ಹು-ಧಾ ಮೇಯರ್ ಚುನಾವಣೆ, ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕುತಂತ್ರ: ಬಿಜೆಪಿ ಆರೋಪ

Hubballi News: ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತವಿದೆ. ಆದ್ರೆ ಕಾಂಗ್ರೆಸ್ ನಾಯಕರು ನಮ್ಮ ಪಕ್ಷದ ಸದಸ್ಯರಿಗೆ ಹಣದ ಆಮೀಷವೊಡ್ಡಿ ತಮ್ಮತ್ತ ಸೆಳೆಯುವ ಕುತಂತ್ರ ನಡೆಸಿದ್ದಾರೆ ಎಂದು ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಹಾಗೂ ಮೇಯರ್ ಈರೇಶ ಅಂಚಟಗೇರಿ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿಯಲ್ಲಿಂದು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನವರು ಬಿಜೆಪಿ ಸದಸ್ಯರಿಗೆ ಆಮೀಷವೊಡ್ಡಿ, ಅವರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಉಪ ಮೇಯರ್ ಉಮಾ ಮುಕುಂದ, ಬಿಜೆಪಿ ಸದಸ್ಯರಾದ ಸುರೇಶ ಬೇಂದ್ರೆ, ಪಕ್ಷೇತರ ಸದಸ್ಯೆ ಚಂದ್ರಿಕಾ ಮೇಸ್ತ್ರಿ ಸೇರಿದಂತೆ ಇತರರನ್ನು ಸೆಳೆಯುವ ಯತ್ನ ಮಾಡುತ್ತಿದ್ದಾರೆ. ಕೆಲವರಿಗೆ 50 ಲಕ್ಷ ರೂ. ಆಮೀಷ ವೊಡ್ಡುತ್ತಿದ್ದಾರೆ. ಪಾಲಿಕೆ ಪ್ರತಿಪಕ್ಷ ನಾಯಕರು ಕೆಲ ಬಿಜೆಪಿ ಸದಸ್ಯರಿಗೆ ಕರೆ ಮಾಡಿದ್ದರು ಎಂದಿದ್ದಾರೆ.

ಆದರೆ ಬಿಜೆಪಿ ಪಾಲಿಕೆ ಸದಸ್ಯರು ಯಾವುದೇ ಆಸೆ ಅಮೀಷಗಳಿಗೆ ಬಗ್ಗುವದಿಲ್ಲ. ಶಾಸಕರು, ಪರಿಷತ್ ಸದಸ್ಯರು ಸೇರಿದಂತೆ 48 ಜನ ಸದಸ್ಯರು ಎಲ್ಲರೂ ಒಗ್ಗಟ್ಟಾಗಿದ್ದೇವೆ. ಆದ್ರೆ ಕೆಲವರನ್ನು ಕಾಂಗ್ರೆಸ್ ನತ್ತ ಸೆಳೆಯಲು ಆಮೀಷವೊಡ್ಡುತ್ತಿದ್ದಾರೆ.  ನಮಗೂ ರಾಜಕೀಯ ತಂತ್ರಗಾರಿಕೆ ಮಾಡಲು ಬರುತ್ತದೆ. ಕಾಂಗ್ರೆಸ್ ನ ಮೂವರು ಸದಸ್ಯರು ಸಹ ನಮ್ಮೊಂದಿಗೆ ಸಂಪರ್ಕದಲ್ಲಿ ಇದ್ದಾರೆ ಎಂದರು.

ಇದೇ ವೇಳೆ ಮಾತನಾಡಿದ ಮೇಯರ್ ಈರೇಶ ಅಂಚಟಗೇರಿ, ಸ್ಮಾರ್ಟ್ ಸಿಟಿ ಯೋಜನೆ ಕಾರ್ಯರೂಪವೇ ಸರಿಯಾಗಿ ಆಗಿಲ್ಲ. ಇದುವರೆಗೂ ಒಂದು ಯೋಜನೆಯನ್ನು ಮಹಾನಗರ ಪಾಲಿಕೆಗೆ ಹಸ್ತಾಂತರವಾಗಿಲ್ಲ. ತಾಂತ್ರಿಕ ಸಮಿತಿ ರಚನೆ ಮಾಡಿ ಸ್ನಾರ್ಟ್ ಸಿಟಿ ಅಧಿಕಾರಿಗಳಿಗೆ ಮಾಹಿತಿ ಕೇಳಿದ್ರೂ ಕೂಡ ಮಾಹಿತಿಯನ್ನು ನೀಡಿಲ್ಲ. ಸ್ಮಾರ್ಟ್​ ಸಿಟಿ ಯೋಜನೆಯ ಅವ್ಯವಹಾರದಲ್ಲಿನ ಲೋಕಾಯಕ್ತ ತನಿಖೆಗೆ ಆಗ್ರಹಿಸಿ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದೇನೆ. ಐದು ವರ್ಷಗಳಲ್ಲಿ ಆಗಿರುವ ಕಾಮಗಾರಿ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುವಂತೆ ಪತ್ರದಲ್ಲಿ ಕೋರಿದ್ದೇನೆ ಎಂದರು.

ಇದಲ್ಲದೆ ‌ಪೌರಕಾರ್ಮಿಕರಿಗೆ ಕಳಪೆ ಆಹಾರ ವಿತರಣೆ ಮಾಡಲಾಗುತ್ತಿದೆ ಎಂಬುವದು ನನ್ನ ಗಮನಕ್ಕೆ ಬಂದಿದೆ. ಹೀಗಾಗಲೇ ಕಳಪೆ ಆಹಾರ ವಿತರಣೆ ಮಾಡುವ ಕಂಪನಿಗೆ ನೋಟಿಸ್ ನೀಡಲಾಗಿದೆ. ಟೆಂಡರ್ ಪಡೆದು ಬೇರೆಯವರಿಂದ ಆಹಾರ ತಯಾರಿಸಿ ವಿತರಣೆ ಮಾಡಿದ್ರೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಯಾರು ಟೆಂಡರ್ ಪಡೆದಿರುತ್ತಾರೋ ಆ ಕಂಪನಿ‌ ಅಥವಾ ಎನ್ ಜಿ ಓ ದವರೇ ನೋಡಿಕೊಳ್ಳಬೇಕು. ಈ ಬಗ್ಗೆ ಸೂಕ್ತ  ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಲಾಗುವದು ಎಂದರು.

‘ಸರ್ಕಾರಿ ನೌಕರಿ ಇದ್ರೆ ಮಾತ್ರ ಕನ್ಯೆ ಕೊಡ್ತೀವಿ ಅಂತಿದ್ದಾರೆ ಸರ್, ದಯವಿಟ್ಟು ಹುಡುಗಿ ಹುಡುಕಿಕೊಡಿ’

ತನ್ನ ಆಸ್ತಿ ಜಪ್ತಿಗೆ ಆದೇಶ- ಶಾಸಕ ಜನಾರ್ಧನ ರೆಡ್ಡಿ ಸ್ಪಷ್ಟನೆ

ಶಾಲಾ ಮಕ್ಕಳೊಂದಿಗೆ ಕುಳಿತು ಬಿಸಿಯೂಟ ಸೇವಿಸಿ ಸರಳತೆ ಮೆರೆದ ಶಿರಹಟ್ಟಿ ಶಾಸಕ..

About The Author