Friday, November 22, 2024

Latest Posts

ಸಿದ್ದು ಪಟ್ಟು.. ಸೋನಿಯಾಗೆ ಇಕ್ಕಟ್ಟು.. ಡಿಕೆಶಿಗೆ ಸಿಟ್ಟು..!

- Advertisement -

ಕರ್ನಾಟಕ ಟಿವಿ : ಅಮಿತ್ ಶಾ ಅಂಡ್ ಟೀಂ ಅವಿನೇರವಾಗಿ ಎಷ್ಟೇ ಹಾವಳಿ ಇಟ್ರು ಕನಕಪುರ ಬಂಡೆ ಸ್ವಲ್ಪವೂ ಕಂಗಾಲಾಗಲೇ ಇಲ್ಲ.. ಡಿಕೆಶಿ ಎಂಟೆದೆ ಬಂಟನ ಧೈರ್ಯವನ್ನ ದೇಶದ ಮೋದಿ ವಿರೋಧಿಗಳೆಲ್ಲಾ ಕೊಂಡಾಡಿದ್ದಾರೆ.. ಸೋನಿಯಾ, ರಾಹುಲ್ ಕೂಡ ಡಿಕೆಶಿ ತಾಕತ್ತು ಕಂಡು ಹೌದೌದು ಎಂದಿದ್ದಾರೆ.. ಇಷ್ಟೆಲ್ಲಾ ಶಕ್ತಿಶಾಲಿ ಶಿವಕುಮಾರ್ ಇನ್ನೇನೋ ಕೆಪಿಸಿಸಿ ಅಧ್ಯಕ್ಷರಾಗೇ ಬಿಟ್ರು ಅಂತ ರಾಜ್ಯಾದ್ಯಂತ ಡಿಕೆಶಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.. ಆದ್ರೆ, ಕಾಂಗ್ರೆಸ್ ಹೈಕಮಾಂಡ್ ಮಾತ್ರ ಸಿದ್ದರಾಮಯ್ಯ ಕೊಟ್ಟ ಖಡಕ್ ಎಚ್ಚರಿಕೆಗೆ ಬೆಚ್ಚಿಬಿದ್ದಿದೆ.. ಸಿದ್ದರಾಮಯ್ಯ ಸಮಾಧಾನ ಮಾಡೋದು ಕಷ್ಟಅಂತ  ತಿಳಿದ ಸೋನಿಯಾ ಇದೀಗ ಡಿಕೆಶಿಗೆ ರೆಡಿಯಾಗಿರುವ ಕಿರೀಟವನ್ನ ಮತ್ತೊಬ್ಬರಿಗೆ ತೊಡಿಸಲು ಆಲೋಚನೆ ಮಾಡ್ತಿದ್ದಾರೆ.  ಸಿದ್ದರಾಮಯ್ಯ ಸಿಟ್ಟು ಕಡಿಮೆಯಾಗದಿದ್ರೆ  ಮಲ್ಲಿಕಾರ್ಜುನ ಖರ್ಗೆ ಅಥವಾ ಕೃಷ್ಣ ಭೈರೇಗೌಡ ಗೆ ಕೆಪಿಸಿಸಿ ಪಟ್ಟ ಅನಿರೀಕ್ಷಿತವಾಗಿ ಒಲಿಯುವ ಸಾಧ್ಯತೆ ಇದೆ.

ನಾನು ಕೆಪಿಸಿಸಿ ಪಟ್ಟಕ್ಕೆ ಬೇಡಿಕೆ ಇಟ್ಟಿಲ್ಲ, ಬೇಡಿ ಪಡೆಯೋದು ನನ್ನ ಜಾಯಮಾನವಲ್ಲ..!

ಮೋದಿ ಮತ್ತು ಅಮಿತ್ ಶಾ ಎದುರು ಹಾಕಿಕೊಳ್ಳಲು ದೇಶದಲ್ಲಿ ಪ್ರಭಾವಿ ರಾಜಕಾರಣಿಗಳೆ ಹಿಂದು ಮುಂದು ನೋಡುವಾಗ ಡಿಕೆ ಶಿವಕುಮಾರ್ ಹಲು ಬಾರಿ ಅಮಿತ್ ಶಾ ಗೆ ಶಾ ಕ್ ಕೊಟ್ಟು ಕಾಂಗ್ರೆಸ್ ಪಕ್ಷದ ಮಾನ ಮರ್ಯಾದೆ ಕಾಪಾಡಿದ್ದಾರೆ.. ಕಾಂಗ್ರೆಸ್ ಕಷ್ಟಕಾಲದಲ್ಲಿ ನನ್ನ ಸಹಾಯ ಬೇಕಾಗಿತ್ತು.. ಇದೀಗ ನನಗೆ ಅಧಿಕಾರ ಕೊಡುವಾಗ ಮತ್ತೊಬ್ಬರ ಮಾತಿಗೆ ಮನ್ನಣೆ ಕೊಡೋದು ಎಷ್ಟು ಸರಿ ಅಂತ ಡಿಕೆ ಶಿವಕುಮಾರ್ ಆಕ್ರೋಶ ಗೊಂಡಿದ್ದಾರೆ.. ಸಿದ್ದರಾಮಯ್ಯ ಕಡೆ ಗಳಿಗೆಯಲ್ಲಿ ಮನ ಪರಿವರ್ತನೆಗೊಂಡು ಡಿಕೆ ಶಿವಕುಮಾರ್ ಬೆಂಬಲಿಸಿದ್ರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುವ ಸಾಧ್ಯತೆ ಇದೆ.. ಒಂದು ವೇಳೆ ಡಿಕೆಶಿ-ಸಿದ್ದರಾಮಯ್ಯ ಕಾಳಗದಲ್ಲಿ ಬೇರೊಬ್ಬರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೂತರೆ ಕನಕಪುರದ ಬಂಡೆ ಕಾಂಗ್ರೆಸ್ ಪಕ್ಷದಲ್ಲಿ ಸೈಲೆಂಟ್ ಆಗೋದು ಗ್ಯಾರಂಟಿ..

ನಿಮ್ಮ ಪ್ರಕಾರ ಡಿಕೆ ಶಿವಕುಮಾರ್ ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ಮುಂದಿನ ಚುನಾವಣೆಯಲ್ಲಿ ಸಿಎಂ ಆಗ್ತಾರಾ..? ಈ ಬಗ್ಗೆ ನಿಮ್ಮಅಭಿಪ್ರಾಯ ಕಾಮೆಂಟ್ ಮಾಡಿ..

- Advertisement -

Latest Posts

Don't Miss