ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಅಂಗನವಾಡಿ ಸಹಾಯಕಿ-14 ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಏ. 17 ಕೊನೆಯ ದಿನವಾಗಿದೆ.


 ಹುದ್ದೆ ಹಾಗೂ ಮೀಸಲಾತಿ ವಿವರ ಇಂತಿದೆ.

ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಕಕ್ಕೆಹರವು (ಪ.ಜಾ), ಮಹಾದೇವನಕಟ್ಟೆ (ಇತರೆ), ಕಸವನಹಳ್ಳಿ-ಎ (ಇತರೆ), ಹೊಸಮಾಳಿಗೆ (ಪ.ಪಂ), ಎಂ.ಕೆ ಹಟ್ಟಿ-ಬಿ (ಪ.ಜಾ), ಮಾಡನಾಯಕನಹಳ್ಳಿ-ಎ (ಇತರೆ), ಜಾಲಿಕಟ್ಟೆ ಗೊಲ್ಲರಹಟ್ಟಿ (ಇತರೆ), ಕಳ್ಳಿಹಟ್ಟಿ (ಪ.ಜಾ), ಚೇಳುಗುಡ್ಡ-ಡಿ (ಇತರೆ), ಮಂಡಕ್ಕಿಭಟ್ಟಿ-ಬಿ (ಇತರೆ), ದಾವಣಗೆರೆ ಟೋಲ್‍ಗೇಟ್ (ಇತರೆ), ಕವಾಡಿಗರಹಟ್ಟಿ-ಎ (ಇತರೆ), ಮಾರುತಿನಗರ-ಎ (ಪ.ಜಾ), ಡಿ.ಐ.ಸಿ ಹಿಂಭಾಗ (ಇತರೆ)ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆನ್‍ಲೈನ್   ನಲ್ಲಿ ಅರ್ಜಿ ಸಲ್ಲಿಸಬಹುದು.  


  ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಜಿಲ್ಲಾ ಬಾಲಭವನ ಆವರಣ, ಜಿಲ್ಲಾ ಕ್ರೀಡಾಂಗಣ ಚಿತ್ರದುರ್ಗ ಇವರನ್ನು ಸಂಪರ್ಕಿಸಬಹುದು ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author