Hubballi News: ಹುಬ್ಬಳ್ಳಿ: ರಾಜ್ಯ ಸರ್ಕಾರದ ಗ್ಯಾರಂಟಿ ಜನಜೀವನಕ್ಕೆ ವಾರೆಂಟಿ ಸಿಕ್ಕಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ವಾಣಿಜ್ಯೋದ್ಯಮಗಳಿಗೆ ದೊಡ್ಡಮಟ್ಟದ ಹೊಡೆತವಂತೂ ಬಿದ್ದಿದೆ. ವಿದ್ಯುತ್ ದರ ಏರಿಕೆ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಾಣಿಜ್ಯೋದ್ಯಮ ಸಂಸ್ಥೆಗಳು ಸರ್ಕಾರಕ್ಕೆ ಹಾಗೂ ಕೆ.ಇ.ಆರ್.ಸಿಗೆ ವಾರದ ಗಡುವು ನೀಡಿತ್ತು. ಆದರೆ ಗಡುವು ಮುಗಿದಿದ್ದು, ಈಗ ಗುಡುಗು ಹಾಕಲು ಮುಂದಾಗಿವೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಿಸ್ತಿವಿ ನೋಡಿ.
ವಿದ್ಯುತ್ ದರ ಏರಿಕೆ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವುದು ಒಂದು ಕಡೆಯಾದರೇ ಮತ್ತೊಂದು ಕಡೆಯಲ್ಲಿ ವಾಣಿಜ್ಯೋದ್ಯಮಗಳಿಗೆ ಆರ್ಥಿಕ ಸಂಕಷ್ಟ ತಂದೊಡ್ಡಿದೆ. ಈ ನಿಟ್ಟಿನಲ್ಲಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದೆ. ಹೌದು.. ವಿದ್ಯುತ್ ದರದಲ್ಲಿ ಅಸಹಜ ಏರಿಕೆ ವಿರೋಧಿಸಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು (ಕೆಸಿಸಿಐ) ಇತರೆ ಎಲ್ಲಾ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ಸಂಘ- ಸಂಸ್ಥೆಗಳ ಜೊತೆಗೂಡಿ ಜೂನ್ 22ರಂದು ರಾಜ್ಯದಾದ್ಯಂತ ಒಂದು ದಿನದ ಬಂದ್‍ಗೆ ಕರೆ ನೀಡಿದೆ. ಎಲ್ಲ ಉದ್ಯಮಿಗಳು, ವ್ಯಾಪಾರಸ್ಥರು ಅಂದು ತಮ್ಮ ವಹಿವಾಟು ಬಂದ್ ಮಾಡುವಂತೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ತಿಳಿಸಿದೆ. ಕರ್ನಾಟಕ ಬಂದ್ ಗೆ 24ಜಿಲ್ಲೆಯ ಸಂಸ್ಥೆಗಳು ಹಾಗೂ ವಿವಿಧ ವಾಣಿಜ್ಯ ಚಟುವಟಿಕೆಗಳ ಮುಖ್ಯಸ್ಥರು ಬೆಂಬಲ ಸೂಚಿಸಿದ್ದು, ಶಾಂತಿಯುತ ರೀತಿಯಲ್ಲಿ ಬಂದ್ ಮಾಡಲು ನಿರ್ಧಾರ ಮಾಡಿದೆ.
ಇನ್ನೂ ವಿದ್ಯುತ್ ಶುಲ್ಕ ಹೆಚ್ಚಳದಿಂದ ವ್ಯಾಪಾರಸ್ಥರು, ಜನಸಾಮಾನ್ಯರು ಮತ್ತು ಕೈಗಾರಿಕೆಗಳ ಮೇಲೆ ಆಗಿರುವ ದುಷ್ಪರಿಣಾಮ ಕುರಿತು ಸರ್ಕಾರಕ್ಕೆ ತಿಳಿಸುವ ಪ್ರಯತ್ನವನ್ನು 8 ದಿನಗಳಿಂದ ಮಾಡಿದ್ದೇವೆ. ಆದರೆ, ಅಧಿಕಾರಿಗಳು ಮತ್ತು ಸರ್ಕಾರದ ಪ್ರತಿನಿಧಿಗಳಿಂದ ಸ್ಪಂದನೆ ಸಿಕ್ಕಿಲ್ಲ. ಅದಕ್ಕೆ ಅನಿವಾರ್ಯವಾಗಿ ಬಂದ್‌ಗೆ ಕರೆ ನೀಡಿದ್ದೇವೆ ಎಂದು ವಾಣಿಜ್ಯೋದ್ಯಮ ಸಂಸ್ಥೆ ಮಾಹಿತಿ ನೀಡಿದೆ. ಜೂನ್ 22 ರಂದು ಉದ್ಯಮ, ವ್ಯಾಪಾರ, ವಹಿವಾಟು ಸಂಪೂರ್ಣ ಬಂದ್ ಮಾಡಲಾಗುವುದು. ಏಳು ದಿನಗಳ ಗಡುವು ನೀಡಿದರೂ ರಾಜ್ಯ ಸರ್ಕಾರ, ವಿದ್ಯುತ್ ಸರಬರಾಜು ಕಂಪನಿಗಳು ಸ್ಪಂದಿಸಿಲ್ಲ. 24 ಜಿಲ್ಲೆಗಳ ವಾಣಿಜ್ಯೋದ್ಯಮ ಸಂಸ್ಥೆಗಳು, ಸಂಘ ಸಂಸ್ಥೆಗಳು ಹಾಗೂ ಕೈಗಾರಿಕೆ ಉದ್ಯಮಿಗಳೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಾಗಿದೆ. ಸರ್ಕಾರ ಹಾಗೂ ಕೆಇಆರ್‌ಸಿ ವಿದ್ಯುತ್ ದರ ಏರಿಕೆ ಹಿಂಪಡೆಯಬೇಕು. ಈ ನಿಟ್ಟಿನಲ್ಲಿ ಶಾಂತಿಯುತ ಪ್ರತಿಭಟನೆಯ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಸೂಚನೆ ನೀಡಿದ್ದಾರೆ.
ಒಟ್ಟಿನಲ್ಲಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ಸರ್ಕಾರ ಹಾಗೂ ಕೆ.ಇ.ಆರ್.ಸಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದು, ತುರ್ತು ಸೇವೆ ಹೊರತುಪಡಿಸಿ ಬಹುತೇಕ ಬಂದ್ ಇರಲಿದ್ದು, ಕರ್ನಾಟಕ ಬಂದ್ ಯಾವ ರೀತಿ ಇರಲಿದೆ ಎಂಬುವುದನ್ನು ಕಾದುನೋಡಬೇಕಿದೆ.
ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿದ್ಯಾರ್ಥಿಗಳಿಗೆ ಲೆಫ್ಟ್ ರೈಟ್ ತೆಗೆದುಕೊಂಡ ಪೊಲೀಸರು..
‘ಗ್ಯಾರಂಟಿ ಹೆಸರಲ್ಲಿ ಮಂಕುಬೂದಿ ಎರಚಿದ್ದಾರೆ: ಸಾಲ ಮನ್ನಾ ವಿಚಾರದಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ’