ಚೆನೈ:ಆರೋಪಿಗಳಿಂದ ವಶಪಡಿಸಿಕೊಂಡಿರುವ ಗಾಂಜಾವನ್ನು ಎರಡು ವರ್ಷಗಳ ಹಿಂದೆ ದಾಸ್ತಾನಿನಲ್ಲಿ ಶೇಖರಿಸಿ ಇಡಲಾಗಿತ್ತು . ನಂತರ ಖೈದಿಗಳನ್ನು ಕೋರ್ಟಿಗೆ ಹಾಜರುಪಡಿಸುವಾಗ ದಾಸ್ಥಾನು ತೆಗೆದು ನೊಡಿದಾಗ ಅಲ್ಲಿ ಗಾಂಜಾ ಕಾಣೆಯಾಗಿತ್ತು ಇಷ್ಟೊಂದು ಪ್ರಮಾಣದ ಗಾಂಜಾ ಎಲ್ಲಿ ಹೋಯಿತು ಎಂಬ ಅನುಮಾನದಿಂದ ಸರಿಯಾಗ ನೋಡಿದಾಗ ಗಾಂಜಾವನ್ನು ಇಲಿಗಳು ತಿಂದಿರುವುದು ಗೊತ್ತಾಗಿದೆ.
2020 ನವೆಂಬರೆ 27 ರಂದು ಚೆನೈ ಮರೀನಾ ಬೀಚ್ ಮುಟ್ಟುಕುಪ್ಪಂ ನಲ್ಲಿಗಾಂಜಾ ಮಾರಾಟ ಮಾಡುತಿದ್ದ ಇಬ್ಬರು ಆರೋಪಿ ಗಳಾದ ಕೇ ನಾಗೇಶ್ವರ್ ಮತ್ತು ರಾಜ್ ಗೋಪಾಲ್ 22 ಕೆಜಿ ಗಾಂಜಾ ಸಮೇತ ಮರೀನಾ ಠಾಣಾ ಪೋಲಿಸರು ವಶಪಡಿಸಿಕೊಂಡಿದ್ದರು. ನಂತರ ಎನ್ ಡಿಪಿಎಸ್ ಕೋರ್ಟ್ ನ ನ್ಯಾಯಾಧಿಶರು ಠಾಣಿಯಲ್ಲಿ ವಸ್ತುಗಳನ್ನು ಜೇವಬ್ದಾರಿಯಿಂದ ನೋಡಿಕೊಳ್ಳಲಾಗದೆ ಬೇಜವಬ್ದಾರಿ ತೋರಿ ಗಾಂಜಾವನ್ನು ಇಲಿಗಳು ತಿಂದಿವೆ ಎಂದು ಹೇಳುತಿದ್ದೀರಲ್ಲ ಇದೇನಾ ನೀವು ಮಾಡುವ ಕೆಲಸ ಎಂದು ಕೆಂಡಾಮಂಡಲವಾಗಿದ್ದಾರೆ.
ನ್ಯಾಯಾಲಯದಲ್ಲಿ ನ್ಯಾಯಧೀಶರು ಖೈದಿಗಳ ವಿಚಾರಣೆ ನಡೆಸಲು ಶಾಕ್ಷಿ ಕೇಳಿದಾಗ ಗಾಂಜಾವನ್ನು ಇಲಿ ತಿಂದಿರುವ ಘಟನೆಯಿಂದ ಸರಿಯಾದ ಸಾಕ್ಷಿ ಇಲ್ಲದ ಕಾರಣ ಪ್ರಕರಣವನ್ನು ಖೂಲಾಸೆಗೊಳಿಸಿ ಆರೋಪಿಗಳನ್ನು ಬಿಡುಗಡೆ ಮಾಡಿದ್ದಾರೆ.
Annabhagya Yojana : 3ನೇ ಗ್ಯಾರಂಟಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅಧಿಕೃತ ಚಾಲನೆ
Laxmi Hebbalkar : ನೊಂದ ಮಹಿಳೆಗೆ ಕೇವಲ ಐದು ಗಂಟೆಗಳ ಒಳಗೆ ವಿಧವಾ ವೇತನ ಮಂಜೂರು ಮಾಡಿಸಿದ ಸಚಿವೆ..!
chennai
marina beach