ವಿಧಾನಮಂಡಲ ಅಧಿವೇಶನದಲ್ಲಿ ಇಂದು 200 ಯುನೀಟ್ ವರೆಗೆ ವಿದ್ಯುತ್ ಉಚಿತ ನೀಡುವ ಕುರಿತು ಸದನದಲ್ಲಿ ಪ್ರತಿದಿನ 80 ಯುನಿಟ್ ಕರೆಂಟ್ ಬಳೆಸುವವರಿಗೆ ಕೆವಲ 80 ಯುನೀಟ್ ವರೆಗೆ ಮಾತ್ರ ಉಚಿತ ಎಂದು ಹೇಳುವಾಗ ಮಧ್ಯ ಪ್ರವೇಶಿಸಿದ ವಿಪಕ್ಷ ನಾಯಕರು ತಂಟೆ ತೆಗೆದರು ನಂತರ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿಗಳಿಗೆ ನೀವು ಅಡೆಜ್ಸ್ಟಮೆಂಟ್ ರಾಜಕಾರಣ ,ಮಾಡುತಿದ್ದೀರಿ ಎಂದಾಗ ಸಿಎಂ ಸಿದ್ದರಾಮಯ್ಯ ಸದನದಲ್ಲೇ ತಿರುಗೇಟು ನೀಡಿದ್ದಾರೆ.
ತಾವು ಹಲವಾರು ವರ್ಷಗಳ ಕಾಲ ವಿರೋಧ ಪಕ್ಷದಲ್ಲಿದ್ದರೂ ಯಾವುದೇ ಪಕ್ಷ ಅಥವಾ ಸರ್ಕಾರದೊಂದಿಗೆ ಅಡ್ಜಸ್ಟ್ ಮೆಂಟ್ ರಾಜಕಾರಣ ಮಾಡಿಲ್ಲ ಎಂದು ಹೇಳಿದ ಸಿದ್ದರಾಮಯ್ಯ ಅಂಥ ಒಂದೇ ಒಂದು ನಿದರ್ಶನ ತೋರಿಸಿದರೆ ಕೂಡಲೇ ರಾಜಕೀಯದಿಂದ ನಿವೃತ್ತಿ ಘೋಷಿಸುವುದಾಗಿ ಹೇಳಿದರು.
ಬಳಿಕ ಗೃಹ ಜ್ಯೋತಿ ಯೋಜನೆ ಬಗ್ಗೆ ಮಾತಾಡಿದ ಮುಖ್ಯಮಂತ್ರಿ ಎರಡು ನೂರು ಯೂನಿಟ್ ವರೆಗೆ ವಿದ್ಯುತ್ ಉಚಿತ ಅಂತ ಹೇಳಿದ್ದೇವೆ, ಒಂದು ಕುಟುಂಬ ಸರಾಸರಿ 199 ಯೂನಿಟ್ ಬಳಸುತ್ತಿದ್ದರೆ ಆ ಕುಟುಂಬಕ್ಕೆ ಅಷ್ಟು ಯೂನಿಟ್ ವರೆಗೆ ವಿದ್ಯುತ್ ಉಚಿತ ಸಿಗುತ್ತದೆ, ಹಾಗೆಯೇ 80 ಯೂನಿಟ್ ಬಳಸುವವರಿಗೆ 80 ಯೂನಿಟ್ ಮಾತ್ರ ಉಚಿತ ಸಿಗುತ್ತದೆ ಎಂದು ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ಇನ್ನೇನು ಕೆಲವೆ ದಿನಗಳಲ್ಲಿ ಉಚಿತ ವಿದ್ಯುತ್ ರಾಜ್ಯದ ಜನರು ಫಲ ಪಡೆಯಲಿದ್ದಾರೆ.
Hareesh Acharya : ಖ್ಯಾತ ವಕೀಲರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ