ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು, ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ನಟ ಪ್ರಕಾಶ್ ರಾಜ್, ಸಂತಸ ವ್ಯಕ್ತಪಡಿಸಿದ್ದಾರೆ. ಬಿಜೆಪಿಯನ್ನು ವ್ಯಂಗ್ಯವಾಡುವ ಮೂಲಕ ಪ್ರಕಾಶ್ ರಾಜ್, ದ್ವೇಶ…ಬೂಟಾಟಿಕೆಯನ್ನು …ಓದ್ದೋಡಿಸಿದ ಸ್ವಾಭಿಮಾನಿ ಕನ್ನಡಿಗರಿಗೆ ದನ್ಯವಾದಗಳು …..ಬೆತ್ತಲೆಯಾದ ಚಕ್ರವರ್ತಿ ಎಂದು ಟ್ವೀಟ್ ಮಾಡಿದ್ದಾರೆ.
ಈ ಮೊದಲಿನಿಂದಲೂ ಬಿಜೆಪಿಯನ್ನು ದ್ವೇಷಿಸುತ್ತ ಬಂದಿರುವ ಪ್ರಕಾಶ್ ರಾಜ್, ಬೆಂಗಳೂರಿನ ಶಾಂತಿ ನಗರದ ಶಾಲೆಯೊಂದಕ್ಕೆ ಬಂದು ಓಟ್ ಮಾಡಿದ್ದರು. ಇದನ್ನ ಕೂಡ ಟ್ವೀಟ್ ಮಾಡಿದ್ದ ಪ್ರಕಾಶ್ ರಾಜ್, ಶುಭೋದಯ ಕರ್ನಾಟಕ.. ನಾನು ಕೋಮುವಾದಿ ರಾಜಕೀಯದ ವಿರುದ್ಧ ಮತ ಚಲಾಯಿಸಿದ್ದೇನೆ.. 40% ಭ್ರಷ್ಟ ಸರ್ಕಾರದ ವಿರುದ್ಧ ಮತ ಚಲಾಯಿಸಿದ್ದೇನೆ.. ನಿಮ್ಮ ಆತ್ಮಸಾಕ್ಷಿಯೊಂದಿಗೆ ಮತ ಚಲಾಯಿಸಿ.. ಎಲ್ಲರನ್ನೂ ಒಳಗೊಳ್ಳುವ ಕರ್ನಾಟಕಕ್ಕಾಗಿ ಮತ ಚಲಾಯಿಸಿ ಎಂದು ಬರೆದುಕೊಂಡಿದ್ದರು.
ಅಲ್ಲದೇ, ನಟ ಸುದೀಪ್, ಬಸವರಾಜ್ ಬೊಮ್ಮಾಯಿ ಪರ ಪ್ರಚಾರ ಮಾಡುತ್ತಾರೆ ಎಂಬ ಸುದ್ದಿ ಕೇಳಿ, ಸುದೀಪ್.. ಒಬ್ಬ ಮೇರು ಕಲಾವಿದನಾಗಿ ಸಮಾಜದ ಎಲ್ಲ ವರ್ಗದ ಪ್ರೀತಿಯಿಂದ ಬೆಳೆದ ನೀವು ,ಜನ ಸಾಮಾನ್ಯನ ದನಿಯಾಗುವಿರಿ ಎಂದು ಆಶಿಸಿದ್ದೆ. ಆದರೆ ತಾವು ಒಂದು ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತೀರಿ ಎಂದು ನಿರೀಕ್ಷಿಸಿರಲ್ಲ ..ಇನ್ನು ಮುಂದೆ ನಿಮ್ಮನ್ನೂ .. ನಿಮ್ ಪಕ್ಷವನ್ನು ಪ್ರಶ್ನಿಸುವ ಜನ ದನಿಗೆ ತಯಾರಾಗಿರಿ ಎಂದು ಬರೆದಿದ್ದರು.
Thank you Karnataka for Kicking OUT Hatred and Bigotry ..The Emperor is NAKED … ದ್ವೇಶ…ಬೂಟಾಟಿಕೆಯನ್ನು …ಓದ್ದೋಡಿಸಿದ ಸ್ವಾಭಿಮಾನಿ ಕನ್ನಡಿಗರಿಗೆ ದನ್ಯವಾದಗಳು …..ಬೆತ್ತಲೆಯಾದ ಚಕ್ರವರ್ತಿ.#justasking pic.twitter.com/pVD4GuuaQO
— Prakash Raj (@prakashraaj) May 13, 2023
‘ನಾನು ಸೋತು ಗೆದ್ದಿದ್ದೇನೆ. ರೇವಣ್ಣ ಗೆದ್ದು ಸೋತಿದ್ದಾರೆ. 2028ರ ಚುನಾವಣೆಗೆ ನಾಳೆಯಿಂದಲೇ ಸಿದ್ಧನಾಗ್ತೇನೆ’