Hubballi News: ಹುಬ್ಬಳ್ಳಿ: ಅವರಿಬ್ಬರೂ ಜಿಗರಿ ದೋಸ್ತರು… ಎಳೆಯ ವಯಸ್ಸಾದರು ಒಂದೇ ಜೀವ ಒಂದೇ ಭಾವ ಎನ್ನುವಂತಿತ್ತು ಅವರ ಸ್ನೇಹ.. ಇಂತಹ ಸ್ನೇಹದ ಮೇಲೆ ಯಾರ ಕಣ್ಣು ಬಿತ್ತೇನೋ.. ಎಲ್ಲರಿಗಿಂತ ಬೇಗ ಶಾಲೆಗೆ ಹೋಗಿದ್ದ ಅವರಿಬ್ಬರಲ್ಲಿ ಒಬ್ಬ ಎಂದೂ ಬಾರದ ಲೋಕಕ್ಕೆ ತೆರಳಿದ್ದಾನೆ.. ಮತ್ತೊಬ್ಬ ಆಸ್ಪತ್ರೆ ಸೇರಿದ್ದಾನೆ. ತಮ್ಮದಲ್ಲ ತಪ್ಪಿಗೆ ಅಮಾಯಕ ಜೀವೊಂದು ಬಲಿಯಾದ ಕಥೆಯಿದು.
ಊರ ಕಣ್ಣು ..ಮಾರಿ ಕಣ್ಣು ಯಾವ ಮಸಣಿ ಕಣ್ಣು ಬಿದ್ದತ್ತು ಈ ಎಳೆಯ ಸ್ನೇಹ ಜೀವಿಗಳ ಮೇಲೆ… ಈ ಸಾಲುಗಳು ಈ ಘಟನೆಗೆ ಸೂಕ್ತವಾಗಿದೆ. ಯಾಕೆಂದರೆ ತನ್ನದಲ್ಲ ತಪ್ಪಿಗೆ, ಮತ್ತ್ಯಾರೋದು ನಿರ್ಲಕ್ಷ್ಯಕ್ಕೆ ಬಾಳಿ ಬದುಕ ಬೇಕಾಗಿದ್ದ ಮಗವೊಂದು ಶಾಲೆಯ ಆವರಣದಲ್ಲಿಯೇ, ತನ್ನ ಪ್ರಾಣ ಸ್ನೇಹತನ ಎದುರೇ ಜೀವ ಬಿಟ್ಟ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಕಿರೇಸೂರು ಗ್ರಾಮದಲ್ಲಿ ನಡೆದಿದೆ..ಗ್ರಾಮದ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಿರ್ಮಾಣ ಹಂತದ ಗೋಡೆ ಕುಸಿದು ವಿದ್ಯಾರ್ಥಿ 9 ವರ್ಷದ ವಿಶೃತ್ ಬೆಳಗಲಿ ಸಾವನ್ನಪ್ಪಿದ್ದಾನೆ..
ಸ್ನೇಹಿತನ್ನು ಕಾಪಾಡಲು ಹೋದ ಪ್ರಭು ನಾಗಾವಿ ಎಂಬ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ. ವಿವೇಕ ಯೋಜನೆಯಡಿ ಹೆಚ್ಚುವರಿ ಕೊಠಡಿ ಮಂಜೂರಾಗಿದ್ದು, ಹಲವಾರು ತಿಂಗಳಿಂದ ಈ ಕಟ್ಟಡ ಕಾಮಗಾರಿ ನಡೆಯುತ್ತಿದೆ. ನಿನ್ನೆ ಮತ್ತೊಂದು ಹಂತದ ಗೋಡೆ ನಿರ್ಮಾಣ ಮಾಡಲಾಗಿತ್ತು. ಹೀಗಾಗಿ ಗೋಡೆ ಇನ್ನೂ ಹಸಿಯಾಗಿತ್ತು. ಇಂದು ವಿಶೃತ್ ಮತ್ತು ಪ್ರಜ್ವಲ್ ಬೆಳಗ್ಗೆ ಇಬ್ಬರು ಬೇಗ ಶಾಲೆಗೆ ಹೋಗಿದ್ದಾರೆ. ಇನ್ನೂ ಶಾಲೆಯ ಸಮಯವಾಗಿದರ ಹಿನ್ನಲೆ ಶಾಲೆಯಲ್ಲಿ ಯಾವುದೇ ಶಿಕ್ಷಕರು ಇರಲಿಲ್ಲ. ಹೀಗಾಗಿ ನಿರ್ಮಾಣದ ಹಂತದ ಕಟ್ಟಡ ಬಳಿಗೆ ಮೂತ್ರವಿರ್ಸಜನೆಗೆ ತೆರಳಿದ್ದು, ಈ ವೇಳೆ ಏಕಾಏಕಿ ಗೋಡೆ ಕುಸಿದ ಈ ಬಾಲಕರ ಮೇಲೆ ಬಿದ್ದಿದೆ. ಗೋಡೆ ಬಿದ್ದ ರಭಸಕ್ಕೆ ವಿಶೃತ್ ಸ್ಥಳದಲ್ಲೇ ಸಾವಿನಪ್ಪಿದ್ದಾನೆ. ಇನ್ನೂ ಸ್ನೇಹಿತನನ್ನು ಕಾಪಾಡಲು ಹೋದ ಪ್ರಭು ಮೇಲೆ ಇಟ್ಟಿಗೆ ಬಿದ್ದು ಕಾಲುಗಳಿಗೆ ಗಂಭೀರಗಾಯಗಳಾಗಿವೆ.
ಇನ್ನೂ ವಿದ್ಯಾರ್ಥಿಯ ಈ ಸಾವಿಗೆ ಗುತ್ತಿಗೆದಾರನ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗುತ್ತಿದೆ.. ಕಟ್ಟಡ ಕಳಪೆ ಕಾಮಗಾರಿ ಒಂದು ಕಡೆ ಮತ್ತೊಂದು ಕಡೆ ಕಟ್ಟಡಕ್ಕೆ ಭದ್ರತಾ ಸಿಬ್ಬಂದಿ ನೇಮಿಸುವಂತೆ ಶಾಲಾ ಆಡಳಿತ ಮಂಡಳಿ ಹೇಳಿದ್ದರೂ, ಯಾವುದೇ ಕಾವಲುಗಾರರನ್ನು ನೇಮಿಸಿದ ಇರುವುದು ಈ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ. ಸದ್ಯ ಪ್ರಭುಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಮೃತ ವಿಶೃತ್ ಶಾಲೆಯಲ್ಲಿ ಬಹಳಷ್ಟು ಬುದ್ದಿಂತ ವಿದ್ಯಾರ್ಥಿ, ಇಂತಹ ವಿದ್ಯಾರ್ಥಿಗೆ ದೇವರು ಈ ರೀತಿ ಮೋಸ ಮಾಡತ್ತಾನ ಅಂತ ಅಂದುಕೊಂಡಿರಲ್ಲ ಅಂತ ಶಿಕ್ಷಕರು ಕಣ್ಣಿರು ಹಾಕಿದ್ರೆ, ಘಟನೆ ಬಗ್ಗೆ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಪರಿಹಾರಕ್ಕೆ ಮನವಿ ಮಾಡಲಾಗುತ್ತದೆ. ಜೊತೆಗೆ ಗುತ್ತಿಗೆದಾರನ ಮೇಲೆ ಕ್ರಮವನ್ನು ಸಹ ತೆಗೆದುಕೊಳ್ಳಲಾಗುತ್ತದೆ ಎನ್ನುವುದು ಅಧಿಕಾರಿಗಳ ಮಾತು..
ಒಟ್ಟಿನಲ್ಲಿ ಯಾರದ್ದೋ ನಿರ್ಲಕ್ಷ್ಯಕ್ಕೆ ಅರಳುವ ಮುನ್ನವೆ ಹಸು ಕಂದಮ್ಮವೊಂದು ಕಮರಿಹೋಗಿದೆ. ನೆಚ್ಚಿನ ಶಾಲೆಯಲ್ಲಿ ಪ್ರಾಣ ಸ್ನೇಹನ ಎದುರೇ ಜೀವ ಬಿಟ್ಟ ವಿಶೃತ್ ಗೆ ಮತ್ತು ಕುಟುಂಬಕ್ಕೆ ನ್ಯಾಯ ಸೀಗಬೇಕಿದೆ..
ಸಂಗಮೇಶ್ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ
ಸಾಲ ವಸೂಲಿಗೆ ಹೋದ ಸಿಬ್ಬಂದಿಯನ್ನ ಹಗ್ಗದಿಂದ ಕಟ್ಟಿಹಾಕಲು ಮುಂದಾದ ಮಹಿಳೆಯರು..
ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ಹುಟ್ಟುಹಬ್ಬ ಹಿನ್ನೆಲೆ, ನೇತ್ರ ತಪಾಸಣೆ, ರಕ್ತದಾನ ಶಿಬಿರ
ಆದಿಪುರುಷ್ ಚಿತ್ರದ ಕನ್ನಡ ಅವತರಣಿಕೆ ಬಿಡುಗಡೆಗೆ KRG ಸ್ಟುಡಿಯೋಸ್ ನಿರ್ಧಾರ..