State News: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವರು ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿರುವ ಶ್ರೀಮತಿ ಪ್ರೇಮ ಕೋದಂಡರಾಮ ಶೆಟ್ಟಿಯವರನ್ನು ಭೇಟಿಯಾದರು.
ಪ್ರೇಮ ಕೋದಂಡರಾಮ ಅವರು ನಿರಂತರ ಸಾಮಾಜಿಕ ಕಳಕಳಿಯ ಅನೇಕ ಕಾರ್ಯಗಳಲ್ಲಿ ತಮ್ಮನ್ನು ತಾವು ನಿರತರಾಗಿಸಿದವರು. ಇವರ ಸಾಮಾಜಿಕ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿವೆ. ಪ್ರೇಮ ಶೆಟ್ಟಿ ಅವರನ್ನು ಭೇಟಿಯಾಗಿ ಶೋಭಾ ಕರಂದ್ಲಾಜೆ ಮೋದಿ ಸರಕಾರದ ಜನಪರ ಕಾರ್ಯಗಳ ಬಗ್ಗೆ ಚರ್ಚಿಸಿದರು. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಈ ರೀತಿಯಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಕ್ಷೇತ್ರದಲ್ಲಿನ ತಮ್ಮ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ, ಶ್ರೀಮತಿ ಪ್ರೇಮ ಕೋದಂಡರಾಮ ಶೆಟ್ಟಿಯವರನ್ನು ಇಂದು ಜುಲೈ15 ಅವರ ನಿವಾಸದಲ್ಲಿ ಭೇಟಿಯಾಗಲಾಯಿತು. ಇವರ ಜೊತೆ ಪ್ರಧಾನಿ ಯವರ ಸರ್ಕಾರದ ಜನಪರ ಕೆಲಸಗಳ ಮಾಹಿತಿಗಳನ್ನು ಹಂಚಿಕೊಳ್ಳಲಾಯಿತು.
ಸಾಮಾಜಿಕ ಕ್ಷೇತ್ರದಲ್ಲಿನ ತಮ್ಮ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ, ಶ್ರೀಮತಿ ಪ್ರೇಮ ಕೋದಂಡರಾಮ ಶೆಟ್ಟಿಯವರನ್ನು ಇಂದು ಅವರ ನಿವಾಸದಲ್ಲಿ ಭೇಟಿಯಾಗಲಾಯಿತು.
ಇವರ ಜೊತೆ ಪ್ರಧಾನಿ @narendramodi ಯವರ ಸರ್ಕಾರದ ಜನಪರ ಕೆಲಸಗಳ ಮಾಹಿತಿಗಳನ್ನು ಹಂಚಿಕೊಳ್ಳಲಾಯಿತು.#SKinConstituency #SamparkSeSamarthan pic.twitter.com/r82KArADFB
— Shobha Karandlaje (@ShobhaBJP) July 15, 2023



