ಹಾಸನ: ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರದ ವೇಳೆ ಹೇಳಿದಂತೆ ಕ್ಷೇತ್ರದ ಅಭ್ಯರ್ಥಿ ಸ್ವರೂಪ್ ಗೆಲುವನ್ನು ಹೆಚ್.ಡಿ. ದೇವೇಗೌಡರ ಜನ್ಮದಿನಕ್ಕೆ ಉಡುಗರೆಯಾಗಿ ನೀಡಿದ್ದು, ಮುಂದೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆಯಿಂದ ದೇವೇಗೌಡರು ಸ್ಪರ್ಧೆ ಮಾಡಲು ಬಯಸಿದರೆ, ನನ್ನ ಮಗ ಪ್ರಜ್ವಲ್ ನನ್ನು ನಿಲ್ಲಿಸುವುದಿಲ್ಲ ಎಂದು ಜಿಲ್ಲಾ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಭವಾನಿ ರೇವಣ್ಣ ತಿಳಿಸಿದರು.
ನಗರದ ಸಂಸದರ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ದೇವೇಗೌಡರು ಮುಂದೆ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ಮೊದಲು ಭವಾನಿ ರೇವಣ್ಣ ಹೇಳಿದರು. ನಂತರ ಆದರೇ ರೇವಣ್ಣನವರು ಲೋಕಸಭೆಗೆ ಕಳುಹಿಸುತ್ತೇನೆ ಎಂದು ಹೇಳಿರುವ ವಿಷಯ ಗೊತ್ತಿರುವುದಿಲ್ಲ. ನಿಂತರು ನಿಲ್ಲಬಹುದು. ನಿಂತರೇ ಬಹಳ ಸಂತೋಷ. ಹಾಸನದಲ್ಲಿ ನಿಂತರೇ ಇನ್ನು ಸಂತೋಷ. ಇನ್ನು ತಾತ ನಿಲ್ಲುತ್ತಾರೆ ಎಂದರೇ ಪ್ರಜ್ವಲ್ ಅವರ ನಿಲ್ಲಿಸಲು ನಾನು ಹೋಗುವುದೇ ಇಲ್ಲ. ಮೊದಲ ಆದ್ಯತೆ ದೇವೇಗೌಡರಿಗೆ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇಲ್ಲಿವರೆಗೂ ನಾವು ಈ ಕ್ಷೇತ್ರದಿಂದ ಹೊರಗೆ ಕಳುಹಿಸಿದವರು ಅಲ್ಲ. ದೇವೇಗೌಡರನ್ನು ಕುಟುಂಬದವರಿಂದ ಹೊರಗೆ ಹಾಕಿ ಕ್ಷೇತ್ರದಿಂದ ಕಳುಹಿಸಿದರು ಎಂಬುದು ಕೆಲವರು ಮಾತನಾಡಿದ ರೀತಿ ಅಷ್ಟೆ. ನಾವು ಎಂದು ಬಯಸಿಯೂ ಇಲ್ಲ. ಕಳುಹಿಸಿಯು ಇಲ್ಲ. ಪ್ರಜ್ವಲ್ ಅವರನ್ನು ಸಂಸದ ಸ್ಥಾನಕ್ಕೆ ನಿಲ್ಲಿಸಬೇಕೆಂಬುದು ದೇವೇಗೌಡರ ತೀರ್ಮಾನ ಆಗಿತ್ತು. ಅದರಂತೆ ಪ್ರಜ್ವಲ್ ರೇವಣ್ಣ ರವರನ್ನು ಅಭ್ಯರ್ಥಿಯಾಗಿ ಮಾಡಲಾಯಿತು. ದೊಡ್ಡ ಸಾಹೇಬರನ್ನು ನೀವು ಆಚೆ ಹೋಗಿ ಪ್ರಜ್ವಲ್ ಗೆ ಟಿಕೆಟ್ ಕೊಡಿ ಎಂದು ನಮ್ಮ ಕುಟುಂಬದವರು ಕೇಳಿಲ್ಲ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇನ್ನು ಎರಡು ತಿಂಗಳು ಆದ ಮೇಲೆ ಲೋಕಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ. ಮುಂದಿನ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಭವಾನಿ ರೇವಣ್ಣನವರು ಆಗುತ್ತಾರೆ ಎಂಬುದರ ಬಗ್ಗೆ ಕೆಲವೊಂದರಲ್ಲಿ ನೋಡಿದೆ ಆದರೇ ಇನ್ನು ಚರ್ಚೆನೆ ಆಗಿಲ್ಲ. ವಿಷಯದ ಬಗ್ಗೆ ಯಾರು ಮಾತನಾಡಿಲ್ಲ. ನಮ್ಮ ನಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದೇವೆ ಅಷ್ಟೆ ಇದಕ್ಕೆ ನಾನು ಉತ್ತರ ಕೊಡಲಾರೆ ಎಂದು ಪ್ರಶ್ನೆಯೊಂದಕ್ಕೆ ವಿರಾಮ ಹೇಳಿದರು. ಹಾಸನದಲ್ಲಿ ನಾನು ಆಕಾಂಕ್ಷಿಯಾಗಿದೇ ಸಮಯದಲ್ಲಿ ತಪ್ಪಿದಾಗ ಒಂದು ಮಾತು ಹೇಳಿದ್ದೆನು. ಭಗವಂತ ಯಾರಾರಿಗೆ ಎಷ್ಟೆಷ್ಟು ಲಭ್ಯನೋ ಅದನ್ನು ಪಡೆದುಕೊಳ್ಳಲು ಸಾಧ್ಯ ಎಂಬುದನ್ನು ನಾನು ನಂಬಿದವಳು. ಭಗವಂತ ಏನು ಕೊಡುತ್ತಾನೆ ಅದನಷ್ಟೆ ನಾನು ಸ್ವೀಕಾರ ಮಾಡುವುದು ಎಂದು ಹೇಳಿದರು.
೨೦೨೩ರ ರಾಜ್ಯ ವಿಧಾನಸಭಾ ಚುನಾವಣೆ ನಡೆದಿದ್ದು, ಈ ಬಾರಿ ಜೆಡಿಎಸ್ ಸರಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ನಿರೀಕ್ಷೆ ಮಾಡಿದ್ದೆವು. ಆದರೆ ಸಾಧ್ಯವಾಗಲಿಲ್ಲ ಎಂದು ಬೇಸರವ್ಯಕ್ತಪಡಿಸಿದರು. ಮೇ.೧೮ ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರ ೯೦ನೇ ವರ್ಷದ ಜನ್ಮ ದಿವಸಕ್ಕಾಗಿ ಕಾಯುತ್ತಿದ್ದೆನು. ಈ ದಿವಸವೇ ಮತದಾರರಿಗೆ ಹಾಸನದಲ್ಲಿ ಅಭಿನಂದನೆ ಹೇಳಬೇಕೆಂಬುದು ನನ್ನ ಅಭಿಲಾಶೆ ಆಗಿತ್ತು. ಸ್ವರೂಪ್ ಅವರ ಗೆಲ್ಲಿಸಲೇ ಬೇಕೆಂದು ನಮ್ಮ ಇಡೀ ಕುಟುಂಬ ಒಟ್ಟಾಗಿ ನಾವು ಅಂದಿಕೊಂಡಿದ್ದೇವು. ಜೊತೆಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಸನದ ಜನತೆ ಕೂಡ ಗೆಲುವಿಗಾಗಿ ಹೋರಾಟ ಮಾಡಿದ್ದಾರೆ. ಜೆಡಿಎಸ್ ಪಕ್ಷದಿಂದ ಯಾರನ್ನೇ ಅಭ್ಯರ್ಥಿಯಾಗಿ ಕೊಟ್ಟರೂ ಗೆಲ್ಲಿಸಬೇಕು ಎನ್ನುವುದು ಜನರ ಮನಸ್ಸಿನಲ್ಲಿತ್ತು. ಈ ವೇಳೆ ಸ್ವರೂಪನ್ನು ಅಭ್ಯರ್ಥಿಯಾಗಿ ಕೊಟ್ಟ ಮೇಲೆ ಎಲ್ಲಾರು ಒಗ್ಗಟ್ಟಾಗಿ ಗೆಲುವು ತಂದುಕೊಟ್ಟಿದ್ದಾರೆ ಎಂದರು.
ಕಳೆದ ೫ ದಿನಗಳಿಂದಲೂ ಇಲ್ಲಿಗೆ ಬಂದು ಇಲ್ಲಿನ ಜನತೆಗೆ ಧನ್ಯವಾದಗಳ ಹೇಳಲು ಸಾಧ್ಯವಾಗಿರಲಿಲ್ಲ. ದೊಡ್ಡ ಸಾಹೇಬರ ಹುಟ್ಟುಹಬ್ಬದ ದಿನದಂದು ಜನತೆಗೆ ಕೃತಜ್ಞತೆ ಹೇಳಬೇಕೆಂಬುದು ನನ್ನ ಆಸೆ ಆಗಿತ್ತು. ಹೆಚ್.ಪಿ. ಸ್ವರೂಪ್ ಗೆಲುವನ್ನು ಉಡುಗರೆಯಾಗಿ ದೇವೇಗೌಡರಿಗೆ ಕೊಡಬೇಕೆಂಬುದು ವಿಧಾನಸಭಾ ಚುನಾವಣೆ ವೇಳೆ ಹೇಳಲಾಗಿತ್ತು. ಅದರಂತೆ ೮ ಸಾವಿರ ಅಂತರದಲ್ಲಿ ಗೆಲುವು ತಂದುಕೊಟ್ಟ ಪ್ರತಿಯೊಬ್ಬ ಮತದಾರರಿಗೆ, ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ನಮ್ಮ ಕುಟುಂಬದ ಪರವಾಗಿ ಮತ್ತು ಸ್ವರೂಪ್ ಕುಟುಂಬದ ಪರವಾಗಿ ಧನ್ಯವಾದಗಳ ಹೇಳುತ್ತಿರುವುದಾಗಿ ಹೇಳಿದರು.
ಇದೆ ವೇಳೆ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸ್ವಾಮಿಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ಸುಮುಖ ರಘು, ಡಿಸಿಸಿ ಬ್ಯಾಂಕ್ ಬಿದರಿಕೆರೆ ಜಯರಾಮ್ ಇತರರು ಉಪಸ್ಥಿತರಿದ್ರು.
‘ಒಂದು ಕ್ಷೇತ್ರದಲ್ಲಾದರೂ ಬಿಜೆಪಿ ಗೆಲ್ಲಿಸು ಎಂದು ಚಾಲೆಂಜ್ ಹಾಕಿದ್ದೆ, ಅವರಿಗೆ ನಮ್ಮ ನೋವೇ ಶಾಪವಾಗಿ ತಟ್ಟಿದೆ’
ಹೆಚ್.ಡಿ.ದೇವೇಗೌಡರ ಹುಟ್ಟುಹಬ್ಬದ ಪ್ರಯುಕ್ತ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಸ್ವರೂಪ್..
ಸಿದ್ದರಾಮಯ್ಯ ಸಿಎಂ ಆಗಿದ್ದಕ್ಕೆ, ಕಾಯಿ ಒಡೆದು ಹರಕೆ ಸಲ್ಲಿಕೆ: ಕೊಟ್ಟೂರು ಮಂಜುನಾಥ್‌ಗೆ ಸಚಿವ ಸ್ಥಾನ ನೀಡಲು ಆಗ್ರಹ