Mandya News: ಮಂಡ್ಯ: ಚುನಾವಣೆಯಲ್ಲಿ ಸೋತರೂ, ಬಿಜೆಪಿ ಅಭ್ಯರ್ಥಿ ಒಬ್ಬರು, ಕೊಟ್ಟ ಮಾತು ಉಳಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮಂಡ್ಯದ ಮದ್ದೂರು ಬಿಜೆಪಿ ಅಭ್ಯರ್ಥಿಯಾಗಿದ್ದ ಸಾದೊಳಲು ಸ್ವಾಮಿ ಅವರು, ವಿಶ್ವೇಶ್ವರಯ್ಯ ಪ್ರತಿಮೆಗೆ ಛಾವಣಿ ನಿರ್ಮಿಸಲು ಚಾಲನೆ ನೀಡಿದ್ದಾರೆ. ಕ್ಷೇತ್ರದ ಮಾದರಹಳ್ಳಿ ಗ್ರಾಮದಲ್ಲಿರುವ ವಿಶ್ವೇಶ್ವರಯ್ಯ ಪ್ರತಿಮೆಗೆ ಛಾವಣಿ ಇರಲಿಲ್ಲ. ಹಾಗಾಗಿ ಇಲ್ಲಿನ ಜನ ಸಾದೊಳಲು ಸ್ವಾಮಿ ಅವರಲ್ಲಿ ಒಂದು ಛಾವಣಿ ನಿರ್ಮಿಸಿ ಕೊಡುವಂತೆ ಕೇಳಿದ್ದರು. ಚುನಾವಣೆಗೂ ಮುನ್ನ ಛಾವಣಿ ನಿರ್ಮಿಸಲು ಒಪ್ಪಿಕೊಂಡಿದ್ದರು. ಹಾಗಾಗಿ ಇವರು ಚುನಾವಣೆಯಲ್ಲಿ ಸೋತರೂ ಕೂಡ, ಛಾವಣಿ ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
3 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದ್ದು, ಸ್ಥಳೀಯರು ಸಾದೊಳಲು ಸ್ವಾಮಿಯವರ ಪ್ರಾಮಾಣಿಕತೆಯನ್ನು ಮೆಚ್ಚಿದ್ದಾರೆ. ಅಲ್ಲದೇ ಧನ್ಯವಾದ ಸಮರ್ಪಿಸಿದ್ದಾರೆ.
ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಸೇಡು ತೀರಿಸಿಕೊಳ್ಳಲು ತಮ್ಮ ಶಿಷ್ಯನನ್ನೇ ಕರೆತರಲು ಮುಂದಾದ್ರಾ ಶೆಟ್ಟರ್?
‘ನೀವು ಸತ್ಯ ಹರಿಶ್ಚಂದ್ರರ ತುಂಡಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಆಯುಷ್ಯ ಇಲ್ಲ’