Friday, July 4, 2025

Latest Posts

ಹೊಳೆನರಸೀಪುರದಲ್ಲಿ ಮರು ಚುನಾವಣೆ ನಡೆಯಲಿದೆ: ಜಿ. ದೇವರಾಜೇಗೌಡ

- Advertisement -

ಹಾಸನ: ನಮ್ಮ ಪಕ್ಷದ ಮುಖಂಡರುಗಳೇ ಆಯೋಗ್ಯರಂತೆ ನಮ್ಮ ಪಕ್ಷದ ವಾಹನದಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದು, ಈ ಸೋಲನ್ನೆ ಗೆಲುವಿನ ಮೆಟ್ಟಿಲಾಗಿ ಸ್ವೀಕರಿಸುವೆನು. ಮೇ.೨೪ರ ನಂತರ ಹೊಳೆನರಸೀಪುರದಲ್ಲಿ ಮರು ಚುನಾವಣೆ ನಡೆಯಲಿದೆ ಎಂದು ಪರಾಜಿತ ಅಭ್ಯರ್ಥಿ ಜಿ. ದೇವರಾಜೇಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಹೊಳನರಸೀಪುರ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ತೆರಳಿ ಅಲ್ಲಿನ ಸಮಸ್ಯೆಗಳ ಬಗ್ಗೆ ಅರಿತಿದ್ದೇನೆ. ಕೋವಿಡ್ ಆತಂಕದ ಸಮಯದಲ್ಲಿ ಜನರಿಗೆ ಸಹಾಯ ಹಸ್ತ ಚಾಚಿದ್ದು, ಕ್ಷೇತ್ರದಲ್ಲಿ ಸಕ್ರಿಯವಾಗಿ ಪಕ್ಷವನ್ನು ಮುನ್ನಡೆಸಿದ್ದೇನೆ. ಆದರೆ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಬಿಜೆಪಿ ಮುಖಂಡರೆ ನನಗೆ ಮೋಸ ಮಾಡಿದರು. ಕಾಂಗ್ರೆಸ್ನ ಅಭ್ಯರ್ಥಿಗೆ ಮತ ಹಾಕುವಂತೆ ನಮ್ಮ ಪಕ್ಷದ ವಾಹನದಲ್ಲಿಯೇ ತೆರಳಿ ಮನವಿ ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆಯ ದಾಖಲೆ ನನ್ನ ಬಳಿ ಇದೆ ಹಾಗೂ ಪಕ್ಷದ ಕೇಂದ್ರ ಕಚೇರಿಗೆ ದೂರು ನೀಡಿದ್ದೇನೆ ಎಂದರು.

ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿಯಿಂದ ೬ ವಾಹನವನ್ನು ನಿಯೋಜನೆ ಮಾಡಲಾಗಿತ್ತು. ಈ ವಾಹನದಲ್ಲಿಯೇ ಬಿಜೆಪಿ ವಿರುದ್ಧ ಪ್ರಚಾರ ಮಾಡಿರುವ ಪಕ್ಷದ ಮುಖಂಡರಿಗೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನ ಮಾಡಲಾಗುವುದು. ಈಗಾಗಲೇ ಹೊಳೆನರಸೀಪುರದಲ್ಲಿ ಬಿಜೆಪಿ ಕಚೇರಿ ಪ್ರಾರಂಭಿಸಿದ್ದು, ಹಾಸನ, ದುದ್ದ ಹಾಗೂ ಶಾಂತಿಗ್ರಾಮ ಹೋಬಳಿಯಲ್ಲೂ ನಮ್ಮ ಟ್ರಸ್ಟ್ ನ ಹೆಸರಿನಲ್ಲಿ ಕಚೇರಿ ಪ್ರಾರಂಭಿಸಿ ಚುನಾವಣೆಗೆ ಸಿದ್ಧತೆ ನಡೆಸಲಾಗುವುದು ಎಂದರು. ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರೂ ನಾನು ಎಲ್ಲು ಓಡಿ ಹೋಗುವುದಿಲ್ಲ. ಸಕ್ರಿಯವಾಗಿ ಬಿಜೆಪಿಯಲ್ಲಿ ಉಳಿಯುವುದಾಗಿ ಹೇಳಿದರು.

ಇನ್ನು ಆರು ತಿಂಗಳಲ್ಲಿ ಬಿಜೆಪಿ ಪಕ್ಷವನ್ನು ಯಥಾಸ್ಥಿತಿಗೆ ತುರುವುದು ನಮ್ಮ ಉದ್ದೇಶವಾಗಿದೆ. ಹೊಳೆನರಸೀಪುರದಲ್ಲಿ ಗೆಲುವು ಪಡೆದಿರುವ ರೇವಣ್ಣನವರು ಮೇ. ೨೪ರ ನಂತರ ಮರು ಚುನಾವಣೆ ಎದುರಿಸಬೇಕಾಗುತ್ತದೆ. ನಮ್ಮ ಪಕ್ಷದವರು ಡಿ.ಕೆ. ಶಿವಕುಮಾರ್ ಮತ್ತು ಸುರೇಶ್ ಬಳಿ ಮಾತನಾಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ನಮ್ಮವರೆ ನಮ್ಮ ವಾಹನ ಬಳಕೆ ಮಾಡಿ ಪ್ರಚಾರವನ್ನು ಅಯೋಗ್ಯರು ಮಾಡಿರುವುದಾಗಿ ಹೇಳಿದರು. ಸೋಲನ್ನೆ ಗೆಲುವಿನ ಮೆಟ್ಟಿಲಾಗಿ ಸ್ವೀಕರಿಸಿ ಮುಂದೆ ನಡೆಯುವುದಾಗಿ ಇದೆ ವೇಳೆ ತಮ್ಮ ಉದ್ದೇಶವನ್ನು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಂತಿಗ್ರಾಮ ಭಾಗದ ಪ್ರಧಾನ ಕಾರ್ಯದರ್ಶಿ ನವೀನ್, ಉಪಾಧ್ಯಕ್ಷ ರಂಗಸ್ವಾಮಿ, ಹೊಳೆನರಸೀಪುರ ಭಾಗದ ಕಾರ್ಯದರ್ಶಿ ಸುಂದರ್ ಇತರರು ಉಪಸ್ಥಿತರಿದ್ದರು.

‘ನನಗೆ ಯಾರ ನಂಬರ್ ಬಗ್ಗೆ ಮಾತನಾಡುವ ಶಕ್ತಿ ಇಲ್ಲ. ಪಕ್ಷದ 135 ಶಾಸಕರ ಸಂಖ್ಯೆ ನನ್ನ ಸಂಖ್ಯೆ’

‘ಸಿಎಂ ಯಾರೇ ಆದರೂ ಸ್ವಾಗತ ಮಾಡ್ತೀನಿ. ಯಾರೇ ಆದರೂ ರಾಜ್ಯದ ಅಭಿವೃದ್ಧಿ ಮಾಡಲಿ’

‘ದೇವೇಗೌಡರನ್ನು ಮತ್ತೆ ಪಾರ್ಲಿಮೆಂಟ್‌ಗೆ ಕರ್ಕೊಂಡು ಹೋಗೇ ಹೋಗ್ತಿವಿ’

- Advertisement -

Latest Posts

Don't Miss