ರಾಮನಗರ: ರಾಮನಗರದಲ್ಲಿ ಚುನಾವಣೆಯಲ್ಲಿ ಸೋತ ಬಳಿಕ, ರಾಮನಗರ ಜನತೆಗೆ ಕೃತಜ್ಞತೆ ಹೇಳಲು ನಿಖಿಲ್ ಕುಮಾರಸ್ವಾಮಿ, ಕೃತಜ್ಞತಾ ಸಭೆಯಲ್ಲಿ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಚುನಾವಣೆಯಲ್ಲಿ ಗೆಲುವು, ಸೋಲು ಅನ್ನೋದು ಸರ್ವೇಸಾಮಾನ್ಯ. ಯಾಕಂದ್ರೆ ನಾವು ಈಗಂತಲ್ಲ, ಬಹಳ ವರ್ಷಗಳ ಹಿಂದೆ ಜೆಡಿಎಸ್ ಸೆಕ್ಯೂಲರ್ ಆಗಿರಲಿಲ್ಲ. ಆಗಲೇ ದೇವೇಗೌಡರು ಒಬ್ಬರೇ ಪಕ್ಷ ಕಟ್ಟಿದ್ರು, ಜನತಾದಳ ಎರಡೇ ಸೀಟ್ ಗೆದ್ದಿತ್ತು. ಅಂದಿನಿಂದಲೂ ನೀವೆಲ್ಲಾ ಪ್ರಾಮಾಣಿಕವಾಗಿ, ಒಗ್ಗಟ್ಟಾಗಿ ನಮ್ಮ ಜೊತೆ ಚುನಾವಣೆಗೆ ಸಾಥ್ ಕೊಟ್ಟಿದ್ದೀರಿ.
ಇಂದು ಒಬ್ಬ ಯುವಕನಾಗಿ ನಾನು ಹೇಳುತ್ತೇನೆ, ನಾನು ಸೋತಿರಬಹುದು. ಆದರೆ ನಾನು ಎದೆಗುಂದುವುದಿಲ್ಲ. ದೊಡ್ಡ ದೊಡ್ಡ ನಾಯಕರು ನನಗೆ ಕರೆ ಮಾಡಿ, ನೀನಿನ್ನು ಯುವಕ, ಸೋತಿದ್ದಿಯಾ ಅಂತಾ ಎದೆಗುಂದಬೇಡ ಎಂದು ಹೇಳಿದ್ದಾರೆ. ನನ್ನ ವಯಸ್ಸಿನ್ನು ಚಿಕ್ಕದಿದೆ. ರಾಮನಗರವನ್ನ ಬಿಡುವುದಿಲ್ಲ. ನಿಮ್ಮ ಜೊತೆ ನಾನು ಯಾವಾಗಲೂ ಇರುತ್ತೇನೆ. ನಾನು ಚುನಾವಣೆಯಲ್ಲಿ ಸೋತಿರಬಹುದು. ಆದರೆ ಅದಕ್ಕಿಂತ ಹೆಚ್ಚು ನಿಮ್ಮ ಪ್ರೀತಿಗೆ ಶರಣಾಗಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
:
ಹೆಚ್.ಡಿ.ದೇವೇಗೌಡರ ಹುಟ್ಟುಹಬ್ಬದ ಪ್ರಯುಕ್ತ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಸ್ವರೂಪ್..
‘ಮೊದಲ ಆದ್ಯತೆ ದೇವೇಗೌಡರಿಗೆ. ಅವರ ಹುಟ್ಟುಹಬ್ಬಕ್ಕೆ ಸ್ವರೂಪ್ ಗೆಲುವೇ ಉಡುಗೊರೆ ‘