Thursday, November 7, 2024

Latest Posts

ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿದ್ಯಾರ್ಥಿಗಳಿಗೆ ಲೆಫ್ಟ್ ರೈಟ್ ತೆಗೆದುಕೊಂಡ ಪೊಲೀಸರು..

- Advertisement -

Hassan News: ಹಾಸನ: ಹೊಳೆನರಸೀಪುರ: ಲೇಡಿ ಕಂಡಕ್ಟರ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿದ್ಯಾರ್ಥಿಗಳಿಗೆ ಗ್ರಾಮಾಂತರ ಪೊಲೀಸರು ಲೆಫ್ಟ್ ರೈಟ್ ತೆಗೆದುಕೊಂಡ ಪ್ರಸಂಗ ನಡೆಯಿತು.

ಮೈಸೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ದೊಡ್ಡ ಕಾಡನೋರಿನ ಬಸ್ ನಿಲ್ದಾಣದ ಬಳಿ ಪ್ರಯಾಣಿಕರನ್ನು ಬಸ್ಸಿಗೆ ಹತ್ತಿಸಿಕೊಳ್ಳಲು ನಿಲ್ಲಿಸಿದ್ದರು.  ಈ ಬಸ್ಸಿಗೆ ಸುಮಾರು 20ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಬಸ್ಸಿಗೆ ಹತ್ತಿಕೊಂಡರು.

ಈ ವಿದ್ಯಾರ್ಥಿಗಳನ್ನು ಟಿಕೆಟ್ ತೆಗೆದುಕೊಳ್ಳಿ ಇಲ್ಲದಿದ್ದರೆ ಪಾಸ್ ಇದ್ದರೆ ತೋರಿಸಿ ಎಂದು ಲೇಡಿ ಕಂಡಕ್ಟರ್ ಕೇಳಿದ್ದಾರೆ ಅಷ್ಟೇ. ಬಸ್ಸು ಬರುತ್ತಿರುವ ವೇಳೆ ಮಾರ್ಗ ಮಧ್ಯದಲ್ಲಿ ಲೇಡಿ ಕಂಡಕ್ಟರ್ ಅನ್ನು ಕಾಲೇಜು ವಿದ್ಯಾರ್ಥಿಗಳು ಉದ್ದಕ್ಕೂ ರೇಗಿಸಿಕೊಂಡೆ ಪಟ್ಟಣಕ್ಕೆ ಬರುತ್ತಿದ್ದರು.

ಬಸ್ ಚಾಲಕ ಸಹ ವಿದ್ಯಾರ್ಥಿಗಳನ್ನು ಪ್ರಶ್ನೆ ಮಾಡಿದಾಗ ಚಾಲಕನ ಮೇಲೂ ಸಹ ಹರಿಹಾಯ್ದಿದ್ದಾರೆ. ಇದನ್ನು ಮನಗಂಡ ಚಾಲಕ ಹಾಸನ ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಗ್ರಾಮಾಂತರ ಪೊಲೀಸ್ ಠಾಣೆ ಬಳಿಗೆ ಬಸ್ಸನ್ನು ತಂದು ನಿಲ್ಲಿಸಿದ್ದಾನೆ. ತಕ್ಷಣ ಕಾಣೆಯಿಂದ ಹೊರಬಂದ ಪೊಲೀಸರು ಬಸ್ಸಿನಲ್ಲಿದ್ದ ಕೆಲ ವಿದ್ಯಾರ್ಥಿಗಳನ್ನು ಪರಿಶೀಲಿಸಿ, ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು. ಬಳಿಕ ವಿದ್ಯಾರ್ಥಿಗಳ ಬಳಿ ಪೊಲೀಸರು ಇನ್ನು ಮುಂದೆ ಹೀಗೆಲ್ಲಾ ಮಾಡದಂತೆ ಹಿಂಬರಹ ಬರೆಸಿಕೊಂಡು ಕಳುಹಿಸಿದ್ದಾರೆ ಎನ್ನಲಾಗಿದೆ.

ನಾಗರಾಜ್, ಕರ್ನಾಟಕ ಟಿವಿ ಹಾಸನ

ಕೊಲೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ: ಧಾರವಾಡ ಹೈಕೋರ್ಟ್ ತೀರ್ಪು…!

ಯೋಗದಿಂದ ರೋಗ ದೂರ: ವಿಶ್ವ ಯೋಗದಿನಕ್ಕೆ ಕೇಂದ್ರ ಸಚಿವ ಜೋಶಿ ಚಾಲನೆ

ಗಿನ್ನಿಸ್ ದಾಖಲೆಗೆ ನಾಂದಿ ಹಾಡಿದ ಜನಾರ್ದನ್ ಪಿ ಜಾನಿ .

- Advertisement -

Latest Posts

Don't Miss