Tuesday, September 23, 2025

Latest Posts

ಹಿಂಡು ಹಿಂಡಾಗಿ ರಸ್ತೆ ದಾಟಿದ ಕಾಡಾನೆಗಳು: ಸ್ಥಳೀಯರಲ್ಲಿ ಬೆಳೆ ಹಾನಿಯ ಭಯ ಶುರು..

- Advertisement -

Hassan News: ಹಾಸನ: ಹಾಸನ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಕಾಡಾನೆ ಸಂತತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಾಡಾನೆಗಳು ರಸ್ತೆ ದಾಟುವ ವೀಡಿಯೋ ವೈರಲ್ ಆಗಿದ್ದು, ಹಿಂಡು ಹಿಂಡಾಗಿ ಕಾಡಾನೆಗಳು ರಸ್ತೆ ದಾಟುತ್ತಿದೆ.

ಈ ವೀಡಿಯೋದಲ್ಲಿ ನಲವತ್ತಕ್ಕೂ ಹೆಚ್ಚಿನ ಕಾಡಾನೆಗಳು ತಮ್ಮ ಮರಿಗಳೊಂದಿಗೆ, ಕಾಫಿ ತೋಟದಿಂದ ರಸ್ತೆ ದಾಟಿ ಮತ್ತೊಂದು ಕಾಫಿ ತೋಟಕ್ಕೆ ಹೋಗುತ್ತಿದೆ. ಇನ್ನು ಈ ದೃಶ್ಯ ಕಂಡುಬಂದಿದ್ದು, ಹಾಸನ ಜಿಲ್ಲೆಯ, ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದಲ್ಲಿ. ಕಾಡಾನೆಗಳು ರಸ್ತೆ ದಾಟುವ ವೇಳೆ ಸವಾರರು ವಾಹನ ನಿಲ್ಲಿಸಿಕೊಂಡು ನಿಂತಿದ್ದು, ಯಾರೋ ಒಬ್ಬರು ಈ ವೀಡಿಯೋವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಈಗಾಗಲೇ ಕಾಡಾನೆಗಳ ಉಪಟಳದಿಂದ ಹಾಸನ ಜನ ಬೇಸತ್ತಿದ್ದು, ಕಾಡಾನೆಗಳಿಂದ ಅಪಾರ ಪ್ರಮಾಣದ ಕಾಫಿ, ಮೆಣಸು ಸೇರಿ ಹಲವು ಬೆಳೆಗಳು ನಾಶವಾಗಿದೆ. ಆದರೆ ಇದೀಗ ಕಾಡಾನೆಗಳ ಸಂತತಿ ಹೆಚ್ಚಾಗಿದ್ದನ್ನ ಕಂಡು, ಸ್ಥಳೀಯರಲ್ಲಿ ಇನ್ನಷ್ಟು ಭೀತಿ ಹೆಚ್ಚಿದೆ. ಹಾಗಾಗಿ ಇನ್ನಾದರೂ ಶಾಶ್ವತ ಪರಿಹಾರ ಕಂಡು ಹಿಡಿಯುವಂತೆ ಜನ ಒತ್ತಾಯಿಸುತ್ತಿದ್ದಾರೆ.

ನಾಗರಾಜ್, ಕರ್ನಾಟಕ ಟಿವಿ. ಹಾಸನ

- Advertisement -

Latest Posts

Don't Miss