ನಿರ್ವಾಹಕಿಯನ್ನ ಅಸಹ್ಯವಾಗಿ ನಿಂದಿಸಿದ ವೃದ್ಧೆ: ಬಸ್‌ನಲ್ಲಿಯೇ ವೃದ್ಧೆಗೆ ಕಪಾಳಮೋಕ್ಷ ಮಾಡಿದ ನಿರ್ವಾಹಕಿ

Hubballi News: ಹುಬ್ಬಳ್ಳಿ: ಕುಂದಗೋಳದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಬಸ್ಸಿನ ನಿರ್ವಾಹಕಿಯೊಬ್ಬರು ವೃದ್ಧೆಯ ಮೇಲೆ ಹಲ್ಲೆ ನಡೆಸಿದ ಘಟನೆ ಇಂದು ಬೆಳಗಿನ ಜಾವ ನಡೆದಿದ್ದು ನಿರ್ವಾಹಕಿಯ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಬೆಳ್ಳಿಗ್ಗೆ 7 ಗಂಟೆಗೆ ಕುಂದಗೋಳದಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಮಾರ್ಗಮಧ್ಯ ಶೆರೇವಾಡ ಬಳಿ ನಿರ್ವಾಹಕಿ ವೃದ್ದ ಮಹಿಳೆಯ ಜೊತೆ ಜಗಳ ತೆಗೆದಿದ್ದಾರೆ. ಜಗಳ ಅತಿರೇಕಕ್ಕೆ ಹೋಗುತ್ತಿದ್ದ ಹಾಗೆ ನಿರ್ವಾಹಕಿ ವೃದ್ಧೆ ಎಂಬುದನ್ನು ನೋಡದೆ ವೃದ್ಧೆಗೆ ಕಪಾಳ ಮೋಕ್ಷ ಮಾಡಿದ್ದಾರೆ. ಇದನ್ನು ನೋಡುತ್ತಿದ್ದ ಸಹ ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿ ಈ ವೀಡಿಯೋ ಸೆರೆ ಹಿಡಿದಿದ್ದಾರೆ.

ವೃದ್ಧೆ ಎಂಬುದನ್ನು ನೋಡದೆ ಪ್ರಯಾಣಿಕರ ಸಮ್ಮುಖದಲ್ಲಿಯೇ ಕಪಾಳ ಮೋಕ್ಷ ಮಾಡಿದ ನಿರ್ವಾಹಕಿಯ ಮೇಲೆ ಹಿರಿಯ ಸಾರಿಗೆ ಇಲಾಖೆಯ ಅಧಿಕಾರಿಗಳು ಯಾವ ರೀತಿಯಾದ ಕ್ರಮವನ್ನು ಕೈಗೂಳ್ಳುತ್ತಾರೆ ಎಂಬುದನ್ನು ಇದೀಗ ಕಾದು ನೋಡಬೇಕಿದೆ.

‘ಯೋಜನೆ ಜಾರಿಯಾಗಲು ವಿಳಂಬವಾಗಬಹುದು. ಆದರೆ ನಾವು ಅಕ್ಕಿ ಕೊಟ್ಟೇ ಕೊಡುತ್ತೇವೆ’

‘ಸಿದ್ದರಾಮಯ್ಯನವರೇ ನೀವೇನೂ ಆಕಾಶದಿಂದ ಇಳಿದು ಬಂದಿದ್ದೀರಾ?’

ಕಾಂತಾರಾ-2ಗೆ ಕುದುರೆ ಸವಾರಿ, ಕಲರಿ ಪಯಟ್ಟು ಕಲಿಕೆಯಲ್ಲಿ ರಿಷಬ್ ಬ್ಯುಸಿ.!

About The Author