೆಯ ಆಯಕಟ್ಟಿನ ಸ್ಥಳಗಳಲ್ಲೂ ಪೊಲೀಸ್ ನಿಯೋಜನೆ ಮಾಡಲಾಗಿದೆ. ಜಿಲ್ಲಾದ್ಯಾಂತ ಇಂದು 6 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ ನಿಷೇದಾಜ್ಞೆ ಜಾರಿ ಮಾಡಲಾಗಿದೆ.
ಫ್ಲೈಟ್‌ನಲ್ಲಿ ಅಪ್ಪನನ್ನು ಮುಂಬೈಗೆ ಕರೆದುಕೊಂಡು ಬಂದ ಮಗ, ಅಪ್ಪ ಫುಲ್ ಖುಷ್..

