Hubballi News: ಹುಬ್ಬಳ್ಳಿ: ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಇಂದು ಮಠಾಧೀಶರ ಬೃಹತ್ ಸಭೆ ನಡೆದಿದ್ದು, ಮೀಸಲಾತಿಗಾಗಿ ಮಠಾಧೀಶರು ಹೊಸ ಹೋರಾಟವನ್ನು ಹುಟ್ಟುಹಾಕಿದ್ದಾರೆ. ಸಭೆಯಲ್ಲಿ ಪಂಚಪೀಠಾಧೀಶರು, ವೀರಶೈವ ಲಿಂಗಾಯತರು ಭಾಗವಹಿಸಿದ್ದರು.
ಈಗಾಗಲೇ ವೀರಶೈವ ಲಿಂಗಾಯತದ 28 ಉಪಪಂಗಡಗಳು ಓಬಿಸಿ ಪಟ್ಟಿಯಲ್ಲಿದೆ. ಗಾಣಿಗ, ಲಿಂಗಾಯತ ಕುರುಬ, ಹಡಪದ, ಮೇದಾರ, ನೇಕಾರ ಸೇರಿ 28 ಉಪಪಂಗಡಗಳು ಓಬಿಸಿ ಪಟ್ಟಿಯಲ್ಲಿದೆ. ಇನ್ನುಳಿದ 59 ಉಪ ಪಂಗಡಗಳನ್ನೂ ಓಬಿಸಿ ಪಟ್ಟಿಯಲ್ಲಿ ಸೇರಿಸಲು ಮಠಾಧೀಶರು ಒತ್ತಾಯಿಸಿದ್ದಾರೆ. ಪಂಚಮಸಾಲಿ, ಸಾದರ, ಬಣಜಿಗ, ಜಂಗಮ, ಉಪ್ಪಾರ, ಕುಂಬಾರ, ಶೀಲವಂತ ಸೇರಿ 59 ಉಪಪಂಗಡಗಳನ್ನ ಓಬಿಸಿ ಸೇರಿಸಲು ಮಠಾಧೀಶರು ಒತ್ತಾಯಿಸಿದ್ದಾರೆ. ಈ ಮೂಲಕ ಹಿಂದುಳಿದ ವರ್ಗಗಳಿಗೆ ಸಿಗುವ ಸೌಲಭ್ಯಗಳನ್ನ ಪಡೆಯಲು ಸಮುದಾಯ ಮುಂದಾಗಿದೆ.
ಪಂಚಪೀಠದ ಜಗದ್ಗುರುಗಳು, ವಿವಿಧ ಮಠಾಧೀಶರು ಈ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಮೀಸಲಾತಿ ನೀಡಿದರೆ ಬಿಜೆಪಿಗೆ ಹೆಚ್ಚು ಓಟು ಬೀಳಬಹುದು.ಇಲ್ಲವಾದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಮತಗಳು ಕೈತಪ್ಪುವ ಸಾಧ್ಯತೆ ಇದೆ. ಈ ಮೂಲಕ ಕೇಂದ್ರ ಸರ್ಕಾರ ಇಕ್ಕಟ್ಟಿಗೆ ಸಿಲುಕಿದ್ದು, ಲೋಕಸಭಾ ಎಲೆಕ್ಷನ್ ಸಮಯದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.
ವೀರಶೈವ ಲಿಂಗಾಯತ ಮಠಾಧೀಶರ ವೇದಿಕೆಯಡಿ ಚಿಂತನ ಮಂಥನ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ವೀರಶೈವ ಎಲ್ಲಾ ಪಂಗಡಗಳನ್ನ ಓಬಿಸಿಗೆ ಸೇರಿಸಲು ಹಕ್ಕೋತ್ತಾಯ ಮಾಡಲಾಯಿತು. ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದಾರಾಮ ಪಂಡತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಉಜ್ಜಯನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಮೂರುಸಾವಿರ ಮಠದ ಗುರುಸಿದ್ದರಾಜಯೋಗಿಂದ್ರ ಸ್ವಾಮೀಜಿ, ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಮುಂಡರಗಿಯ ಅನ್ನದಾನೇಶ್ವರ ಸ್ವಾಮೀಜಿಗಳ ಸೇರಿದಂತೆ ಅನೇಕ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ನಡೆಯಿತು.
ಶಾಲಾ ಮಕ್ಕಳೊಂದಿಗೆ ಕುಳಿತು ಬಿಸಿಯೂಟ ಸೇವಿಸಿ ಸರಳತೆ ಮೆರೆದ ಶಿರಹಟ್ಟಿ ಶಾಸಕ..
‘ಸರ್ಕಾರಿ ನೌಕರಿ ಇದ್ರೆ ಮಾತ್ರ ಕನ್ಯೆ ಕೊಡ್ತೀವಿ ಅಂತಿದ್ದಾರೆ ಸರ್, ದಯವಿಟ್ಟು ಹುಡುಗಿ ಹುಡುಕಿಕೊಡಿ’