ಚಿತ್ರದುರ್ಗ: ಚಿತ್ರದುರ್ಗ ನಗರದಲ್ಲಿ ಹರಳಯ್ಯ ಮಠದ ಬಸವ ಹರಳಯ್ಯ ಶ್ರೀ ಮಾತನಾಡಿದ್ದು, ದಲಿತರಿಗೆ ಸಿಎಂ ಸ್ಥಾನ ನೀಡುವಂತೆ ಹರಳಯ್ಯ ಶ್ರೀ ಆಗ್ರಹಿಸಿದ್ದಾರೆ.
ಡಾ.ಜಿ.ಪರಮೇಶ್ವರ್, ಕೆ.ಹೆಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ ಪೈಕಿ ಒಬ್ಬರಿಗೆ ಸಿಎಂ ಸ್ಥಾನ ನೀಡಿ ಎಂದು ಶ್ರೀಗಳು ಆಗ್ರಹಿಸಿದ್ದು, ಡಿಕೆಶಿ, ಸಿದ್ಧರಾಮಯ್ಯ ಕಾಂಗ್ರೆಸ್ ಪಕ್ಷಕ್ಕಾಗಿ ಶ್ರಮಿಸಿದ್ದಾರೆ. ಇಬ್ಬರಿಗೂ ಎರಡೆರಡು ವರ್ಷ ಸಿಎಂ ಸ್ಥಾನ ನೀಡಲಿ. ಉಳಿದ ಒಂದು ವರ್ಷ ದಲಿತರಿಗೆ ಸಿಎಂ ಸ್ಥಾನ ನೀಡಲಿ. ಸಂವಿಧಾನ ವಿರೋಧಿ ಸರ್ಕಾರವನ್ನು ಜನರು ತಿರಸ್ಕರಿಸಿದ್ದಾರೆ. ಸಂವಿಧಾನ ಬದಲಾಯಿಸುತ್ತೇವೆ ಎಂದವರನ್ನು ತಿರಸ್ಕರಿಸಿದ್ದಾರೆ. 75ವರ್ಷದಿಂದ ಎರಡ್ಮೂರು ಜಾತಿಯವರು ಮಾತ್ರ ಸಿಎಂ ಆಗಿದ್ದಾರೆ. 2 ಜಾತಿಯವರು ಸಿಎಂ ಸ್ಥಾನಕ್ಕೆ ರಿಸರ್ವೇಶನ್ ಮಾಡಿಕೊಂಡಿದ್ದಾರೆಯೇ? ಎಂದು ಶ್ರೀಗಳು ಪ್ರಶ್ನಿಸಿದ್ದಾರೆ.
ದಲಿತ ಸಮುದಾಯ ರಾಜಕೀಯವಾಗಿಯೂ ಅಸ್ಪೃಶ್ಯವಾಗಿದೆ. ಕಾಂಗ್ರೆಸ್ ಗೆ ಬಹುಮತದಿಂದ ರಾಜ್ಯದ ಜನರಲ್ಲಿ ಖುಷಿಯಿದೆ. ಅಧಿಕಾರಕ್ಕಾಗಿ ಕೈ ಮುಖಂಡರು ಕಿತ್ತಾಡಿಕೊಂಡು ಕೂಡಬಾರದು. ದಲಿತ ಸಿಎಂ ಮಾಡದಿದ್ದರೆ ಕಾಂಗ್ರೆಸ್ ಸಂವಿಧಾನದ ಪರವಾಗಿಲ್ಲ ಎಂದರ್ಥ. ಎಲ್ಲಾ ಪಕ್ಷದಂತೆ ದಲಿತರನ್ನು ರಾಜಕೀಯಕ್ಕೆ ಬಳಸಿದೆ ಎಂದರ್ಥ ಎಂದು ಶ್ರೀಗಳು ಅಸಮಾಧಾನದ ಮಾತನಾಡಿದ್ದಾರೆ.
ಡಿಕೆಶಿ, ಸಿದ್ಧರಾಮಯ್ಯ ಅಂಬೇಡ್ಕರ್ ಬಗ್ಗೆ ಮಾತಾಡ್ತಾರೆ. ಬರೀ ಬಾಯಲ್ಲಿ ಅಂಬೇಡ್ಕರ್ ಬಗ್ಗೆ ಮಾತಾಗಬಾರದು. ಕೃತಿಯಲ್ಲಿ ಅಂಬೇಡ್ಕರ್ ತತ್ವ, ಆದರ್ಶ ಜಾರಿಗೊಳ್ಳಲಿ ಎಂದು ಶ್ರೀಗಳು ಆಗ್ರಹಿಸಿದ್ದಾರೆ.
‘ಮಾಜಿ ಶಾಸಕರಿಗೆ ಹೆದರಿ ಅಧಿಕಾರಿಗಳು ಯಾವುದೇ ಕಳ್ಳ ಬಿಲ್‌ಗಳಿಗೆ ಸಹಿ ಹಾಕಬಾರದು’