ಹುಬ್ಬಳ್ಳಿ;ಇನಸ್ಟಾಗ್ರಾಂ ವಿಚಾರಕ್ಕೆ ಯುವಕನ ಬೆತ್ತಲೆ ಹಲ್ಲೆ ಪ್ರಕರಣದ ಬೆನ್ನಲ್ಲೇ ಬೆಂಡಿಗೇರಿ ಪೊಲೀಸ್ ಠಾಣೆ ಇನ್ಸಪೆಕ್ಟರ್ ಅವರನ್ನು ಮಹಿಳಾ ಪೊಲೀಸ್ ಠಾಣೆಗೆ OOD ಮೂಲಕ ಎತ್ತಂಗಡಿ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಹೌದು.. ಬೆಂಡಿಗೇರಿ ಪೊಲೀಸ್ ಠಾಣೆಯಿಂದ ಮಹಿಳಾ ಪೊಲೀಸ್ ಠಾಣೆಗೆ ಇನ್ಸ್ಪೆಕ್ಟರ್ ಬಿ.ಟಿ ಬುಡ್ನಿ ನಿಯೋಜನೆ ಮಾಡಿ ಪೊಲೀಸ್ ಕಮೀಷನರ್ ಸಂತೋಷ್ ಬಾಬು ಆದೇಶ ಮಾಡಿದ್ದಾರೆ. ಓಓಡಿ ಮೂಲಕ ಬೆಂಡಿಗೇರಿ ಪೊಲೀಸ್ ಠಾಣೆ ಇನ್ಸಪೆಕ್ಟರ್ ಪಿ.ಐ ಬುಡ್ನಿ ಮಹಿಳಾ ಪೊಲೀಸ್ ಠಾಣೆಗೆ ನಿಯೋಜನೆ ಮಾಡಲಾಗಿದೆ.
ಇನ್ನೂ ಮಹಿಳಾ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಜಯಪಾಲ್ ಪಾಟೀಲ್ ಬೆಂಡಿಗೇರಿ ಪೊಲೀಸ್ ಠಾಣೆಗೆ ನಿಯೋಜನೆ ಮಾಡಿದ್ದು, ಕಳೆದ ನಾಲ್ಕು ತಿಂಗಳ ಹಿಂದೆ ನಡೆದ ಘಟನೆಯಾಗಿದ್ದರೂ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದಿರಲಿಲ್ಲ.ಮಾಧ್ಯಮಗಳಲ್ಲಿ ಸುದ್ದಿ ಭಿತ್ತರವಾದ ಬಳಿಕ ಎಚ್ಚೆತ್ತ ಬೆಂಡಿಗೇರಿ ಪೊಲೀಸರು,
ಇದಲ್ಲದೆ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಇನ್ಸಪೆಕ್ಟರ್ ವಿಫಲವಾಗಿರುವ ಹಿನ್ನೆಲೆಯಲ್ಲಿ ಕಮೀಷನರ್ ಆದೇಶ ಮಾಡಿದ್ದಾರೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೇ ಯುವಕನಿಗೆ ಬೆತ್ತಲೆಯಾಗಿ ಥಳಿಸಲಾಗಿತ್ತು. ಇನ್ ಸ್ಟಾದಲ್ಲಿ ಬೈದ ಎನ್ನುವ ಕಾರಣಕ್ಕೆ ಸಂದೀಪ್ ಗೆ ಥಳಿಸಲಾಗಿತ್ತು. ಅಲ್ಲದೇ ಠಾಣಾ ವ್ಯಾಪ್ತಿಯಲ್ಲಿ ನಡೆಯೋ ರೌಡಿ ಚಟುವಟಿಕೆ ಬ್ರೇಕ್ ಹಾಕಲು ಪೊಲೀಸ್ ಇನ್ಸಪೆಕ್ಟರ್ ಗಳ ಬದಲಾವಣೆ ಮಾಡಲಾಗಿದೆ.