ಬೆಂಗಳೂರು: ಪ್ರತಿ ವರ್ಷ ಮಳೆ ಒಂದು ವಾರ ವಿಳಂಬವಾದರೆ ಕೃಷಿಗೆ ದೊಡ್ಡ ಸಮಸ್ಯೆಯಾಗುತ್ತದೆ. ಪ್ರತಿ ಜಿಲ್ಲೆಗೆ ಐವತ್ತು ಲಕ್ಷ ರೂ. ಬಿಡುಗಡೆ ಮಾಡಿ, ಶಾಸ್ವತ ಟಾಸ್ಕ್ ಫೋರ್ಸ್ ರಚನೆ ಮಾಡುವಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಅಲ್ಲಮ ಪ್ರಭು ಪಾಟೀಲ್ ಕೇಳಿದ ಪ್ರಶ್ನೆಗೆ ಬೆಂಬಲಿಸಿ ಮಾತನಾಡಿದ ಅವರು, ಪ್ರತಿ ವರ್ಷ ಒಂದು ವಾರ ಮಳೆ ವಿಳಂಬವಾದರೆ ಕೃಷಿ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
ರೈತರು ಬಿತ್ತನೆ ಮಾಡಿದರೂ ಮೊಳಕೆ ಒಡೆಯದಿದ್ದರೆ ಅದಕ್ಕೆ ವಿಮೆ ಕೂಡ ಬರುವುದಿಲ್ಲ.
ಹವಾಮಾನ ಇಲಾಖೆಯ ಮುನ್ಸೂಚನೆ ನಂಬಿ ಕೂಡಬೇಡಿ, ಅವರು ಮುಂದಿನ ಐದು ದಿನ ನಿರಂತರ ಮಳೆ ಅಂತ ಹೇಳಿದ್ದಾರೆ. ಆದರೆ, ಎಲ್ಲ ಕಡೆ ನಿರ್ಧಿಷ್ಟ ಮಳೆ ಆಗುತ್ತಿಲ್ಲ. ನೀವು ವಾಸ್ತವ ನೋಡಿ ಕೆಲಸ ಮಾಡಬೇಕು. ಅದಕ್ಕಾಗಿ ಶಾಸ್ವತ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು. ಅಲ್ಲದೇ ಪ್ರತಿ ಜಿಲ್ಲೆಗೂ ತಕ್ಷಣ ಐವತ್ತು ಲಕ್ಷ ರೂ.ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ರೇಷ್ಮೆ ಮತ್ತು ಹತ್ತಿಯ ಬಟ್ಟೆಗಳನ್ನೇ ಏಕೆ ಧರಿಸಬೇಕು..? ಇದಕ್ಕೂ ಇದೆ ಆಧ್ಯಾತ್ಮಿಕ ಕಾರಣ..
ಹಿಂದೂಗಳಲ್ಲಿ ಹಸುವಿನ ಜೊತೆ ಶ್ವಾನಕ್ಕೂ ಪ್ರಾಶಸ್ತ್ಯ ನೀಡಲಾಗಿದೆ.. ಯಾಕೆ ಗೊತ್ತಾ..?