Political News: ಭಾರತರತ್ನ ಪ್ರೊ. ಸಿ ಎನ್ ಆರ್ ರಾವ್ ಅವರ 9೦ ನೇ ವರ್ಷದ ಹುಟ್ಟು ಹಬ್ಬದ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ಹಾರ್ದಿಕ ಶುಭಾಶಯ ಕೋರಿದ್ದಾರೆ.
ಪ್ರೊ. ಸಿ ಎನ್ ಆರ್ ರಾವ್ ಅವರು ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನ ಹಾಗೂ ರಾಸಾಯನಿಕ ಅಧ್ಯಯನ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆ ಮಹೊನ್ನತವಾದದ್ದು, ಇಸ್ರೋ ಹಾಗೂ ಜವಹರಲಾಲ್ ಉನ್ನತ ವಿಜ್ಞಾನ ಅಧ್ಯಯನ ಕೇಂದ್ರ ಸೇರಿದಂತೆ ಅವರು ಭಾರತೀಯ ವಿಜ್ಞಾನ ತಂತ್ರಜ್ಞಾನ ಸಂಬಂಧಿತ ಅನೇಕ ಸಂಸ್ಥೆಗಳ ಮುಖ್ಯಸ್ಥರಾಗಿ ಸಲ್ಲಿಸಿರುವ ಸೇವೆ ಅನನ್ಯವಾದದ್ದು. ಭಾರತ ಸರ್ಕಾರದ ಅತ್ಯುನ್ನತ ಗೌರವ
ಭಾರತ ರತ್ನ ಪ್ರಶಸ್ತಿಗೆ ಭಾಜನರಾದ ಪ್ರೊಫೆಸರ್ ಸಿಎನ್ಆರ್ ರಾವ್ ಅವರಿಗೆ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರನ್ನು ತುಂಬು ಹೃದಯದಿಂದ ಅಭಿನಂದಿಸುತ್ತೇನೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಚುನಾವಣೆಯಲ್ಲಿ ಸೋತರೂ, ಕೊಟ್ಟ ಮಾತು ಉಳಿಸಿಕೊಂಡ ಮದ್ದೂರು ಬಿಜೆಪಿ ಅಭ್ಯರ್ಥಿ
2024ಕ್ಕೆ Narendra Modi ಪ್ರಧಾನಿ ಆಗ್ತಾರಾ.? ಆಗಲ್ವಾ.? ನಮೋಗೆ ಸ್ತ್ರೀ ಕಂಟಕ ಇದೆಯಾ.?




