Monday, December 23, 2024

Latest Posts

ಕೆ.ಸಿ.ಎನ್.ಮೋಹನ್ ನಿಧನಕ್ಕೆ ಸಚಿವ ಶಿವರಾಜ್ ತಂಗಡಗಿ ಶೋಕ…

- Advertisement -

Movie News: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಮತ್ತು ವಿತರಕ ಕೆ ಸಿ ಎನ್ ಮೋಹನ್ ನಿಧನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಶೋಕ ವ್ಯಕ್ತಪಡಿಸಿದ್ದಾರೆ.

ಕನ್ನಡ ಚಲನಚಿತ್ರ ರಂಗದ ಅತ್ಯಂತ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಎಂದು ಹೆಸರಾಗಿದ್ದ ಕೆ ಸಿ ಎನ್ ಸಂಸ್ಥೆ ಕನ್ನಡದಲ್ಲಿ ದೊಡ್ಡ ಬಜೆಟ್ ಚಿತ್ರಗಳಿಗೆ ಮುನ್ನುಡಿ ಬರೆದಿತ್ತು.

ಕಸ್ತೂರಿ ನಿವಾಸ ,ಸನಾದಿ ಅಪ್ಪಣ್ಣ, ಬಬ್ರುವಾಹನ , ಜೂಲಿ ,ಜಯಸಿಂಹ, ಅಳಿಮಯ್ಯ ,ಪೊಲೀಸ್ ಪವರ್ ಹೀಗೆ ಈ ಸಂಸ್ಥೆಯ ಚಿತ್ರಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಕನ್ನಡದ ಪ್ರತಿಷ್ಠಿತ ವಿತರಕರು ಆಗಿ ಇವರು ಹೆಸರು ಮಾಡಿದ್ದರು. ಬೆಂಗಳೂರಿನ ಪ್ರತಿಷ್ಠಿತ ಚಿತ್ರಮಂದಿರಗಳಲ್ಲಿ ಒಂದಾಗಿದ್ದ ನವರಂಗ್ ಚಿತ್ರದ ಮಾಲೀಕರು ಸಹ ಆಗಿದ್ದ ಕೆಸಿಎನ್ ಮೋಹನ್ ಅವರ ಕುಟುಂಬವೇ ಕನ್ನಡ ಚಿತ್ರರಂಗಕ್ಕೆ ಮಹತ್ತರ ಸೇವೆ ಸಲ್ಲಿಸಿದೆ .

ಕೆ ಸಿ ಎನ್ ಮೋಹನ್ ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುವಂತಹ ಹೆಸರು . ಅವರ ನಿಧನದಿಂದ ಚಿತ್ರರಂಗ ಒಬ್ಬ ಅಪರೂಪದ ನಿರ್ಮಾಪಕನನ್ನ ಕಳೆದುಕೊಂಡಿದೆ.

ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಸಚಿವ ಶಿವರಾಜ್ ತಂಗಡಗಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಪಕ್ಷದ ಚೌಕಟ್ಟನಲ್ಲಿ ಮಾತನಾಡಲು ರೇಣುಕಾಚಾರ್ಯಗೆ ಹೇಳುವೆ: ಜೋಶಿ

ಹಾಸನದ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್: ಭಾರೀ ಅನಾಹುತದಿಂದ ಪಾರಾದ ನವಜಾತ ಶಿಶುಗಳು

ಬಾರದ ವರುಣನಿಗೆ ಇಲ್ಲ ಕರುಣೆ: ಹಣ ಕೊಟ್ಟು ನೀರು ಹಾಯಿಸುವಂತಾಯಿತು ರೈತನ ಕಷ್ಟದ ಬದುಕು..!

- Advertisement -

Latest Posts

Don't Miss