ಹಾಸನದಲ್ಲಿ ಮತಎಣಿಕೆ ಪ್ರಾರಂಭ: 750ಕ್ಕೂ ಹೆಚ್ಚು ಪೊಲೀಸರು, 600 ಸಿಬ್ಬಂದಿಗಳ ನಿಯೋಜನೆ

ಹಾಸನ : ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂಗೌಡ ಮತ್ತು ಸ್ವರೂಪ್ ಗೌಡ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಮತಎಣಿಕೆ ಆರಂಭವಾಗಿದೆ. ಮತಎಣಿಕೆಗೆ ಸುಮಾರು 600 ಸಿಬ್ಬಂದಿಗಳನ್ನ ನಿಯೋಜನೆ ಮಾಡಿದ್ದು, ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮತ‌ಎಣಿಕೆ ಕೇಂದ್ರದ ಒಳಗಡೆ ಹಾಗೂ ಮತಕೇಂದ್ರದ ಹೊರಗಡೆ ಸುಮಾರು 750 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.

ಹಾಸನದ ಸರ್ಕಾರಿ ಇಂಜಿನಿಯರ್ ಕಾಲೇಜಿನಲ್ಲಿ ಮತ ಎಣಿಕೆ ನಡೆದಿದ್ದು, ಈ ಚುನಾವಣೆ ಜೆಡಿಎಸ್‌ಗೆ ಅಗ್ನಿ ಪರೀಕ್ಷೆಯಾಗಿದೆ. 3 ಡಿವೈಎಸ್‌ಪಿ, 14 ಇನ್ಸ್‌ಪೆಕ್ಟರ್, 37 ಸಬ್‌ಇನ್ಸ್‌ಪೆಕ್ಟರ್, 65 ಎಎಸ್‌ಐ, 350 ಮಂದಿ ಸಿವಿಲ್ ಪೊಲೀಸರು, 3 ಕೆ‌ಎಸ್‌ಆರ್‌ಪಿ ತುಕಡಿ, 2 ಸಿಎಎಫ್ ನಿಯೋಜನೆ ಮಾಡಲಾಗಿದ್ದು, ಜಿಲ್ಲೆಯಲ್‌ಲಿ ಸೆಕ್ಷನ್ 144 ಸೆಕ್ಷನ್ ಜಾರಿ ಮಾಡಲಾಗಿದೆ. ಹಾಗಾಗಿ ಗೆದ್ದ ಬಳಿಕ, ವಿಜಯೋತ್ಸವ, ಮೆರವಣಿಗೆ, ಪಟಾಕಿ ಸಿಡಿಸುವುದೆಲ್ಲ ನಿಷೇಧಿಸಲಾಗಿದೆ.

ಸ್ವರೂಪ್- ಪ್ರೀತಂ ನಡುವೆ ತೀವ್ರ ಪೈಪೋಟಿ: ಹಾಸನದಲ್ಲಿ ಭರ್ಜರಿ ಬೆಟ್ಟಿಂಗ್

ಚುನಾವಣೆ ಮುಗಿಸಿ, ಸಿಂಗಾಪುರಕ್ಕೆ ತೆರಳಿದ ಮಾಜಿ ಸಿಎಂ ಕುಮಾರಸ್ವಾಮಿ

ಮಂಡ್ಯದಲ್ಲಿ ಮತ ಎಣಿಕೆ ಆರಂಭ: ಕುತೂಹಲ ಮೂಡಿಸಿದ 7 ಕ್ಷೇತ್ರಗಳ ಫಲಿತಾಂಶ

About The Author