Tuesday, December 10, 2024

Latest Posts

Political News: ಈ ಮನೆ ಯಜಮಾನಿಯರಿಗೆ ಇನ್ಮುಂದೆ ಗೃಹಲಕ್ಷ್ಮೀ ಇಲ್ಲ

- Advertisement -

Political news: ಬಿಪಿಎಲ್ ಕಾರ್ಡ್ ಹೊಂದಲು ಯಾರ್ಯಾರು ಅರ್ಹರಲ್ಲವೋ ಅಂಥವರ ಬಿಪಿಎಲ್ ಕಾರ್ಡ್‌ ರದ್ದು ಮಾಡಲಾಗಿದೆ. ಅದೇ ರೀತಿ ಇದೀಗ ತೆರಿಗೆ ಕಟ್ಟುವವರ ಮನೆಯ ಲಕ್ಷ್ಮೀಯರಿಗೆ ಗೃಹಲಕ್ಷ್ಮೀ ಸಿಗುವುದಿಲ್ಲವೆಂದು ಮಹಿಳಾ ಮತತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಸಚಿವೆ ಹೆಬ್ಬಾಳ್ಕರ್, ಎಪಿಎಲ್ ಅಥವಾಾ ಬಿಪಿಎಲ್ ಕಾರ್ಡ್ ಹೊಂದಿರುವ ಯಾರೇ ಆದರೂ, ಅವರು ತೆರಿಗೆ ಕಟ್ಟದೇ ಇದ್ದಲ್ಲಿ ಅಂಥವರಿಗೆ ಗೃಹಲಕ್ಷ್ಮೀ ಹಣ ಸಿಗುತ್ತದೆ ಎಂದಿದ್ದಾರೆ. ಅಲ್ಲದೇ, ಯಾರ್ಯಾರ ಬಿಪಿಎಲ್ ಕಾರ್ಡ್ ರದ್ದಾಗಿದೆಯೋ, ಅಂಥವರು ಎಪಿಎಲ್ ಕಾರ್ಡ್ ಹೊಂದಿದ್ದು, ತೆರಗಿ ಕಟ್ಟದೇ ಇದ್ದರೆ, ಅವರಿಗೂ ಗೃಹಲಕ್ಷ್ಮೀ ಹಣ ಸಿಗುತ್ತದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಇನ್ನು ಈ ಸ್ಪಷ್ಟನೆ ನೀಡಲು ಕಾರಣವೇನೆಂದರೆ, ಬಿಪಿಎಲ್ ಕಾರ್ಡ್ ರದ್ದಾಗಿರುವವರಿಗೆ, ಗೃಹಲಕ್ಷ್ಮೀ ಹಣ ಕೂಡ ಸಿಗುವುದಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಹೀಗಾಗಿ ಜನರಿಗೆ ಈ ಬಗ್ಗೆ ಆತಂಕವಿತ್ತು. ಹಾಗಾಗಿ ಸಚಿವರು ಸ್ಪಷ್ಟನೆ ನೀಡಿದ್ದಾರೆ.

- Advertisement -

Latest Posts

Don't Miss