Hassan News : ಹಾಸನ : ಶಾಸಕ ಹೆಚ್.ಪಿ.ಸ್ವರೂಪ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲಾ ಸಭೆಯಲ್ಲಿ ಸಿಎಲ್-7 ಮದ್ಯದಂಗಡಿಗಳ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕಿದ್ದು, ಪರೀಶೀಲನೆ ನಡೆಸಿ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಬಕಾರಿ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.
ಬುಧವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ MLA H.P.Swaroop, ಒಂದೇ ಸಿಎಲ್-7 ಮದ್ಯದಂಗಡಿಯಲ್ಲಿ ಹೇಳದೆ ಕೇಳದೆ ನಾಲ್ಕು ದಿಕ್ಕಿನಲ್ಲಿ ನಾಲ್ಕು ಕೌಂಟರ್‌ಗಳನ್ನು ತೆರೆದು ಮದ್ಯ ಮಾರಾಟ ಮಾಡುವ ಮೂಲಕ ನಮಗೂ ತೊಂದರೆ ನೀಡಲಾಗುತ್ತಿದೆ. ರಿಂಗ್ ರಸ್ತೆಯಲ್ಲಿ ಹೋಗುವವರೆಲ್ಲ ನಮ್ಮ ಮನೆ ಹತ್ತಿರ ಬಂದು ಬೆಳಗ್ಗೆಯಿಂದ ಸಂಜೆವರೆಗೂ ಅಲ್ಲೇ ಕುಡಿದು ಹೋಗುತ್ತಿದ್ದಾರೆ. ಇದರಿಂದ ಕಾನೂನು ವ್ಯವಸ್ಥೆಗೂ ಧಕ್ಕೆಯುಂಟಾಗಿದ್ದು, ಬಹಳಷ್ಟು ಗಲಾಟೆಗಳೂ ನಡೆಯುತ್ತಿವೆ. ಈ ಬಗ್ಗೆ ಪೊಲೀಸರು ಗಮನ ಹರಿಸಬೇಕು. ನಗರದಲ್ಲಿ ಸಿಎಲ್-7 ಹೆಚ್ಚಿರುವುದರಿಂದ ಕಾನೂನು ಸುವ್ಯವಸ್ಥೆ ಹಿಡಿತ ತಪ್ಪಿದೆ. ಹುಡುಗರು ಹಾಳಾಗಲೂ ಇದು ಪ್ರಮುಖ ಕಾರಣವಾಗಿದೆ. ಇದಕ್ಕೆಲ್ಲ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಿಎಲ್-7ಗೆ ಪರವಾನಗಿ ನೀಡುವಾಗ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ತಾವು ಯಾವುದೇ ರಾಜಕೀಯ ಒತ್ತಡ ನೀಡುವುದಿಲ್ಲ. ಅಧಿಕಾರಿಗಳು ಗಮನ ಹರಿಸಬೇಕು ಎಂದು ಸೂಚಿಸಿದರು.
ನಾಗರಾಜ್, ಕರ್ನಾಟಕ ಟಿವಿ, ಹಾಸನ
ಅಂಬಿ ಸಮಾಧಿಯ ಮೇಲೆ ಮಗನ ಮದುವೆಯ ಆಮಂತ್ರಣ ಪತ್ರಿಕೆ ಇಟ್ಟು ಪೂಜೆ ಸಲ್ಲಿಸಿದ ಸುಮಲತಾ..




