- Advertisement -
Hubablli News: ಹುಬ್ಬಳ್ಳಿ: ಕಳೆದ ಎಂಟು ದಿನಗಳಿಂದ ತೆರವಾಗಿದ್ದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಹುದ್ದೆಗೆ ಪೊಲೀಸ್ ಇಲಾಖೆಯಿಂದ 2011 ಬ್ಯಾಚಿನ ಐಪಿಎಸ್ ಅಧಿಕಾರಿಯಾದ ಸಂತೋಷ್ ಬಾಬು ಅವರನ್ನು ಪ್ರಭಾರಿಯಾಗಿ ನೇಮಕ ಮಾಡಲಾಗಿದೆ.
ರಮಣ್ ಗುಪ್ತ ಅವರ ವರ್ಗಾವಣೆ ನಂತರ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಕಮಿಷನರ್ ಸ್ಥಾನ ತೆರುವಾಗಿ ದಿನಗಳು ಕಳೆದರೂ ರಾಜ್ಯ ಸರ್ಕಾರ ಯಾವೊಬ್ಬ ಅಧಿಕಾರಿಯನ್ನು ಇಲ್ಲಿಗೆ ನಿಯೋಜನೆ ಮಾಡಿರಲಿಲ್ಲ.
ಹೀಗಾಗಿ ಕಾನೂನು ಸುವ್ಯವಸ್ಥೆ ಹದಗೆಡುವ ಮುನ್ನವೇ ಇದೀಗ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಆಗಿ ಸಂತೋಷ್ ಬಾಬು ಅವರನ್ನು ಪ್ರಭಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ವರುಣನ ಕೃಪೆಯಿಂದ ರೈತರ ಮೊಗದಲ್ಲಿ ಮಂದಹಾಸ: ಧಾರವಾಡದಲ್ಲಿ ಕೃಷಿ ಕಾರ್ಯ ಆರಂಭ
‘ಪ್ರವಾಸಕ್ಕೆ ಹೋಗಿರೋ ನನ್ನ ಹೆಂಡ್ತಿ ಇನ್ನೂ ಬಂದಿಲ್ಲಾ, ನಾನ್ ಸಾಯ್ಬೇಕು’
- Advertisement -


