ಹಾಸನ: ಮಾಜಿ ಶಾಸಕರಿಗೆ ಹೆದರಿ ಅಧಿಕಾರಿಗಳು ಯಾವುದೇ ಕಳ್ಳ ಬಿಲ್ ಗಳಿಗೆ ಸಹಿ ಹಾಕಬಾರದು ಎಂದು ನೂತನ ಶಾಸಕ ಎಚ್.ಪಿ.ಸ್ವರೂಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಚುನಾವಣೆ ಮುಗಿದ ಮೇಲೆ ಮಾಜಿ ಶಾಸಕರು ಕೆಲ ಅಧಿಕಾರಿಗಳಿಗೆ ಬೆದರಿಕೆ ಹಾಕಿ, ಹಿಂದಿನ ಕಳ್ಳ ಬಿಲ್ಲುಗಳಿಗೆ ಸಹಿ ಹಾಕಿಸಲು ಯತ್ನಿಸುತ್ತಿದ್ದಾರೆ ಇದು ನನ್ನ ಗಮನಕ್ಕೆ ಬಂದಿದೆ. ಆದ್ದರಿಂದ ಜಿಲ್ಲೆಯ ಯಾವೊಬ್ಬ ಅಧಿಕಾರಿಯೂ ಕೆಲಸವಾಗದೇ ಇರುವ ಮತ್ತು ಕಳ್ಳ ಬಿಲ್ಲುಗಳಿಗೆ ಸಹಿ ಮಾಡಬಾರದು. ನಾನು ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಅಲ್ಲಿವರೆಗೂ ಯಾವೊಬ್ಬ ಅಧಿಕಾರಿವು ಕೂಡ ಯಾರ ಒತ್ತಡಕ್ಕೂ ಮಣಿಯದೇ ಕೆಲಸ ಮಾಡಿ ಎಂದು ಹೇಳಿದರು.
ಸರಕಾರದ ಹಣವನ್ನು ವ್ಯರ್ಥ ಮಾಡುವ ನಿಟ್ಟಿನಲ್ಲಿ ನಗರದಲ್ಲಿ ಆಗತ್ಯ ಇಲ್ಲದ ಕೆಲಸಗಳನ್ನು ಮಾಡಿದ್ದು, ಮುಂದಿನ ದಿನಗಳಲ್ಲಿ ಸರಕಾರದ ಹಣ ದುರುಪಯೋಗ ಆಗದ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಈ ಹಿಂದೆ ನಗರಸಭೆ, ನಗರಾಭಿವೃದ್ದಿ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸುಳ್ಳು ಬಿಲ್ ಗಳನ್ನು ಮಾಡಿಕೊಂಡು ಹಣ ದೋಚಿರುವ ಪ್ರಕರಣಗಳು ನಡೆದಿದ್ದು, ಇನ್ನು ಮುಂದೆ ಅಂತಹ ಯಾವುದೇ ಭ್ರಷ್ಟಾಚಾರ ಪ್ರಕರಣಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಭರವಸೆ ನೀಡಿದರು.
‘ನಾನು ಸೋತು ಗೆದ್ದಿದ್ದೇನೆ. ರೇವಣ್ಣ ಗೆದ್ದು ಸೋತಿದ್ದಾರೆ. 2028ರ ಚುನಾವಣೆಗೆ ನಾಳೆಯಿಂದಲೇ ಸಿದ್ಧನಾಗ್ತೇನೆ’
‘ದ್ವೇಶ, ಬೂಟಾಟಿಕೆಯನ್ನು ಓದ್ದೋಡಿಸಿದ ಸ್ವಾಭಿಮಾನಿ ಕನ್ನಡಿಗರಿಗೆ ಧನ್ಯವಾದಗಳು, ಬೆತ್ತಲೆಯಾದ ಚಕ್ರವರ್ತಿ’