ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮನೆಗಳ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿ ಮಾಡಿದ್ದ ಓಲ್ಡ್ ಮಕ್ನಾ ಕಾಡಾನೆಯನ್ನು ಸೆರೆ ಹಿಡಿದಿದ್ದಾರೆ. ಸಾಕಾನೆ ಅಭಿಮನ್ಯು ನೇತೃತ್ವದಲ್ಲಿ ಸತತ ಮೂರು ಗಂಟೆಗಳ ಕಾಲ ಆಪರೇಷನ್ ನಡೆಸಿ ಸಲಗವನ್ನ ಬಂಧಿಸಿದ್ದಾರೆ. ಅರವಳಿಗೆ ಮದ್ದು ನೀಡಿದ್ರೂ ಕೂಡಾ ಹತ್ತಾರು ಕಿಲೋ ಮೀಟರ್ ಸುತ್ತಾಡಿ ಕಾಫಿ ಎಸ್ಟೇಟ್ ನೊಳಗೆ ಸೆರೆಯಾಯಿತು. ಪ್ರತಿನಿತ್ಯವೂ ಒಂದಲ್ಲ ಒಂದು ಗ್ರಾಮಕ್ಕೆ ಹೋಗಿ, ಆಹಾರಕ್ಕಾಗಿ ಮನೆಗಳ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿ ಮಾಡಿತ್ತು. ದಾಂಧಲೆ ಮಾಡ್ತಿದ್ದ ಪುಂಡಾನೆ ಸೆರೆಯಿಂದ ಮಲೆನಾಡಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ.. ಇನ್ನು ಸೆರೆಯಾಗಿರೋ ಮಕ್ನಾದ ಇತಿಹಾಸವೇ ರೋಚಕ.. ? ಅಷ್ಟಕ್ಕೂ ಮಕ್ನಾ ಆನೆಯ ಇತಿಹಾಸ ಏನು..? ಹೇಗಿತ್ತು ಗೊತ್ತಾ ಇಂದಿನ ಎಲಿಫೆಂಟ್ ಕಾರ್ಯಾಚರಣೆ..?
ಮಲೆನಾಡಿನ ಜನರ ನಿದ್ದೆಗೆಡಿಸಿದ್ದ ಪುಂಡಾನೆ ಸೆರೆ… ಸತತ ಮೂರು ಗಂಟೆ ಕಾರ್ಯಾಚರಣೆ ನಡೆಸಿ ಮಕ್ನಾ ಆಪರೇಷನ್ ಸಕ್ಸಸ್… ಪುಂಡಾನೆ ಸೆರೆಯಿಂದ ಕೊಂಚ ನಿಟ್ಟುಸಿರು ಬಿಟ್ಟ ಜನ.. ಹೌದು, ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು ತಾಲೂಕಿನಾದ್ಯಂತ ಕಾಡಾನೆಗಳ ಉಪಟಳ ನಿರಂತರವಾಗಿದೆ. ಮಕ್ನಾ ಆನೆಯೊಂದು ಕಳೆದ ಹಲವು ತಿಂಗಳಿನಿಂದ ಆಹಾರಕ್ಕಾಗಿ ಮನೆಗಳ ಮೇಲೆ ದಾಳಿ ಮಾಡ್ತಿತ್ತು, ಅಂಗಡಿ ಮುಗ್ಗಟ್ಟುಗಳಮುಂದೆಯೂ ಬಂದು ಭೀತಿ ಸೃಷ್ಟಿ ಮಾಡಿತ್ತು. ಆದ್ದರಿಂದ ಪುಂಡ ಮಕ್ನಾವನ್ನ ಸೆರೆಹಿಡಿಯೋದಕ್ಕೆ ಅಂತಾ ಅರಣ್ಯ ಇಲಾಖೆಯವರು ಇಂದು ಕಾರ್ಯಾಚರಣೆ ನಡೆಸಿದ್ರು. ಸಕಲೇಶಪುರ ತಾಲೂಕಿನ ಮಠಸಾಗರ ಬಳಿ ಅರವಳಿಕೆ ಮದ್ದು ನೀಡಲಾಯಿತು. ಅರವಳಿಕೆ ನೀಡಿ ಸುಮಾರು ಒಂದೂವರೆ ಗಂಟೆಗಳ ಕಾಲ ಹತ್ತಾರು ಕಿಲೋ ಮೀಟರ್ ಓಡಾಟವನ್ನ ನಡೆಸ್ತು. ಕೊನೆಗೂ ಮಠಸಾಗರ ಕಾಫಿಬೋರ್ಡ್ ನ ಕಾಫಿ ಎಸ್ಟೇಟ್ ವೊಂದರಲ್ಲಿ ಅಭಿಮನ್ಯ ನೇತೃತ್ವದ ಐದು ಸಾಕಾನೆಗಳ ನಿರಂತರ ಕಾರ್ಯಾಚರಣೆಯಿಂದ ಸೆರೆಯಾಯಿತು. ಸ್ಥಳಕ್ಕೆ ಬಂದ ಸಕಲೇಶಪುರ ಸಿಮೆಂಟ್ ಮಂಜು, ಇಂತಹ ಪುಂಡಾಟ ನಡೆಸೋ ಕಾಡಾನೆಗಳನ್ನ ಸೆರೆ ಹಿಡಿಯೋದಕ್ಕೆ ಕ್ರಮ ವಹಿಸಲಾಗುವುದು ಅಂದ್ರು.
ರಾಷ್ಟ್ರೀಯ ಹೆದ್ದಾರಿ ಬೆಂಗಳೂರು – ಮಂಗಳೂರು ಸಂಪರ್ಕಿಸೋ ಮಾರ್ಗಮಧ್ಯೆ ಆಪರೇಷನ್ ನಡೆದದ್ರಿಂದ ರಸ್ತೆಯಲ್ಲಿ ಓಡಾಡೋ ಸಾವಿರಾರು ಜನ ನಿಂತು ಕುತೂಹಲದಿಂದ ಆಪರೇಷನ್ ವೀಕ್ಷಿಸಿದ್ರು. ಇನ್ನು ಸೆರೆಯಾಗಿರೋ ಮಕ್ನಾದ ಇತಿಹಾಸವೇ ರೋಚಕವಾದದ್ದು, 2022 ರ ಜೂನ್ 29 ರಂದು ಇದೇ ಆನೆಯನ್ನು ಹಿಡಿದು ಬಂಡೀಪುರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಸ್ಥಳಾಂತರ ಮಾಡಿದ ಒಂದೇ ತಿಂಗಳು ಅಂತರದಲ್ಲಿ ನೂರಾರು ಕಿಲೋಮೀಟರ್ ಕ್ರಮಿಸಿ ವಾಪಸ್ಸು ಮತ್ತೆ ಅದೇ ಜಾಗಕ್ಕೆ ಬಂದು ದಾಂಧಲೆ ಮಾಡ್ತಾ ಇತ್ತು. ಡಿಎಫ್ ಓ ಹರೀಶ್ ನೇತೃತ್ವದಲ್ಲಿ ಮತ್ತೆ ಕಾರ್ಯಾಚರಣೆ ನಡೆಸಿ, ಪುಂಡ ಮಕ್ನಾವನ್ನ ಬಂಧಿಸಿದ್ದಾರೆ.
ಬಂಡೀಪುರಕ್ಕೆ ಬಿಟ್ಟಿದ್ರೂ ಮತ್ತೆ ವಾಪಸ್ಸು ಬಂದಿದ್ದ ಮಕ್ನಾವನ್ನ ಮತ್ತೆ ಎಲ್ಲಿಗಾದ್ರೂ ಬಿಟ್ರೂ ವಾಪಸ್ಸು ಅಂತಾ ಈ ಭಾರಿ ಹಿಡಿದು ಪಳಗಿಸೋಕೆ ಮುಂದಾಗಿದ್ದಾರೆ. ದುಬಾರೆ ಅಥವಾ ತಿತಿಮತಿ ಸಾಕಾನೆ ಧಾಮಕ್ಕೆ ಬಿಟ್ಟು ಪಳಗಿಸೋ ತೀರ್ಮಾನ ಮಾಡಿದ್ದಾರೆ. ಕೇವಲ ಒಂದು ಕಾಡಾನೆ ಹಿಡಿದ್ರೆ ಸಾಕಾಗೋದಿಲ್ಲ, 30 ಕ್ಕೂ ಹೆಚ್ಚು ಕಾಡಾನೆಗಳು ಓಡಾಡವನ್ನ ನಡೆಸಿ ಆತಂಕವನ್ನ ಸೃಷ್ಟಿ ಮಾಡ್ತಿವೆ, ಎಲ್ಲವನ್ನೂ ಸ್ಥಳಾಂತರ ಮಾಡಿ ಶಾಶ್ವತ ಪರಿಹಾರವನ್ನು ನೀಡಿ ಅನ್ನೋದು ಮಲೆನಾಡಿಗರ ಒತ್ತಾಯ.
ರಾಮನಗರದಲ್ಲಿ ಜೆಡಿಎಸ್ ಕೃತಜ್ಞತಾ ಸಭೆ: ಸೋತಿದ್ದಕ್ಕೆ ನಿಖಿಲ್ ಹೇಳಿದ್ದೇನು..?



