Thursday, December 12, 2024

Latest Posts

ಅಪ್ಪನನ್ನು ನೆನೆದು ಮಗಳ ಹುಟ್ಟುಹಬ್ಬ ಆಚರಿಸಿದ ನಟಿ ಐಶ್ವರ್ಯಾ ರೈ

- Advertisement -

Bollywood News: ಬಾಲಿವುಡ್ ನಟಿ, ಕರ್ನಾಟಕದ ಮಗಳು ಐಶ್ವರ್ಯಾ ರೈ ಮಗಳು ಆರಾಧ್ಯ ಕೆಲ ದಿನಗಳ ಹಿಂದಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅಮ್ಮನ ಮನೆಯಲ್ಲೇ ಆರಾಧ್ಯಾ ಬರ್ತ್‌ಡೇ ಆಚರಿಸಿಕೊಂಡಿದ್ದು, ಈ ವೇಳೆ ಐಶ್ವರ್ಯಾ ಅವರ ತೀರಿಹೋಗಿರುವ ತಂದೆ ಕೃಷ್ಣ ರಾಜ್‌ ರೈ ಅವರನ್ನು ಸ್ಮರಿಸಿದ್ದು, ಅವರ ಆಶೀರ್ವಾದ ಪಡೆಯುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದಾರೆ.

ಇನ್ನು ಆರಾಧ್ಯಾ ಆಗಲಿ, ಐಶ್ವರ್ಯಾ ಆಗಲಿ, ಅಥವಾ ಅವರ ತಾಯಿಯಾಗಲಿ, ಸಿಂಪಲ್ ಆಗಿ ಉಡುಗೆ ತೊಟ್ಟು ಬರ್ತ್‌ಡೇ ಆಚರಿಸಿದ್ದಾರೆ. ಹೀಗಾಗಿ ನೆಟ್ಟಿಗರು, ಇಷ್ಟು ಸಿಂಪಲ್ ಆಗಿ ಹುಟ್ಟುಹಬ್ಬ ಆಚರಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಮಗಳ ಬರ್ತ್‌ಡೇಗೆ ಅಭಿಷೇಕ್ ವಿಶ್ ಮಾಡಿಲ್ಲ ಅಂತಾ ಹೇಳಲಾಗುತ್ತಿದೆ. ಬಚ್ಚನ್‌ ಕುಟುಂಬದವರು ಯಾರೂ ಕೂಡ, ಆರಾಧ್ಯ ಬರ್ತ್‌ಡೇ ಪಾರ್ಟಿಯಲ್ಲಿ ಭಾಗಿಯಾಗಿಲ್ಲವೆಂದು ಹೇಳಲಾಗುತ್ತಿದೆ.

ಕೆಲ ದಿನಗಳ ಹಿಂದಷ್ಟೇ ಅವಾರ್ಡ್ ಫಂಕ್ಷನ್ ಒಂದರಲ್ಲಿ ಆರಾಧ್ಯ ಕನ್ನಡ ನಟ ಡಾ.ಶಿವರಾಜ್‌ಕುಮಾರ್ ಅವರನ್ನು ಕಂಡು ಕಾಲು ಮುಟ್ಟಿ ನಮಸ್ಕಾರ ಮಾಡಿದ್ದರು. ಈ ವೇಳೆ ಆರಾಧ್ಯ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮಾಜಿ ವಿಶ್ವ ಸುಂದರಿಯಾಗಿದ್ದರೂ, ಐಶ್ವರ್ಯಾಾ ತಮ್ಮ ಮಗಳಿಗೆ ಸಂಸ್ಕಾರ ಹೇಳಿಕೊಟ್ಟಿದ್ದಾರೆಂದು ನೆಟ್ಟಿಗರು ಮೆಚ್ಚುಗೆ ಹೊರಹಾಕಿದ್ದರು.

- Advertisement -

Latest Posts

Don't Miss