Friday, July 11, 2025

Latest Posts

ನೂತನ ಸಂಸತ್ ಭವನ ಲೋಕಾರ್ಪತಣೆ ಮಾಡಿದ ಪ್ರಧಾನಿ ಮೋದಿ : ಏನಿದರ ವಿಶೇಷತೆ..?

- Advertisement -

ನವದೆಹಲಿ: ವೀರ್ ಸಾವರ್ಕರ್ ಜಯಂತಿಯ ವಿಶೇಷ ದಿನದಂದು, ಹೊಸ ಸಂಸತ್ ಭವನವನ್ನ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದಾರೆ.

ಹಳೆಯ ಸಂಸತ್ ಭವನದ ಪಕ್ಕವೇ, ಹೊಸ ಸಂಸತ್ ಭವನ ನಿರ್ಮಾಣ ಮಾಡಿದ್ದು, ಈ ಕಟ್ಟಡ ಹೇಗಿದೆ ಎಂಬುದರ ಬಗ್ಗೆ ಪ್ರಧಾನಿ ಮೋದಿ, ಟ್ವೀಟ್ ಮಾಡುವ ಮೂಲಕ, ವೀಡಿಯೋ ಅಪ್ಲೋಡ್ ಮಾಡಿದ್ದರು. ತ್ರಿಕೋನಾಕಾರದಲ್ಲಿರುವ ಈ ಸಂಸತ್ ಭವನ 4 ಅಂತಸ್ತಿನದಾಗಿದೆ. ಈ ಕಟ್ಟಡದ ವಿಶೇಷತೆ ಅಂದ್ರೆ, ಇದಕ್ಕೆ ಮೂರು ದ್ವಾರಗಳಿದೆ. ಆ ಮೂರು ದ್ವಾರಕ್ಕೆ ಹೆಸರುಗಳನ್ನಿರಿಸಲಾಗಿದೆ. ಕರ್ಮದ್ವಾರ, ಶಕ್ತಿದ್ವಾರ ಮತ್ತು ಜ್ಞಾನದ್ವಾರವೆಂದು ಹೆಸರಿಡಲಾಗಿದೆ.

ಈ ಸಂಸತ್ ಭವನದಲ್ಲಿ, 888 ಲೋಕಸಭಾ ಸದಸ್ಯರು, 384 ರಾಜ್ಯಸಭಾ ಸದಸ್ಯರು ಸೇರಿ ಒಟ್ಟು 1, 280 ಸದಸ್ಯರಿಗೆ ಕೂರಲು ಆಸನ ವ್ಯವಸ್ಥೆ ಮಾಡಲಾಗಿದೆ. ಇನ್ನು 1,200 ಕೋಟಿ ವೆಚ್ಚದಲ್ಲಿ ಹೊಸ ಸಂಸತ್ ಭವನ ನಿರ್ಮಾಣ ಮಾಡಲಾಗಿದೆ. ಬಹುಸಮಿತಿ ಕೊಠಡಿ, ಗ್ರಂಥಾಲಯ, ಊಟದ ಕೋಣೆ ಎಲ್ಲವೂ ಈ ಭವನದಲ್ಲಿದ್ದು, ಕೇಂದ್ರಿಯ ಹಾಲ್‌, ಅಧಿಕಾರಿ ಕಚೇರಿ ಕೂಡ ಇದರಲ್ಲಿದೆ. ನಂದಿ ಲಾಂಛಿತ ಸುವರ್ಣ ದಂಡ ಕೂಡ ಸಂಸತ್ ಭವನದಲ್ಲಿರಿಸಲಾಗಿದೆ.

ಪೂರ್ಣ ಪ್ರಮಾಣದ ಸಂಪುಟ ವಿಸ್ತರಣೆ , ಸಿದ್ದು ಸಂಪುಟವಿಗ ಹಿರಿಯರ-ಕಿರಿಯರ ಸಮ್ಮಿಶ್ರಣ

‘ಮಹಾರಾಜ ಪಾರ್ಕಿನಲ್ಲಿ ಕಾಂಕ್ರೀಟ್ ಕರಣ ಮಾಡದೇ ಹಿಂದಿನ ರೀತಿ ಉಳಿಯಲಿ’

- Advertisement -

Latest Posts

Don't Miss