Kolar News: ಕೋಲಾರ: ಕೋಲಾರದಲ್ಲಿ ಯುವಕನೋರ್ವ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕೋತಿ ಮರಿಯನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾನೆ.
ಕೋಲಾರದ ಅಂತಗಂಗೆ ಬೆಟ್ಟದ ದೇವಾಲಯದ ಬಳಿ ಕೋತಿ ಮರಿಯೊಂದು ಅಸ್ವಸ್ಥವಾಗಿ ಬಿದ್ದಿತ್ತು. ಅದರ ಎದೆ ಭಾಗದಲ್ಲಿ ತೀವ್ರವಾಗಿ ಗಾಯವಾಗಿತ್ತು. ಈ ವೇಳೆ ಕೋಲಾರದ ಪಾಲಸಂದ್ರ ಲೇಔಟ್ ನ ಯುವಕ ಪ್ರದೀಪ್ ಎಂದಿನಂತೆ ದಕ್ಷಿಣ ಕಾಶಿ ಅಂತರಗಂಗೆಗೆ ವಾಕಿಂಗ್ಗೆ ಅಂತಾ ಹೋಗಿದ್ದರು. ಈ ವೇಳೆ ಅಸ್ವಸ್ಥಗೊಂಡ ಕೋತಿ ಮರಿಯನ್ನು, ವೈದ್ಯರ ಬಳಿ ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.
ಅಲ್ಲದೇ ಆ ಕೋತಿ ಮರಿಯನ್ನು ಒಂದು ದಿನ ತನ್ನ ಮನೆಯಲ್ಲೇ ಇರಿಸಿಕೊಂಡು, ನಂತರ ಕಾಡಿಗೆ ಬಿಟ್ಟು ಬಂದಿದ್ದಾರೆ. ರಾಷ್ಟೀಯ ಮಟ್ಡದ ಮೋಟೋ ಜಿಪಿ ಬೈಕ್ ರೇಸ್ ಭಾಗವಹಿಸಿದ್ದ ಪ್ರದೀಪ್, ಕೋತಿ ಮರಿಯನ್ನು ರಕ್ಷಿಸಿ ಆರೈಕೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಯುವಕನ ಕಾರ್ಯಕ್ಕೆ ಪ್ರಾಣಿ ಪ್ರಿಯರು, ಜಿಲ್ಲೆಯ ಜನರು ಶ್ಲಾಘನೆ ಮಾಡಿದ್ದಾರೆ.
ಯೂಸ್ ಲೆಸ್ ಫೆಲೋ ಇದೆಲ್ಲಾ ಇಟ್ಕೊಬೇಡ: ನಗರಸಭೆ ಆಯುಕ್ತರ ವಿರುದ್ಧ ಸಚಿವ ರಾಜಣ್ಣ ಗರಂ
‘ಮೊದಲು ಸುಳ್ಳು ಸುದ್ದಿ ಹಬ್ಬಿಸಿರುವ ಡಿಕೆಶಿ, ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಬೇಕು’




