Saturday, July 12, 2025

Latest Posts

ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಹುಡುಕಾಟ: ಬಿಜೆಪಿಗೆ ಮತ್ತೊಂದು ಸವಾಲು…!

- Advertisement -

Political News: ಹುಬ್ಬಳ್ಳಿ: ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿಗೆ ಈಗ ಮತ್ತೇ ಹಿನ್ನಡೆಯಾಗುತ್ತಿದೆ. ಗೆದ್ದು ಬೀಗುತ್ತೇನೆ ಎಂದ ನಂಬಿದ್ದ ಕಮಲ ಪಡೆ ಕಳೆದ ಚುನಾವಣೆಯಲ್ಲಿ ದೂಳಿಪಟವಾಗಿತ್ತು. ಈಗ ಅಂತಹುದೇ ಮತ್ತೊಂದು ಸಂಕಷ್ಟಕ್ಕೆ ಬಿಜೆಪಿಗೆ ಎದುರಾಗಿದೆ. ಅಷ್ಟಕ್ಕೂ ಏನಾಗ್ತಿದೆ ಕಮಲ ಪಡೆಯಲ್ಲಿ ಅಂತೀರಾ ಇಲ್ಲಿದೆ ನೋಡಿ ಇಂಟ್ರಸ್ಟಿಂಗ್ ಸ್ಟೋರಿ..

ಬಿಜೆಪಿ ಭದ್ರಕೋಟೆಯಲ್ಲಿಯೇ ವಿಲ ವಿಲ ಒದ್ದಾಡುತ್ತಿದೆ ಕಮಲ ಪಡೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಆಗುತ್ತಿದೆ ಭಾರಿ ಹಿನ್ನಡೆ. ಹೌದು.. ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಸಿಗುತ್ತಿಲ್ಲ ಅಭ್ಯರ್ಥಿಗಳು ಎಂಬುವಂತ ಮಾತು ಕೇಳಿ ಬರುತ್ತಿದೆ. ಉತ್ತರ ಕರ್ನಾಟಕದ 11 ಕ್ಷೇತ್ರಗಳಲ್ಲಿ 6 ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳಿಲ್ಲ. ಸಂಸದರು ನಾನ್ ಒಲ್ಲೆ ನಾನ್ ಒಲ್ಲೆ ಎನ್ನುತ್ತಿದ್ದಾರೆ. ಇದರಿಂದಾಗಿ ಬಿಜೆಪಿಗೆ ಹೊಸ ತಲೆ ನೋವು ಆರಂಭವಾಗಿದೆ. ಈಗಾಗಲೇ ಕೈಯಲ್ಲಿದ್ದ ತುತ್ತನ್ನು ಕೈ ಚೆಲ್ಲಿಸಿಕೊಂಡ ಬಿಜೆಪಿ ಮತ್ತೊಮ್ಮೆ ರಾಜಕೀಯ ತಂತ್ರ ಕೈ ತಪ್ಪಿ ಲೋಕಸಭಾ ಚುನಾವಣೆಯಲ್ಲಿಯೂ ಸ್ಪಷ್ಟ ಬಹುಮತ ಕಳೆದುಕೊಳ್ಳಲಿದೆಯಾ ಎಂಬುವಂತ ಅನುಮಾನ ನಿಜಕ್ಕೂ ಸಾರ್ವಜನಿಕ ವಲಯದಲ್ಲಿ ದಟ್ಟವಾಗಿದೆ. ಬಿಜೆಪಿ ಭದ್ರಕೋಟೆಯನ್ನು ಕೈ ಪಡೆ ಛಿದ್ರ ಮಾಡಲು ರಣತಂತ್ರ ರೂಪಿಸಿದ್ದು, ಉತ್ತರ ಕರ್ನಾಟಕದ 11 ಕ್ಷೇತ್ರಗಳಲ್ಲಿ 7 ಕ್ಷೇತ್ರಗಳನ್ನು ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ಮುಖಂಡರ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇನ್ನೂ ಈ ನಡುವೆ ಬಿಜೆಪಿಗೆ ಸಿಗುತ್ತಿಲ್ಲ ಅಭ್ಯರ್ಥಿಗಳು ಎಂಬುವಂತ ಮಾತು ಕಾಂಗ್ರೆಸ್ ವಲಯಕ್ಕೆ ಮತ್ತೊಂದು ಶಕ್ತಿ ತುಂಬಿದ್ದು, ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಕಾರ್ಯವೈಖರಿ ಇಂಬುಗೊಳಿಸಿದೆ. ಈ ನಡುವೆ ಹೊಸ ಅಭ್ಯರ್ಥಿಗಳ ಹುಡುಕಾಟ ನಡೆಸಿರುವ ಬಿಜೆಪಿ ನಾಯಕರು ಹಾವೇರಿಯಿಂದ ಶಿವಕುಮಾರ್ ಉದಾಸಿ, ಕೊಪ್ಪಳಯಿಂದ ಸಂಗಣ್ಣ ಕರಡಿ, ಬೆಳಗಾವಿಯಿಂದ ಮಂಗಳಾ ಅಂಗಡಿ, ಉತ್ತರ ಕನ್ನಡದಿಂದ ಅನಂತಕುಮಾರ್ ಹೆಗಡೆ, ಬಾಗಲಕೋಟಯಿಂದ ಪಿ.ಸಿ.ಗದ್ದಿಗೌಡರ, ವಿಜಯಪುರಯಿಂದ ರಮೇಶ ಜಿಗಜಿಣಗಿ ಅವರನ್ನು ಹೊರತುಪಡಿಸಿ ಲೋಕಸಭಾ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಗಳ ಹುಡುಕಾಟ ನಡೆಸಿದ್ದಾರೆ. ಮಧ್ಯ ಕರ್ನಾಟಕದ ದಾವಣಗೆರೆ ಕ್ಷೇತ್ರಕ್ಕೂ ಅಭ್ಯರ್ಥಿಗಳು ಸಿಗುತ್ತಿಲ್ಲ ಎಂಬುವುದು ಕಮಲ ಪಡೆಯ ನಿದ್ದೇ ಕೆಡಿಸಿದೆ. ಹೀಗಾಗಿ ಯಾರನ್ನು ಕಣಕ್ಕೆ ಇಳಿಸಬೇಕೆಂಬ ಚಿಂತನೆ ನಡೆಸುತ್ತಿರುವ ಬಿಜೆಪಿ ಮತ್ತೊಮ್ಮೆ ಅಡಕತ್ತಿನಲ್ಲಿ ಸಿಕ್ಕ ಅಡಿಕೆಯಂತಾಗಿದೆ.

ಒಟ್ಟಿನಲ್ಲಿ ಬಿಜೆಪಿ ಕಾರ್ಯಾತಂತ್ರ ವಿಧಾನಸಭಾ ಚುನಾವಣೆಯಂತೇ ಲೋಕಸಭಾ ಚುನಾವಣೆಯಲ್ಲಿಯೂ ಕೈ ಕೊಟ್ಟರೇ ನಿಜಕ್ಕೂ ಬಹುದೊಡ್ಡ ಮುಖಭಂಗವಾಗುವುದಂತೂ ಈ ನಿಟ್ಟಿನಲ್ಲಿ ಹೊಸ ಅಭ್ಯರ್ಥಿಗಳ ಹುಡುಕಾಟದೊಂದಿಗೆ ಚುನಾವಣೆ ಎದುರಿಸುವ ಸವಾಲನ್ನು ಕಮಲ ಪಡೆಯ ಮುಂದಿದೆ. ಹಾಗಿದ್ದರೇ ಯಾರಿಗೆ ಸಿಗಲಿದೆ ಟಿಕೆಟ್ ಏನಿದೇ ಕಾರ್ಯತಂತ್ರ ಎಂಬುವುದನ್ನು ಕಾದುನೋಡಬೇಕಿದೆ.

ಸಂಗಮೇಶ್ ಸತ್ತಿಗೇರಿ , ಕರ್ನಾಟಕ ಟಿವಿ, ಹುಬ್ಬಳ್ಳಿ

ಸಿದ್ದರಾಮಯ್ಯ ಕೂಡ ಲುಂಗಿ ಲೀಡರ್ ಅನ್ನೋದನ್ನ ಮರೀಬೇಡಿ: ಕಾಂಗ್ರೆಸ್ ಪಂಚೆ ಟ್ವೀಟ್‌ಗೆ ಸಚಿವ ಪ್ರಲ್ಹಾದ ಜೋಶಿ ತಿರುಗೇಟು

ನಾಗರಹೊಳೆಯಲ್ಲಿ ಹುಲಿ-ಚಿರತೆ ಕಾದಾಟ.. ಚಿರತೆ ಸಾವು

ಕೇಳಿದಷ್ಟು ಹಣ ನೀಡದ್ದಕ್ಕೆ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಮಂಗಳಮುಖಿಯರು ಅರೆಸ್ಟ್

- Advertisement -

Latest Posts

Don't Miss